HEALTH TIPS

ಕ್ಯಾನ್ಸರ್ 'ಅಧಿಸೂಚಿತ ಕಾಯಿಲೆ' ಎಂದು ಘೋಷಿಸಿದ ಗೋವಾ ಸರ್ಕಾರ

ಪಣಜಿ: ಗೋವಾ ಸರ್ಕಾರವು ಕ್ಯಾನ್ಸರ್‌ ಅನ್ನು 'ಅಧಿಸೂಚಿತ ಕಾಯಿಲೆ' ಎಂದು ಘೋಷಿಸಿದೆ. ರಾಜ್ಯದ ಯಾವುದೇ ಆರೋಗ್ಯ ಕೇಂದ್ರ ಅಥವಾ ಪ್ರಯೋಗಾಲದ ಪರೀಕ್ಷೆ ವೇಳೆ ಯಾರಿಗಾದರೂ ಕ್ಯಾನ್ಸರ್‌ ಇರುವುದು ಪತ್ತೆಯಾದರೆ, ಕಡ್ಡಾಯವಾಗಿ ಸರ್ಕಾರಕ್ಕೆ ವರದಿ ಮಾಡಬೇಕು ಎಂದು ಅಧಿಕಾರಿಗಳು ಶನಿವಾರ ಸೂಚಿಸಿದ್ದಾರೆ.


ಆರೋಗ್ಯ ಇಲಾಖೆಯು ಆಗಸ್ಟ್‌ 20ರಂದೇ ಈ ಕುರಿತು ಅಧಿಸೂಚನೆ ಹೊರಡಿಸಿದೆ. ಈ ಕ್ರಮವು, ಕ್ಯಾನ್ಸರ್ ಪ್ರಕರಣಗಳ ಮೇಲೆ ವ್ಯವಸ್ಥಿತವಾಗಿ ನಿಗಾ ಇಡಲು, ದತ್ತಾಂಶ ಆಧಾರಿತವಾಗಿ ರೋಗ ನಿಯಂತ್ರಣ, ತಪಾಸಣೆ ಹಾಗೂ ಚಿಕಿತ್ಸಾ ಕಾರ್ಯಕ್ರಮಗಳ ಯೋಜನೆಗೆ ಅನುಕೂಲ ಮಾಡಿಕೊಡಲಿದೆ ಎಂದು ಹೇಳಿದ್ದಾರೆ.

ಕ್ಯಾನ್ಸರ್ ಪತ್ತೆಯಾದ ಏಳು ದಿನಗಳ ಒಳಗಾಗಿ ಆದ್ಯತೆಯ ಮೇರೆಗೆ ವರದಿ ಮಾಡಬೇಕು ಎಂಬುದಾಗಿ ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಎಲ್ಲ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು, ನರ್ಸಿಂಗ್ ಹೋಂಗಳು, ಕ್ಲಿನಿಕ್‌ಗಳು, ಅಂಕಾಲಜಿ (ಕ್ಯಾನ್ಸರ್ ರೋಗದ ಅಧ್ಯಯನ ಮತ್ತು ಚಿಕಿತ್ಸೆ ಕೇಂದ್ರ), ಡೇ ಕೇರ್‌ ಸೆಂಟರ್‌ಗಳು, ಪ್ರಯೋಗಾಲಯಗಳು, ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರ ಆರೈಕೆ ಕೇಂದ್ರಗಳು, ಪ್ಯಾಲಿಯೇಟಿವ್ ಕೇರ್ (ಉಪಶಮನ) ಕೇಂದ್ರಗಳು ಹಾಗೂ ಕ್ಯಾನ್ಸರ್ ತಪಾಸಣಾ ಕೇಂದ್ರಗಳಿಗೆ ಈ ನಿಯಮ ಅನ್ವಯವಾಗುತ್ತದೆ.

ಗಮನ ಹರಿಸಿ: ಐಸಿಎಂಆರ್‌ ವರದಿ

ಆರೋಗ್ಯ ಸೇವೆಗಳ ನಿರ್ದೇಶನಾಲಯದ (ಡಿಎಚ್‌ಎಸ್‌) ಸಾಂಕ್ರಾಮಿಕವಲ್ಲದ ರೋಗಗಳ ವಿಭಾಗವನ್ನು ಈ ಕಾರ್ಯಕ್ರಮದ ನೋಡಲ್ ಪ್ರಾಧಿಕಾರವಾಗಿ ನೇಮಿಸಲಾಗಿದೆ. ವರದಿಯಾದ ಪ್ರಕರಣಗಳನ್ನು ಕ್ರೋಢೀಕರಿಸಿ ಪರಿಶೀಲನೆ ನಡೆಸಲು, ವಿಶ್ಲೇಷಣೆ ಹಾಗೂ ಮೇಲ್ವಿಚಾರಣೆ ಕೈಗೊಳ್ಳಲು ರಾಜ್ಯ ಕ್ಯಾನ್ಸರ್ ನೋಂದಣಿ ಅಥವಾ ರಾಜ್ಯ ಕ್ಯಾನ್ಸರ್ ಕಣ್ಗಾವಲು ವ್ಯವಸ್ಥೆಯನ್ನು ಸ್ಥಾಪಿಸುವ ಹೊಣೆಯನ್ನು ಡಿಎಚ್‌ಎಸ್‌ಗೆ ವಹಿಸಲಾಗಿದೆ.

ಗೋವಾ ಸರ್ಕಾರದ ಕ್ರಮವನ್ನು ನ್ಯಾಷನಲ್‌ ಆರ್ಗನೈಸೇಷನ್‌ ಫಾರ್‌ ಟೊಬ್ಯಾಕೊ ಎರಡಿಕ್ಷನ್‌ (ಇಂಡಿಯಾ) ಸಂಸ್ಥೆ ಸ್ವಾಗತಿಸಿದೆ. 'ಕ್ಯಾನ್ಸರ್‌ ನಿಯಂತ್ರಣ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಕ್ರಮವು ಮಹತ್ವಪೂರ್ಣವಾಗಿದೆ. ‌ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದಲೂ ಅತ್ಯಗತ್ಯವಾದ ನಿರ್ಧಾರವಾಗಿದೆ' ಎಂದು ಸಂಸ್ಥೆಯ ಅಧ್ಯಕ್ಷ ಡಾ. ಶೇಖರ್ ಸಾಲ್ಕರ್ ಹೇಳಿದ್ದಾರೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries