ಕಣ್ಣೂರು: ಕ್ರಿಮಿನಲ್ ಪ್ರಕರಣದ ಆರೋಪಿ ಅರ್ಜುನ್ ಅಯಂಕಿ ಯನ್ನು ಕೂತುಪರಂಬ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಬಂಧನಕ್ಕೆ ಒಳಪಡಿಸಿದೆ. 14 ದಿನಗಳ ಕಾಲ ಬಂಧನ ವಿಧಿಸಲಾಗಿದೆ. ಕಣ್ಣೂರು ಸೈಬರ್ ಪೋಲೀಸರು ದಾಖಲಿಸಿರುವ ಪ್ರಕರಣದಲ್ಲಿ ಬಂಧನಕ್ಕೊಳಪಡಿಸಲಾಗಿದೆ.
ಕಣ್ಣೂರಿನ ತಾಳಿಕ್ಕಾವುವಿನ ಅಪಾರ್ಟ್ಮೆಂಟ್ನಲ್ಲಿ ಸ್ನೇಹಿತನೊಂದಿಗೆ ತಂಗಿದ್ದಾಗ ಪೋಲೀಸರು ಆತನನ್ನು ಬಂಧಿಸಿದ್ದಾರೆ. ಪೋಲೀಸರು ಆತನನ್ನು ಬೆನ್ನಟ್ಟಿ ಹಿಡಿದು ಬಂಧಿಸಿದ್ದಾರೆ. ಬೆಳಗಿನ ಜಾವ 2 ಗಂಟೆ ಸುಮಾರಿಗೆ ಆತನನ್ನು ಬಂಧಿಸಲಾಗಿದೆ.
ಪೋಲೀಸರು ರಾಜ್ಯದ ಒಳಗೆ ಮತ್ತು ಹೊರಗೆ ಅರ್ಜುನ್ ಅಯಂಕಿಗಾಗಿ ವ್ಯಾಪಕ ಹುಡುಕಾಟ ನಡೆಸಿದ್ದರು. ಇತ್ತೀಚಿನ ದಿನಗಳಲ್ಲಿ ಅರ್ಜುನ್ ಅಯಂಕಿ ಬೇರೆ ಬೇರೆ ವಾಹನಗಳನ್ನು ಬಳಸಿ, ತನ್ನ ಮೊಬೈಲ್ ಪೋನ್ ಬಳಸಿ ತನಿಖಾ ತಂಡವನ್ನು ದಾರಿ ತಪ್ಪಿಸುತ್ತಿದ್ದ.

