ಕಾಸರಗೋಡು: ಮೊಗ್ರಾಲ್ ಪುತ್ತೂರಿನಲ್ಲಿ ಸ್ನೇಹಿತರ ಜತೆಗೆ ಕೆರೆಯಲ್ಲಿ ಸ್ನಾನಕ್ಕಿಳಿದ ವಲಸೆ ಕಾರ್ಮಿಕ ರಾಜಸ್ಥಾನ ಜೈಪುರ ಈದ್ರ ದಿಲ್ಲಿ ರಸ್ತೆ ಬಳಿಯ ಅಲ್ ಫೈದ್ ಫರ್ದೀನ್ ಖಾನ್ (23)ನೀರಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ.
ಮೊಗ್ರಾಲ್ ಪುತ್ತೂರಿಗೆ ಸಮೀಪದ ಉಜಿರೆಕೆರೆ ಬಳಿಯ ಫ್ಲಾಟ್ ಒಂದರಲ್ಲಿ ಇತರ ವಲಸೆ ಕಾರ್ಮಿಕರೊಂದಿಗೆ ವಾಸಿಸುತ್ತಿದ್ದು, ಶುಕ್ರವಾರ ಅಲ್ಲೇ ಸನಿಹದ ಕೆರೆಗೆ ಸ್ನಾನಕ್ಕಿಂದು ಸ್ನೇಹಿತರ ಜತೆ ಫರ್ದೀನ್ ಖಾನ್ ನೀರಿಗಿಳಿದಿದ್ದು, ಈಜುಬಾರದೆ ನೀರಲ್ಲಿ ಮುಳುಗಿದ್ದಾರೆ. ತಕ್ಷಣ ಕಾಸರಗೋಡು ಅಗ್ನಿಶಾಮಕ ದಳ ತಕ್ಷಣ ಸ್ಥಳಕ್ಕಾಗಮಿಸಿ ಅಲ್ ಫೈದ್ ಫರ್ದೀನ್ ಖಾನ್ರನ್ನು ಕೆರೆಯಿಂದ ಮೇಲಕ್ಕೆತ್ತಿ ಜನರಲ್ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಕಾಸರಗೋಡು ನಗರಠಾಣೆ ಪೆÇಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.


