ಬದಿಯಡ್ಕ: ಸೇವಾ ಭಾರತಿ ಬದಿಯಡ್ಕ ಪಂಚಾಯಿತಿ ಘಟಕದ ವತಿಯಿಂದ ಕನ್ಯಪ್ಪಾಡಿ ಆಶ್ರಯ ಆಶ್ರಮದಲ್ಲಿ ನಿವೃತ್ತ ಯೋಧ ಕೃಷ್ಣ ನಾಯ್ಕ್ ಮಲ್ಲಡ್ಕ ಅವರನ್ನು ಗೌರವಿಸಲಾಯಿತು. ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿ ತಮ್ಮ ವೃತ್ತಿ ಜೀವನದ ಅನುಭವಗಳನ್ನು ವಿವರಿಸಿದರು. ಮುಖ್ಯ ಅತಿಥಿಯಾಗಿ ಬಂದ ಅರವಿಂದ ಪೈ ಬದಿಯಡ್ಕ ದೀಪ ಪ್ರಜ್ವಲನೆ ಮಾಡುವ ಮೂಲಕ ಸಮಾರಂಭವನ್ನು ಉದ್ಘಾಟಿಸಿ ಸೇವಾ ಭಾರತಿ ನೀಡುವ ಜನೋಪಯೋಗಿಯಾದ ಸಮಾಜಮುಖಿ ಕಾರ್ಯಕ್ರಮಗಳನ್ನು ಅಭಿನಂದಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದವರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಸೇವಾ ಭಾರತಿಯ ಪದಾಧಿಕಾರಿಗಳು ಹಾಗೂ ಕಾಸರಗೋಡು ಜಿಲ್ಲಾ ಸೇವಾ ಭಾರತಿ ಕಾರ್ಯದರ್ಶಿ ಪ್ರತೀಕ್ ಆಳ್ವ, ಆರೆಸ್ಸೆಸ್ ಬದಿಯಡ್ಕ ಖಂಡ ಸಂಘಚಾಲಕ್ ರಮೇಶ್ ಕಳೇರಿ ಉಪಸ್ಥಿತಿರಿದ್ದರು. ಸೇವಾ ಭಾರತಿ ಅಧ್ಯಕ್ಷ ಸದಾಶಿವ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಗಣೇಶ್.ಬಿ ಸ್ವಾಗತಿಸಿ, ಕಾರ್ಯದರ್ಶಿ ರವೀಶ್ ಕುಮಾರ್ ವಂದಿಸಿದರು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

.jpg)
