HEALTH TIPS

AK-203 ರೈಫಲ್‌ಗೆ ಮದ್ದುಗುಂಡು ಪೂರೈಕೆ: ಒಪ್ಪಂದಕ್ಕೆ ಅದಾನಿ ಡಿಫೆನ್ಸ್ ಸಹಿ

 ನವದೆಹಲಿ: ಭಾರತದಲ್ಲಿ ತಯಾರಾಗುತ್ತಿರುವ ಎಕೆ-203 ಆಸಾಲ್ಟ್ ರೈಫಲ್‌ಗಳಿಗೆ ದೇಶೀಯವಾಗಿ ತಯಾರಿಸಿದ 7.62x39 ಮಿಮೀ ಮದ್ದುಗುಂಡುಗಳನ್ನು ಪೂರೈಸಲು ಅದಾನಿ ಡಿಫೆನ್ಸ್ ಮತ್ತು ಏರೊಸ್ಪೇಸ್‌ ಸಂಸ್ಥೆಯು ಇಂಡೋ-ರಷ್ಯನ್ ರೈಫಲ್ಸ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಐದು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ. 


ಈ ಒಪ್ಪಂದದ ಅಡಿಯಲ್ಲಿ ಅದಾನಿ ಡಿಫೆನ್ಸ್ ಸಂಸ್ಥೆಯು ಎಕೆ-203 ಯೋಜನೆಗೆ ಅಗತ್ಯವಿರುವ ಸಣ್ಣ ಗಾತ್ರದ ಮದ್ದುಗುಂಡುಗಳನ್ನು ಐದು ವರ್ಷಗಳ ಕಾಲ ಪೂರೈಸಲಿದೆ. ಈ ಮೂಲಕ ಮದ್ದುಗುಂಡುಗಳ ಪೂರೈಕೆಗೆ ಭಾರತೀಯ ಮೂಲವೊಂದು ಲಭ್ಯವಾಗುವುದಲ್ಲದೆ, ಒಪ್ಪಂದದ ಅವಧಿಯುದ್ದಕ್ಕೂ ಅವುಗಳ ನಿರಂತರ ಲಭ್ಯತೆಯನ್ನು ಖಚಿತಪಡಿಸಲು ನೆರವಾಗಲಿದೆ ಎಂದು ಕಂಪನಿ ತಿಳಿಸಿದೆ.

ಈ ಒಪ್ಪಂದವು ಇಂಡೋ-ರಷ್ಯನ್ ರೈಫಲ್ಸ್ (ಐಆರ್‌ಆರ್‌ಪಿಎಲ್‌) ನಡೆಸುವ ರೈಫಲ್ ಉತ್ಪಾದನೆ ಮತ್ತು ಅದಾನಿ ಡಿಫೆನ್ಸ್ ನಡೆಸುವ ಮದ್ದುಗುಂಡು ತಯಾರಿಕೆಯನ್ನು ಒಂದೆಡೆ ತರಲಿದ್ದು, ಭಾರತದ ರಕ್ಷಣಾ ತಯಾರಿಕಾ ವ್ಯವಸ್ಥೆಯೊಳಗೆ ಎಕೆ-203 ಯೋಜನೆಯ ಎರಡು ಪ್ರಮುಖ ಭಾಗಗಳನ್ನು ಜೋಡಿಸಲಿದೆ.

ಭಾರತೀಯ ಸಶಸ್ತ್ರ ಪಡೆಗಳಿಗೆ ಎಕೆ-203 ರೈಫಲ್‌ಗಳನ್ನು ತಯಾರಿಸಲು ಭಾರತ-ರಷ್ಯಾ ಸರ್ಕಾರದ ನಡುವಿನ ಒಪ್ಪಂದದ ಅಡಿಯಲ್ಲಿ 2019ರಲ್ಲಿ ಐಆರ್‌ಆರ್‌ಪಿಎಲ್ ಅನ್ನು ಸ್ಥಾಪಿಸಲಾಯಿತು. ಇದರ ಉತ್ಪಾದನಾ ಘಟಕವು ಉತ್ತರ ಪ್ರದೇಶದ ಅಮೇಠಿ ಜಿಲ್ಲೆಯ ಕೊರ್ವಾದಲ್ಲಿದೆ.

ಎಕೆ-203ನ ದೇಶೀಯ ಉತ್ಪಾದನೆಯ ಜವಾಬ್ದಾರಿಯನ್ನು ಐಆರ್‌ಆರ್‌ಪಿಎಲ್‌ಗೆ ರಕ್ಷಣಾ ಸಚಿವಾಲಯ ವಹಿಸಿದೆ. ಕೊರ್ವಾ ಘಟಕದಲ್ಲಿ 6.01 ಲಕ್ಷ ಎಕೆ-203 ರೈಫಲ್‌ಗಳನ್ನು ತಯಾರಿಸಲು ಸರ್ಕಾರವು 2021ರ ಡಿಸೆಂಬರ್‌ನಲ್ಲಿ ಈ ಕಂಪನಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು.

ಸ್ಥಳೀಯವಾಗಿ ತಯಾರಿಸಿದ ರೈಫಲ್‌ಗಳೊಂದಿಗೆ ಸ್ಥಳೀಯವಾಗಿಯೇ ತಯಾರಿಸಿದ ಮದ್ದುಗುಂಡುಗಳನ್ನು ಜೋಡಿಸುವ ಮೂಲಕ ಒಪ್ಪಂದವು ಯೋಜನೆಯ ದೇಶೀಯ ತಯಾರಿಕಾ ವ್ಯಾಪ್ತಿಯನ್ನು ವಿಸ್ತರಿಸುತ್ತದೆ ಎಂದು ಕಂಪನಿ ಹೇಳಿದೆ.

ಅದಾನಿ ಡಿಫೆನ್ಸ್ ಭಾರತದಲ್ಲಿ ಸಣ್ಣ ಗಾತ್ರದ ಮದ್ದುಗುಂಡು ತಯಾರಿಕಾ ಉದ್ಯಮವನ್ನು ಸ್ಥಾಪಿಸಿದ್ದು, ಕಾನ್ಪುರದಲ್ಲಿ ಉತ್ಪಾದನಾ ಘಟಕವನ್ನು ಹೊಂದಿದೆ. ಈ ಒಪ್ಪಂದವು ಸಣ್ಣ ಶಸ್ತ್ರಾಸ್ತ್ರಗಳ ಪೂರೈಕೆ ಸರಣಿಯಲ್ಲಿ ದೇಶೀಯ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುತ್ತದೆ. ರಕ್ಷಣಾ ತಯಾರಿಕೆಯಲ್ಲಿ ಹೆಚ್ಚಿನ ಸ್ವಾವಲಂಬನೆಗಾಗಿ ಸರ್ಕಾರದ 'ಆತ್ಮನಿರ್ಭರ ಭಾರತ' ಉಪಕ್ರಮಕ್ಕೆ ಬೆಂಬಲ ನೀಡುತ್ತದೆ.


Delhi | Adani Defence & Aerospace has signed a five-year agreement with Indo-Russian Rifles Private Limited (IRRPL), the India-Russia joint venture manufacturing AK-203 assault rifles in India, to supply indigenous 7.62x39 mm small-calibre ammunition for the programme. The Show more






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries