HEALTH TIPS

ಭೀಕರ ಪ್ರವಾಹದ ಬೆನ್ನಲ್ಲೇ ಟಿಬೆಟ್‌ ನಲ್ಲಿ 5 ತೀವ್ರತೆಯ ಭೂಕಂಪನ

ಕಠ್ಮಂಡು:  ನೇಪಾಳದ ಗಡಿಯಲ್ಲಿರುವ ಟಿಬೆಟ್‌ ಪ್ರದೇಶದಲ್ಲಿ ಭೀಕರ ಪ್ರವಾಹ ಸಂಭವಿಸಿ ಒಂದು ವಾರ ಕಳೆದ ಬೆನ್ನಲ್ಲೇ ಗುರುವಾರ 5 ತೀವ್ರತೆಯ ಭೂಕಂಪನ ಸಂಭವಿಸಿದೆ.


ರಿಕ್ಟರ್‌ ಮಾಪಕದಲ್ಲಿ 5 ತೀವ್ರತೆ ದಾಖಲಾಗಿರುವ ಭೂಕಂಪವು 10 ಕಿ.ಮೀ ಆಳದಲ್ಲಿ ಸಂಭವಿಸಿದೆ ಎಂದು ಜರ್ಮನ್‌ ಭೂವಿಜ್ಞಾನ ಸಂಶೋಧನಾ ಕೇಂದ್ರ (GFZ) ತಿಳಿಸಿದೆ.

ಭೂಕಂಪದಿಂದ ಹಾನಿ ಅಥವಾ ಗಾಯಗಳಾದ ಬಗ್ಗೆ ತಕ್ಷಣದ ವರದಿಗಳು ಬಂದಿಲ್ಲ.

ಟಿಬೆಟ್‌ ನಲ್ಲಿ ಹಿಮನದಿ ಕುಸಿದು ಆಗಸ್ಟ್‌ 26ರಂದು ಭೀಕರ ಪ್ರವಾಹ ಸಂಭವಿಸಿತ್ತು. ನೇಪಾಳದ ಗಡಿಯ ಸಮೀಪದ ಪಟ್ಟಣಗಳು ಹಾಗೂ ಕಣಿವೆಗಳು ಪ್ರವಾಹದ ನೀರು ಮತ್ತು ಶಿಲಾಖಂಡರಾಶಿಗಳ ರಭಸಕ್ಕೆ ಕೊಚ್ಚಿಹೋಗಿದ್ದವು. ಈ ದುರಂತದ ಒಂದು ವಾರದ ಬಳಿಕ ಗುರುವಾರ ಭೂಕಂಪ ಸಂಭವಿಸಿದೆ.

ಗುರುವಾರದ ವೇಳೆಗೆ ನೇಪಾಳದಲ್ಲಿ ಕನಿಷ್ಠ 1,252 ಮಂದಿ ಮೃತಪಟ್ಟಿದ್ದು, 4,200ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಗಡಿಯಾಚೆ ಟಿಬೆಟ್‌ನಲ್ಲಿ ಮೃತಪಟ್ಟವರ ಸಂಖ್ಯೆ 21ಕ್ಕೆ ಏರಿದ್ದು, 541 ಮಂದಿ ನಾಪತ್ತೆಯಾಗಿದ್ದಾರೆ ಎಂದು ಚೀನಾ ತಿಳಿಸಿದೆ.

ಗಡಿ ದಾಟುವ ಮಾರ್ಗ ಪುನರಾರಂಭ:

ಪ್ರವಾಹದಲ್ಲಿ ನೀರು ಮತ್ತು ಶಿಲಾಖಂಡರಾಶಿಗಳ ರಭಸಕ್ಕೆ ಹಾನಿಗೊಳಗಾಗಿದ್ದ ಟಿಬೆಟ್‌ ನ ಗೈರಾಂಗ್ ಗಡಿ ದಾಟುವ ಮಾರ್ಗವನ್ನು ಚೀನಾ ಮತ್ತೆ ತೆರೆದಿದೆ. ಇದರಿಂದ ಭಾರಿ ಯಂತ್ರೋಪಕರಣಗಳು ಪ್ರವಾಹದಿಂದ ಹೆಚ್ಚು ಹಾನಿಗೊಳಗಾದ ಪ್ರದೇಶಗಳನ್ನು ಮೊದಲ ಬಾರಿಗೆ ತಲುಪಲು ಸಾಧ್ಯವಾಗಿದೆ.

ಮಳೆ, ಅಸ್ಥಿರ ಬಂಡೆಗಳು ಹಾಗೂ ವೇಗವಾಗಿ ಹರಿಯುತ್ತಿರುವ ನದಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿವೆ. ಇದರ ನಡುವೆಯೇ ಕಿರಿದಾದ ಪರ್ವತ ಕಮರಿಯಲ್ಲಿ ಅಗೆಯುವ ಯಂತ್ರಗಳು, ರಕ್ಷಣಾ ತಂಡಗಳು, ಶೋಧ ಕಾರ್ಯಕ್ಕೆ ತರಬೇತಿ ಪಡೆದ ನಾಯಿಗಳು ಹಾಗೂ ಜೀವ ಪತ್ತೆ ಸಾಧನಗಳನ್ನು ನಿಯೋಜಿಸಲಾಗಿದೆ ಎಂದು ಚೀನಾದ ಸರ್ಕಾರಿ ಪ್ರಸಾರ ಸಂಸ್ಥೆ ಸಿಸಿಟಿವಿ ವರದಿ ಮಾಡಿದೆ.

ಪ್ರವಾಹದಿಂದ ಸಮತಟ್ಟಾದ ಪ್ರದೇಶದಲ್ಲಿರುವ ತಪಾಸಣಾ ಕಟ್ಟಡ, ವಾಹನ ನಿಲುಗಡೆ ಸ್ಥಳಗಳು ಹಾಗೂ ವಸತಿ ನಿಲಯಗಳ ಸುತ್ತಮುತ್ತ ರಕ್ಷಣಾ ಕಾರ್ಯಕರ್ತರು ಆಳವಾದ ಶೋಧ ನಡೆಸುತ್ತಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳ ಮಾಹಿತಿ ಆಧರಿಸಿ 'ಟಿಬೆಟ್ ಡೈಲಿ' ವರದಿ ಮಾಡಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries