HEALTH TIPS

ಕಾಸರಗೋಡು ನೆಲ್ಲಿಕುಂಜೆ ಕ್ಷೇತ್ರದಲ್ಲಿ ಬ್ರಹ್ಮಶ್ರೀನಾರಾಯಣಗುರು ಜಯಂತಿ

ಕಾಸರಗೋಡು: ಬ್ರಹ್ಮಶ್ರೀ ನಾರಾಯಣಗುರುಗಳ 172ನೇ ಜಯಂತ್ಯುತ್ಸವ ಕಾರ್ಯಕ್ರಮ ಕಾಸರಗೋಡು ನೆಲ್ಲಿಕುಂಜೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಜರುಗಿತು. ಶ್ರೀ ನಾರಾಯಣ ಧರ್ಮ ಸೇವಾ ಸಂಘ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.


ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 'ಗುರು ಪೂಜೆ' ಮತ್ತು ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಜರುಗಿತು. ಸಂಘದ ಅಧ್ಯಕ್ಷ ಎನ್. ಸತೀಶ್  ಧ್ವಜಾರೋಹಣ ನಡೆಸಿದರು. ಮಂಡಳಿಯ ಹಿರಿಯ ಸದಸ್ಯ ಮುಕುಂದನ್ ಅವರು ಬ್ರಹ್ಮಶ್ರೀ ನಾರಾಯಣಗುರುಗಳ ಸಂದೇಶ ನೀಡಿದರು.  ಸಮಾರಂಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಅನೀಶ್ ಹಾಗೂ ಉಪಾಧ್ಯಕ್ಷ ಗಣೇಶ್ ಪರಕಟ್ಟೆ ಉಪಸ್ಥಿತರಿದ್ದರು.

ಸಮಿತಿಯ ಕಾರ್ಯದರ್ಶಿ ಮಹೇಶ್, ಪದಾಧಿಕಾರಿಗಳಾದ ಉಮೇಶ್, ಆರ್.ಪಿ. ರಮೇಶ್ ಬಾಬು, ನಿರ್ಮಲಾ ಉಪೇಂದ್ರನ್, ನಿರ್ಮಲಾ ಅಚ್ಯುತನ್ ಮತ್ತು ಸುಮಿತ್ರಾ, ಆಚರಣಾ ಸಮಿತಿಯ ಅಧ್ಯಕ್ಷ, ಧಾರ್ಮಿಕ ಮುಖಂಡ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ಅರವಿಂದನ್, ಸುನಿಲ್, ಬಿಜೇಶ್, ಸುಕೀರ್ತಿ, ಶರತ್ ರಮೇಶ್ ಮೊದಲಾದವರು ಸಮರಂಭದಲ್ಲಿಪಾಲ್ಗೊಂಡಿದ್ದರು.   ಕಾರ್ಯದರ್ಶಿ ಮಹೇಶ್ ಸ್ವಾಗತಿಸಿದರು. ಸುಕೀರ್ತಿ ವಂದಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries