HEALTH TIPS

'ವಂದೇ ಮಾತರಂ' ವಿವಾದ: ಸೋನಿಯಾ ಗಾಂಧಿ ಕ್ಷಮೆಯಾಚನೆಗೆ ಬಂಕಿಮಚಂದ್ರ ವಂಶಸ್ಥರ ಆಗ್ರಹ

ಕೋಲ್ಕತ್ತ: ಸ್ವತಂತ್ರ ಭಾರತದ ನೆಲದಲ್ಲಿ 'ವಂದೇ ಮಾತರಂ' ಗೀತೆಯನ್ನು ಪೂರ್ಣವಾಗಿ ಹಾಡಲು ಹಿಂದೇಟು ಹಾಕಿರುವುದು ರಾಷ್ಟ್ರಪ್ರೇಮಕ್ಕೆ ಹಾಗೂ ಹುತಾತ್ಮರ ತ್ಯಾಗಕ್ಕೆ ಎಸಗಿದ ಅಪಮಾನ ಎಂದು ಬಿಜೆಪಿ ಶಾಸಕ, ಬಂಕಿಮಚಂದ್ರ ಚಟ್ಟೋಪಾಧ್ಯಾಯ ಅವರ ವಂಶಸ್ಥ ಸುಮಿತ್ರೋ ಚಟರ್ಜಿ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಕಿಡಿಕಾರಿದ್ದಾರೆ. 


ಇದೇ ವೇಳೆ ಸೋನಿಯಾ ಗಾಂಧಿ ಅವರು ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ. 

ಸ್ವಾತಂತ್ರ್ಯ ದಿನಾಚರಣೆಯಂದು ದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ 'ವಂದೇ ಮಾತರಂ' ಗೀತೆಯ ಪೂರ್ಣ ಆವೃತ್ತಿಯನ್ನು ಹಾಡುವುದನ್ನು ತಡೆಯಲು ಯತ್ನಿಸಲಾಯಿತು.ಮಅಲ್ಲಿ ಅಸಮಾಧಾನದ ವಾತಾವರಣವಿತ್ತು ಎಂದು ಆರೋಪಿಸಿ ಸುಮಿತ್ರೋ ಚಟರ್ಜಿ ಅವರು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.

1937ರಲ್ಲಿ ಕಾಂಗ್ರೆಸ್ ಪಕ್ಷವು ಮಹಮ್ಮದ್ ಅಲಿ ಜಿನ್ನಾ ಅವರ ಆಕ್ಷೇಪಣೆಗೆ ಮಣಿದು ಗೀತೆಯನ್ನು ತುಂಡರಿಸಿತ್ತು. ಈಗಿನ ನಡವಳಿಕೆಯು ಅದೇ ರಾಜಿ ತತ್ವದ ಪುನರಾವರ್ತನೆಯಾಗಿದೆ ಎಂದು ಚಟರ್ಜಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ರಾಷ್ಟ್ರೀಯ ಗೀತೆಯು ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಅನೇಕ ವೀರರ ತ್ಯಾಗಕ್ಕೆ ಸ್ಫೂರ್ತಿಯಾಗಿತ್ತು. ಅದನ್ನು ಪೂರ್ಣವಾಗಿ ಗೌರವಿಸದಿರುವುದು ಹುತಾತ್ಮರಿಗೆ ಮಾಡುವ ಅಪಮಾನ ಎಂದಿದ್ದಾರೆ.

ಈ ಘಟನೆಯು ಪಶ್ಚಿಮ ಬಂಗಾಳದ ಜನರ ಭಾವನೆಗಳಿಗೆ ತೀವ್ರ ನೋವುಂಟು ಮಾಡಿದೆ. 'ವಂದೇ ಮಾತರಂ' ಯಾವುದೇ ಒಂದು ರಾಜಕೀಯ ಪಕ್ಷದ ಸ್ವತ್ತಲ್ಲ, ಅದು ಇಡೀ ದೇಶದ ಸಾಂಸ್ಕೃತಿಕ ಪರಂಪರೆ ಎಂದು ಸುಮಿತ್ರೋ ಚಟರ್ಜಿ ಪ್ರತಿಪಾದಿಸಿದ್ದಾರೆ.

ಸೋನಿಯಾ ಗಾಂಧಿ ಅವರು ಈ ವಿಷಯದ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು, ದೇಶದ ಜನರಿಗೆ ಮತ್ತು ವಿಶೇಷವಾಗಿ ಪಶ್ಚಿಮ ಬಂಗಾಳದ ಜನತೆಯಲ್ಲಿ ಕ್ಷಮೆಯಾಚಿಸಬೇಕು ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries