HEALTH TIPS

ರಾಯರ ತತ್ತ್ವಗಳು ಮತ್ತು ಅವರು ತೋರಿದ ಧರ್ಮದ ಹಾದಿ ಇಂದಿನ ಸಮಾಜಕ್ಕೆ ಅತ್ಯಂತ ಪ್ರಸ್ತುತ - ಶ್ರೀ ಕೃಷ್ಣ ಶಿವಕೃಪಾ ಕುಂಜತ್ತೂರು: ಮಂಜೇಶ್ವರದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 355 ನೇ ಆರಾಧನಾ ಮಹೋತ್ಸವದಲ್ಲಿ ಅಭಿಮತ

ಮಂಜೇಶ್ವರ: ರಾಯರ ತತ್ತ್ವಗಳು ಮತ್ತು ಅವರು ತೋರಿದ ಧರ್ಮದ ಹಾದಿ ಇಂದಿನ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿದೆ ಎಂದು ಧಾರ್ಮಿಕ ಸಾಮಾಜಿಕ ಮುಂದಾಳು ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು ನುಡಿದರು. 


ಅವರು ಮಂಜೇಶ್ವರ ಹೊಸಬೆಟ್ಟು ಜಮ್ಮದಮನೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ನಡೆದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 355 ನೇ ಆರಾಧನಾ ಮಹೋತ್ಸವದ ಸಂದೇಶ ನೀಡಿ ಮಾತನಾಡಿದರು. 

ಗುರು ರಾಘವೇಂದ್ರ ಸ್ವಾಮಿಗಳು ಜಾತಿ, ಮತ ಭೇದವಿಲ್ಲದೆ ಇಡೀ ಮಾನವಕುಲವನ್ನು ಹರಸುವ ಜಗದ್ಗುರುಗಳಾಗಿದ್ದಾರೆ. ಅವರ ಆದರ್ಶಗಳು ಮತ್ತು ಕೃತಿಗಳು ಸಮಾಜಕ್ಕೆ ಸದಾ ದಾರಿದೀಪ ಎಂದು ಅವರು ನುಡಿದರು.


ಶ್ರೀ ರಾಘವೇಂದ್ರ ಸ್ವಾಮಿಗಳ 355 ನೇ ಆರಾಧನಾ ಮಹೋತ್ಸವದ ಅಂಗವಾಗಿ ಪ್ರಧಾನ ಋತ್ವಿಜರಾದ ಯಾದವ ಶರ್ಮಾ ನೀರ್ಚಾಲ್ ಅವರ ಪೌರೋಹಿತ್ಯದಲ್ಲಿ ಶ್ರೀ ಗುರುರಾಯರ ವಿಶೇಷ ಪಾದಪೂಜೆ, ಮಹಾ ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಬಳಿಕ ನಡೆದ ಸರಳ ಸಮಾರಂಭದಲ್ಲಿ ಶಶಿಧರ ಶೆಟ್ಟಿ ಜಮ್ಮದ ಮನೆ (ಸುರತ್ಕಲ್), ಆಡಳಿತ ಮೊಕ್ತೇಸರರು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನ ಜಮ್ಮದಮನೆ ಹೊಸಬೆಟ್ಟು, ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್, ಮೀಂಜ ಗ್ರಾ.ಪಂ. ಮಾಜಿ ಅಧ್ಯಕ್ಷೆ ಸುಂದರಿ ಆರ್.ಶೆಟ್ಟಿ, ಬ್ಲಾ.ಪಂ.ಉಪಾಧ್ಯಕ್ಷೆ ಕಮಲಾಕ್ಷಿ ಕೆ.ಪಾವೂರು, ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಹೈಮೇಶ್ ಬಿ.ಎಂ, ಯಾದವ ಬಡಾಜೆ, ವಕೀಲ ನವೀನ್ ರಾಜ್ ಕೆ.ಜೆ., ಗುರುಸ್ವಾಮಿ ಉದಯ ಪಾವಳ, ಸುದರ್ಶನ ಕುಮಾರ್ ಜೈನ್, ತುಳಸಿದಾಸ್ ಮಂಜೇಶ್ವರ ಮೊದಲಾದವರು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭಾಸಂಶನೆಗೈದರು. ಈ ವೇಳೆ ರಂಗಭೂಮಿ ಕಲಾವಿದೆ, ಕನ್ನಡ-ತುಳು ಚಲನಚಿತ್ರ ನಟಿ, ನ್ಯಾಷನಲ್ ಫಿಲ್ಡ್ ಅವಾರ್ಡ್ ಪ್ರಶಸ್ತಿ ವಿಜೇತೆ ರೂಪಶ್ರೀ ವರ್ಕಾಡಿ ಮತ್ತು ರಾಯರ ಪರಮ ಭಕ್ತ, ಪ್ರಬುದ್ಧ ರಂಗ ಕಲಾವಿದ, ತುಳು-ಕನ್ನಡ, ಚಲನಚಿತ್ರ ನಟ, ನಿರ್ದೇಶಕ ಜೆ.ಪಿ.ತೂಮಿನಾಡ್ ಇವರಿಗೆ ಗೌರವಾರ್ಪಣೆ ನಡೆಯಿತು. ಜೊತೆಗೆ ಮಕ್ಕಳ ಕಲಿಕೆಗಾಗಿ ಹಾಗೂ ಸಂಸ್ಕಾರಯುತ ಶಿಕ್ಷಣಕ್ಕಾಗಿ ಓಂ ಶ್ರೀ ರಾಘವೇಂದ್ರಾಯ ನಮಃ ಲೇಖನ ಮಾಲೆಯ ಅನಂತ ಕೋಟಿ ಅಷ್ಟಾಕ್ಷರ ಲೇಖನ ಯಜ್ಞದ ಪುಸ್ತಕವನ್ನು ಉಚಿತವಾಗಿ ನೀಡಲಾಯಿತು. ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಲತೀಫ್ ಮೀಯಪದವು ಕೊಡಮಾಡಿದ ದೇರಳಕಟ್ಟೆ ಖಾಸಗಿ ಆಸ್ಪತ್ರೆಯ ಉಚಿತ ಹೆಲ್ತ್ ಕಾರ್ಡ್ ವಿತರಣೆ ನಡೆಯಿತು. ರಾಯರ ಭಕ್ತರು ಮಂಜೇಶ್ವರದ ಸಂಸ್ಥಾಪಕ, ಪತ್ರಕರ್ತ ರತನ್ ಕುಮಾರ್ ಹೊಸಂಗಡಿ ಸ್ವಾಗತಿಸಿ,ರಾಯರ ಭಕ್ತರು ಮಂಜೇಶ್ವರದ ಸ್ಥಾಪಕರಾದ ರಾಜೇಶ್ ಕಡಂಬಾರು ವಂದಿಸಿದರು. ಪತ್ರಕರ್ತ ಜಯ ಮಣಿಯಂಪಾರೆ ನಿರೂಪಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries