HEALTH TIPS

ಚಾಯ್‌ವಾಲಾಸ್‌ ಸಂಸ್ಥಾಪಕ ರೋಹಿತ್‌ ಶರ್ಮಾ ಆತ್ಮಹತ್ಯೆ

ಜೈಪುರ: 'ಚಾಯ್‌ವಾಲಾಸ್‌' ಸಂಸ್ಥೆಯ ಸಂಸ್ಥಾಪಕ ರೋಹಿತ್‌ ಶರ್ಮಾ (30) ಅವರು ದೌಸಾದಲ್ಲಿನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ರೋಹಿತ್‌, ಶನಿವಾರ ಸಂಜೆ ತಮ್ಮ ಕೊಠಡಿಯಲ್ಲಿ ನೇಣು ಹಾಕಿಕೊಂಡಿದ್ದು, ಪೋಷಕರು ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆದರೆ, ಅಷ್ಟರಲ್ಲಾಗಲೇ ರೋಹಿತ್‌ ಮೃತಪಟ್ಟಿ ರುವುದಾಗಿ ವೈದ್ಯರು ತಿಳಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ಏನು ಎಂಬುದರ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ ಎಂದೂ ಪೊಲೀಸರು ಹೇಳಿದ್ದಾರೆ.

ತಮ್ಮ 17ನೇ ವಯಸ್ಸಿನಲ್ಲೇ 'ಚಾಯ್‌ವಾಲಾಸ್‌' ನವೋದ್ಯಮ ಸ್ಥಾಪಿ ಸಿದ ರೋಹಿತ್‌, ವಿವಿಧ ನಗರಗಳಲ್ಲಿ 7 ಮಳಿಗೆ ತೆರೆದಿದ್ದರು. ಆದರೆ, ಆರು ತಿಂಗಳ ಹಿಂದೆ ಎಲ್ಲಾ ಮಳಿಗೆ ಮುಚ್ಚಿ, ಅಧ್ಯಾತ್ಮದತ್ತ ಮುಖ ಮಾಡಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries