HEALTH TIPS

ಅಸ್ಸಾಂ: 30 ಟೋಕೆ ಹಲ್ಲಿಗಳ ರಕ್ಷಣೆ

ಗುವಾಹಟಿ: ಅಸ್ಸಾಂನ ಗೋಲಾಘಾಟ್‌ ಜಿಲ್ಲೆಯಲ್ಲಿ 30 ಟೋಕೆ ಹಲ್ಲಿಗಳನ್ನು (ಸರೀಸೃಪ) ರಕ್ಷಿಸಲಾಗಿದೆ ಮತ್ತು ಶಂಕಿತ ಕಳ್ಳಸಾಗಾಣಿಕೆದಾರನನ್ನು ಬಂಧಿಸಲಾಗಿದೆ ಎಂದು ಅರಣ್ಯ ಸಚಿವ ಜಯಂತ ಮಲ್ಲಾ ಬರುವಾ ತಿಳಿಸಿದ್ದಾರೆ.


ಕಾನೂನು ಪ್ರಕ್ರಿಯೆ ಬಳಿಕ ರಕ್ಷಿಸಲಾದ ಹಲ್ಲಿಗಳನ್ನು ಪುನಃ ಅರಣ್ಯಕ್ಕೆ ಬಿಡಲಾಗಿದೆ ಎಂದು ಹೇಳಿದ್ದಾರೆ. 

'ಗುಪ್ತಚರ ಮಾಹಿತಿಯ ಮೇರೆಗೆ ಬೋಕಾಖಾಟ್‌ ಅರಣ್ಯ ಇಲಾಖೆಯ ಸಿಬ್ಬಂದಿ ಸೆಪ್ಟೆಂಬರ್ 17ರಂದು ಕಾರ್ಯಾಚರಣೆ ನಡೆಸಿ ವನ್ಯಜೀವಿಗಳ ಕಳ್ಳಸಾಗಾಣಿಕೆಯನ್ನು ತಡೆದಿದ್ದಾರೆ' ಎಂದು ಜಯಂತ ಅವರು ತಿಳಿಸಿದ್ದಾರೆ.

ಸಾಗಣೆಯ ಮೂಲ ಮತ್ತು ಸರೀಸೃಪಗಳು ತಲುಪಬೇಕಿದ್ದ ಸ್ಥಳ ಹಾಗೂ ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳ ಪತ್ತೆಗಾಗಿ ತನಿಖೆ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

'ಅಸ್ಸಾಂ ವನ್ಯಜೀವಿಗಳು ಮಾರಾಟಕ್ಕಿಲ್ಲ. ವನ್ಯಜೀವಿಗಳ ಕಳ್ಳಸಾಗಣೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ' ಎಂದು ಹೇಳಿದ್ದಾರೆ.

ಒರಾಂಗುಟಾನ್‌ ಮರಿಗಳ ಆರೋಗ್ಯ ತಪಾಸಣೆ

ಭುವನೇಶ್ವರ: ನಂದನಕಾನನ ಜೈವಿಕ ಉದ್ಯಾನದಲ್ಲಿ ಕ್ವಾರಂಟೈನ್‌ನಲ್ಲಿ ಇರುವ ಐದು ಒರಾಂಗುಟಾನ್‌ ಮರಿಗಳ ಆರೋಗ್ಯವನ್ನು ತಾಂತ್ರಿಕ ತಂಡವೊಂದು ಪರಿಶೀಲಿಸಿತು. 'ದೆಹಲಿ ಮೃಗಾಲಯ ಮತ್ತು ಡೆಹ್ರಾಡೂನ್‌ನ ಭಾರತೀಯ ವನ್ಯಜೀವಿ ಸಂಸ್ಥೆಯ ಪಶುವೈದ್ಯಾಧಿಕಾರಿಗಳಾದ ಅಭಿಜಿತ್‌ ಭವಾಲ್‌ ಮತ್ತು ಕೃಷ್ಣ ಮುಲಿಯಾ ಅವರು ಕ್ವಾರಂಟೈನ್‌ ಘಟಕಕ್ಕೆ ಭೇಟಿ ನೀಡಿ ಒರಾಂಗುಟಾನ್‌ಗಳ ಆರೋಗ್ಯವನ್ನು ಪರಿಶೀಲಿಸಿದರು' ಎಂದು ಜೈವಿಕ ಉದ್ಯಾನವು ಹೇಳಿಕೆಯಲ್ಲಿ ತಿಳಿಸಿದೆ. 'ಒರಾಂಗುಟಾನ್‌ ಮರಿಗಳಿಗೆ ಆಹಾರ ನೀಡುವ ಕುರಿತು ಹಾಗೂ ಅವುಗಳ ಆರೋಗ್ಯ ಕಾಳಜಿ ಕುರಿತು ತಜ್ಞರು ಸಲಹೆ ನೀಡಿದರು' ಎಂದು ಹೇಳಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries