ಮಲಪ್ಪುರಂ: ಮಲಪ್ಪುರಂನಿಂದ ಅಕ್ರಮ ಸ್ಫೋಟಕಗಳನ್ನು ವಶಪಡಿಸಿಕೊಂಡ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ನಿರ್ಣಾಯಕ ಬಂಧನ ದಾಖಲಿಸಿದೆ. ಪ್ರಕರಣದ ಪ್ರಮುಖ ಮಾಸ್ಟರ್ ಮೈಂಡ್ ಹ್ಯಾರಿಸ್ ಟಿ.ಎ. ಎಂಬವನನ್ನು ಬಂಧಿಸಲಾಗಿದೆ. ಆರೋಪಿಯನ್ನು ಮಂಜೇರಿಯಿಂದ ಬಂಧಿಸಲಾಗಿದೆ ಎಂದು ವರದಿಯಾಗಿದೆ. ಹ್ಯಾರಿಸ್ ನನ್ನು ಶನಿವಾರ ಎನ್.ಐ.ಎ ಬಂಧಿಸಿದೆ.
ಅಕ್ರಮ ಸ್ಫೋಟಕ ಖರೀದಿಯಲ್ಲಿ ಹ್ಯಾರಿಸ್ ಪ್ರಮುಖ ಪಾತ್ರ ವಹಿಸಿದ್ದ ಎಂದು ಎನ್.ಐ.ಎ ಪತ್ತೆಮಾಡಿದೆ. ಹ್ಯಾರಿಸ್ ಅಕ್ರಮ ಸಂಘಟನೆ ಮತ್ತು ಸ್ಫೋಟಕಗಳ ವಿತರಣೆಯಲ್ಲಿ ಭಾಗಿಯಾಗಿದ್ದ ಎಂದು ಎನ್.ಐ.ಎ ಹೇಳಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ರಾಜ್ಯಗಳಲ್ಲಿ 19 ಸ್ಥಳಗಳಲ್ಲಿ ಇದಕ್ಕೂ ಮೊದಲು ಶೋಧ ನಡೆಸಲಾಗಿತ್ತು.
ಈ ಪ್ರಕರಣದಲ್ಲಿ ಕರ್ನಾಟಕದಿಂದ ಮೂವರನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಹ್ಯಾರಿಸ್ ಬಂಧನದೊಂದಿಗೆ, ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಹತ್ತಕ್ಕೆ ಏರಿದೆ.
ಫೆಬ್ರವರಿ 7 ರಂದು, ಚೆಮ್ಮಡ್-ತಲಪಾರ ರಸ್ತೆಯಲ್ಲಿರುವ ಹಾಲೋ ಬ್ರಿಕ್ಸ್ ಕಂಪನಿಯ ಆವರಣದಲ್ಲಿ ನಿಲ್ಲಿಸಲಾಗಿದ್ದ ಲಾರಿಯಿಂದ ಪೋಲೀಸರು ದೊಡ್ಡ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದರು. 89,600 ಡಿಟೋನೇಟರ್ ಸ್ಟಿಕ್‍ಗಳು ಮತ್ತು 10,500 ವಿದ್ಯುತ್ ಆಘಾತ ರಹಿತ ಟ್ಯೂಬ್‍ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ನಂತರ ಪ್ರಕರಣವನ್ನು ಸ್ಥಳೀಯ ಪೋಲೀಸರಿಂದ ಎನ್.ಐ.ಎ.ಗೆ ನೀಡಲಾಗಿತ್ತು.

