HEALTH TIPS

ಪ್ರಯಾಣಿಕರೇ ಎಚ್ಚರ: ಹಲವು ರೈಲು ನಿಲ್ದಾಣಗಳ ಕುಡಿಯುವ ನೀರಿನಲ್ಲಿ ಬ್ಯಾಕ್ಟೀರಿಯಾ

ನವದೆಹಲಿ: ದೇಶದ ಹಲವು ರೈಲು ನಿಲ್ದಾಣಗಳ ವಾಟರ್ ಕೂಲರ್‌ಗಳಿಂದ ಸಂಗ್ರಹಿಸಲಾದ ಕುಡಿಯುವ ನೀರಿನ ಮಾದರಿಗಳಲ್ಲಿ 'ಇ. ಕೊಲಿ'(E. coli) ಬ್ಯಾಕ್ಟೀರಿಯಾ ಪತ್ತೆಯಾಗಿದೆ ಎಂದು ಕಂಟ್ರೋಲರ್ ಅಂಡ್ ಆಡಿಟರ್ ಜನರಲ್(ಸಿಎಜಿ) ವರದಿ ತಿಳಿಸಿದೆ. 


ರೈಲು ನಿಲ್ದಾಣಗಳ ಶೌಚಾಲಯಗಳಲ್ಲಿಯೂ ಸ್ವಚ್ಛತೆಯ ಕೊರತೆ ಕಂಡುಬಂದಿದೆ ಎಂದು ಲೆಕ್ಕಪರಿಶೋಧಕರು ಹೇಳಿದ್ದಾರೆ.

ದೇಶದಾದ್ಯಂತದ ಎಲ್ಲ ವಲಯಗಳಲ್ಲಿನ 512 ನಿಲ್ದಾಣಗಳಲ್ಲಿ ಪ್ರಯಾಣಿಕರ ಸೇವೆಗಳನ್ನು ಪರಿಶೀಲಿಸಿ ಈ ವರದಿ ನೀಡಲಾಗಿದೆ.

ದಕ್ಷಿಣ ರೈಲ್ವೆ ವಲಯದ ಎರಡು ನಿಲ್ದಾಣಗಳು(ಕೊಯಮತ್ತೂರು ಮತ್ತು ಪಾಲಕ್ಕಾಡ್ ಜಂಕ್ಷನ್), ದಕ್ಷಿಣ ಮಧ್ಯ ರೈಲ್ವೆ ವಲಯದ ಒಂದು ನಿಲ್ದಾಣ (ಹೈದರಾಬಾದ್), ಮಧ್ಯ ರೈಲ್ವೆ ವಲಯದ ನಾಲ್ಕು ನಿಲ್ದಾಣಗಳು (ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ಭಿವಂಡಿ ರೋಡ್, ಕಲ್ಯಾಣ್ ಮತ್ತು ಲೋನಾವಾಲಾ) ಹಾಗೂ ಪೂರ್ವ ರೈಲ್ವೆ ವಲಯದ ಒಂದು ನಿಲ್ದಾಣದಲ್ಲಿ (ಮಧುಪುರ್) ವಾಟರ್ ಕೂಲರ್‌ನ ನೀರಿನ ಮಾದರಿಗಳಲ್ಲಿ 'ಇ. ಕೊಲಿ' ಇರುವುದು ದೃಢಪಟ್ಟಿದೆ ಎಂದು ವರದಿ ತಿಳಿಸಿದೆ.

'2022-23ರಲ್ಲಿ ಎಂಟು ವಲಯಗಳ 49 ನಿಲ್ದಾಣಗಳಲ್ಲಿ ಮತ್ತು 2023-24ರಲ್ಲಿ ಒಂಬತ್ತು ವಲಯಗಳ 56 ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್‌ಗಳ ನಲ್ಲಿಗಳಿಂದ ಸಂಗ್ರಹಿಸಲಾದ ಕುಡಿಯುವ ನೀರಿನ ಮಾದರಿಗಳ ಪರೀಕ್ಷಾ ಫಲಿತಾಂಶಗಳು 'ಟೋಟಲ್ ಕೋಲಿಫಾರ್ಮ್' ಬ್ಯಾಕ್ಟೀರಿಯಾಗಳ(ಇ. ಕೊಲಿ ಸೇರಿದಂತೆ) ಉಪಸ್ಥಿತಿ ಪತ್ತೆಯಾಗಿದೆ' ಎಂದು ವರದಿ ಹೇಳಿದೆ.

'ಇ. ಕೊಲಿ' ಬ್ಯಾಕ್ಟೀರಿಯಾದ ಕೆಲವು ತಳಿಗಳು ಅತಿಸಾರ ಮತ್ತು ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗಬಹುದು.

2022-23ರ ಅವಧಿಯಲ್ಲಿ ನಾಲ್ಕು ವಲಯಗಳ ಎಂಟು ನಿಲ್ದಾಣಗಳಲ್ಲಿ ಮತ್ತು 2023-24ರ ಅವಧಿಯಲ್ಲಿ ಐದು ವಲಯಗಳ 11 ನಿಲ್ದಾಣಗಳಲ್ಲಿ ಟೋಟಲ್ ಕೊಲಿಫಾರ್ಮ್‌' ಪರೀಕ್ಷೆಗಳನ್ನು ಹೊರತುಪಡಿಸಿ ಇತರ ಬ್ಯಾಕ್ಟೀರಿಯಾ ಸಂಬಂಧಿತ ಪರೀಕ್ಷೆಗಳ ಫಲಿತಾಂಶಗಳೂ ತೃಪ್ತಿಕರವಾಗಿಲ್ಲ ಎಂದೂ ತಿಳಿಸಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries