ಉಪ್ಪಳ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಉಪ್ಪಳದ ವ್ಯಾಪಾರಿ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವತಿ ನಾಪತ್ತೆಯಾಗಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಪೈವಳಿಕೆ ಆಜಾದ್‍ನಗರ ನಿವಾಸಿ ಫಾತಿಮತ್ ಮಕ್ಸಾನ್ (19) ನಾಪತ್ತೆಯಾದ ಯುವತಿ.
ಮನೆಯಿಂದ ಕೆಲಸಕ್ಕೆಂದು ಉಪ್ಪಳಕ್ಕೆ ತೆರಳಿದ್ದ ಈಕೆ ಸಂಜೆಯಾದರೂ ಮನೆಗೆ ವಾಪಸಾಗದಿರುವ ಬಗ್ಗೆ ಯುವತಿ ತಾಯಿ ನೀಡಿದ ದೂರಿನನ್ವಯ ಮಂಜೇಶ್ವರ ಠಾಣೆ ಪೆÇಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.


