HEALTH TIPS

ರಂಗ ಚೇತನದಿಂದ ಓಣಂ ಕುಟುಂಬ ಸಂಗಮ

ಕುಂಬಳೆ: ರಂಗಾಸಕ್ತ ಕನ್ನಡ ಅಧ್ಯಾಪಕರ ಒಕ್ಕೂಟವಾದ ರಂಗಚೇತನ ಕಾಸರಗೋಡು ವತಿಯಿಂದ ಓಣಂ ಕುಟುಂಬ ಸಂಗಮವನ್ನು ಏರ್ಪಡಿಸಲಾಯಿತು. ಪೆರ್ಮುದೆ ಬಿ.ಪಿ.ಪಿ.ಎ.ಎಲ್.ಪಿ. ಶಾಲೆಯಲ್ಲಿ ಸಂಘಟನೆಯ ಸದಸ್ಯರು ಮತ್ತು ಮನೆಯವರು ಈ ಸೌಹಾರ್ದಕೂಟವನ್ನು ಏರ್ಪಡಿಸಿದ್ದರು. ಬೆಳಗ್ಗೆ ಹೂ ರಂಗೋಲಿ ಮತ್ತು ಸದಸ್ಯರಿಗೆ  ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.


ಕಾರ್ಯಕ್ರಮವನ್ನು ಪ್ರಸಿದ್ಧ ಮದರ್ ನೇಚರ್ ಚಿತ್ರಕಲಾವಿದ ವಿಶ್ವಾಸ್ ಮತ್ತು ಧರ್ಮತ್ತಡ್ಕ ಶಾಲೆಯ ಪ್ರಬಂಧಕ ಶಂಕರನಾರಾಯಣ ಭಟ್ ಉದ್ಘಾಟಿಸಿದರು. ರಂಗ ಚೇತನ ಸದಸ್ಯ ಪ್ರಸಾದ್ ಮಾಸ್ತರ್ ಮುಗು ಅವರ ಸಂಗ್ರಹದ ವಸ್ತು ಪ್ರದರ್ಶನವನ್ನು ಕುಡಾಲ್ ಮೇರ್ಕಳ ಶಾಲೆಯ ನಿವೃತ್ತ ಅಧ್ಯಾಪಕ ಖಾದರ್ ಮಾಸ್ತರ್ ಉದ್ಘಾಟಿಸಿದರು. ಮಧ್ಯಾಹ್ನ ಓಣಂ ಭೋಜನವನ್ನು ಏರ್ಪಡಿಸಲಾಯಿತು. ಮೆಲ್ವಿನ್ ಮತ್ತು ದಿವಾಕರ ಬಲ್ಲಾಳ್ ಅವರಿಂದ ಸಂಗೀತ ಭೋಜನ ನಡೆಯಿತು.

ಸಮಾರೋಪದಲ್ಲಿ ಸಂಘಟನೆಯ ಅಧ್ಯಕ್ಷ ಯತೀಶ್ ಕುಮಾರ್ ರೈ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯೋಪಾಧ್ಯಾಯಿನಿ ಲೋಲಾಕ್ಷಿ ಟೀಚರ್, ಮೂಡಂಬೈಲು ಶಾಲಾ ಮುಖ್ಯೋಪಾಧ್ಯಾಯ ಸಂಜೀವ ಮಾಸ್ತರ್ ಬಹುಮಾನ ವಿತರಿಸಿದರು. ಶಾಲಾ ಮುಖ್ಯೋಪಾಧ್ಯಾಯ ಹಾಗೂ ಕಾರ್ಯಕ್ರಮದ ಸಂಚಾಲಕ ಸದಾಶಿವ ಬಾಲಮಿತ್ರ, ವಸಂತ ಮೂಡಂಬೈಲು, ಪ್ರಮೀಳಾ ಮಾಡೂರು, ಶಿವ ಪ್ರಸಾದ್ ಚೆರುಗೋಳಿ, ಅಶೋಕ ಕೊಡ್ಲಮೊಗರು, ರಾಜಕುಮಾರ್ ಕಾಟುಕುಕ್ಕೆ, ಗುರುರಾಜ್ ಕೋಳ್ಯೂರು ಉಪಸ್ಥಿತರಿದ್ದರು. ಕಾರ್ಯದರ್ಶಿ ಗೋಪಾಲ ಕಾಟುಕುಕ್ಕೆ ಸ್ವಾಗತಿಸಿ, ಶಿವರಾಮ ಕಾಟುಕುಕ್ಕೆ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries