ಪೆರ್ಲ: ಜಿಲ್ಲೆಯ ವಿವಿಧೆಡೆ ಶ್ರೀವರಮಹಾಲಕ್ಷ್ಮೀ ವ್ರತಾಚರಣೆ ಆ. 28ರಂದು ಜರುಗಲಿದೆ. ಪೆರ್ಲ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಲ್ತಿ)ವಿಷ್ಣುಮೂರ್ತಿ ದೇವಸ್ಥಾನದ ಶ್ರೀ ಉಳ್ಳಾಲ್ತೀ ಮಹಿಳಾ ಸಂಘದ ವತಿಯಿಂದ ಹತ್ತನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆ ಆ. 28ರಂದು ಬೆಳಗ್ಗೆ 9.30ರಿಂದ ಇಡಿಯಡ್ಕ ಕ್ಷೇತ್ರದಲ್ಲಿ ಜರುಗಲಿದೆ.
ಸ್ವರ್ಗದ ಪಡ್ರೆ ಮಲೆತ್ತಡ್ಕ ಶ್ರೀ ಜಟಾಧಾರಿ ಮೂಲಸ್ಥಾನ ಮಾತೃ ಸಮಿತಿ ಆಶ್ರಯದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಆ. 28ರಂದು ಮಧ್ಯಾಹ್ನ 1.30ರಿಂದ ಆರಂಭಗೊಳ್ಳಲಿದೆ.

