HEALTH TIPS

ವಿಶ್ವಸಂಸ್ಥೆ ಸಾಮಾನ್ಯಸಭೆ: 26ಕ್ಕೆ ಜೈಶಂಕರ್‌ ಭಾಷಣ

ವಿಶ್ವಸಂಸ್ಥೆ (PTI): ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ವಿಶ್ವಸಂಸ್ಥೆ ಸಾಮಾನ್ಯಸಭೆಯ ಉನ್ನತ ಮಟ್ಟದ ವಾರ್ಷಿಕ ಅಧಿವೇಶನ ಉದ್ದೇಶಿಸಿ ಇದೇ 26ರಂದು ಮಾತನಾಡಲಿದ್ದಾರೆ. 


ಇದೇ 8ರಂದು ವಾರ್ಷಿಕ ಅಧಿವೇಶನಕ್ಕೆ ಚಾಲನೆ ಸಿಗಲಿದ್ದು, 28ರವರೆಗೂ ನಡೆಯಲಿದೆ.

ಜಗತ್ತಿನಲ್ಲಿ ಭೌಗೋಳಿಕ ರಾಜಕೀಯ ಸಂಘರ್ಷ ಉಲ್ಬಣಗೊಂಡಿರುವ ಸಂದರ್ಭದಲ್ಲಿ ನಡೆಯುತ್ತಿರುವ ಈ ಅಧಿವೇಶನ ಮಹತ್ವ ಪಡೆದಿದೆ.

ಗುಟೆರಸ್‌ಗೆ ಕೊನೆ ಅಧಿವೇಶನ: ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯ ದರ್ಶಿ ಆಂಟೊನಿಯೊ ಗುಟೆರಸ್ ಅವರಿಗೆ ಇದು ಕೊನೆಯ ವಾರ್ಷಿಕ ಅಧಿವೇಶನ. ಈ ವರ್ಷದ ಡಿಸೆಂಬರ್‌ಗೆ ಗುಟೆರಸ್ ಅವರ 2ನೇ ಅವಧಿ ಕೊನೆಗೊಳ್ಳಲಿದೆ. 22ರಂದು ಡೊನಾಲ್ಡ್ ಟ್ರಂಪ್‌ ಅವರು ಮಾತನಾಡಲಿದ್ದಾರೆ. ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷರಾದ ನಂತರ ವಿಶ್ವಸಂಸ್ಥೆಯ ಸಾಮಾನ್ಯಸಭೆ ಉದ್ದೇಶಿಸಿ ಅವರು ಮಾಡಲಿರುವ ಎರಡನೇ ಭಾಷಣ ಇದಾಗಿದೆ.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries