HEALTH TIPS

Asian Games | 1,500 ಮೀ. ಓಟ: ಗುಲ್ವೀರ್ ಸಿಂಗ್‌ಗೆ ಬೆಳ್ಳಿ

ನಗೋಯ: ಭಾರತದ ದೂರ ಅಂತರದ ಓಟಗಾರ ಗುಲ್ವೀರ್ ಸಿಂಗ್ ಏಶ್ಯನ್ ಗೇಮ್ಸ್‌ನಲ್ಲಿ ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿದ್ದು, ಸೋಮವಾರ ಪುರುಷರ 1,500 ಮೀ. ಓಟದ ಫೈನಲ್‌ನಲ್ಲಿ ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡಿ ಜಪಾನ್‌ನಲ್ಲಿ ತನ್ನ ಎರಡನೇ ಬೆಳ್ಳಿ ಪದಕ ಗೆದ್ದುಕೊಂಡರು. 


ಗುಲ್ವೀರ್ 3:36.72 ಅವಧಿಯಲ್ಲಿ ಗುರಿ ತಲುಪಿ ಚಿನ್ನದ ಪದಕ ವಿಜೇತ ಜಪಾನ್‌ನ ಕಝುಟೊ ಲಿಝವಾ ಅವರ ನಂತರ ಎರಡನೇ ಸ್ಥಾನ ಪಡೆದರು. ಜಪಾನಿನ ಇನ್ನೋರ್ವ ರನ್ನರ್ ನಗಿಯಾ ಮೊರಿ 3:37.92 ಸಮಯದೊಂದಿಗೆ ಗುರಿ ತಲುಪಿ ಕಂಚಿನ ಪದಕ ಜಯಿಸಿದರು. ಭಾರತದ ಇನ್ನೋರ್ವ ಫೈನಲಿಸ್ಟ್ ಯೂನಸ್‌ಶಾ (3:43.88)9ನೇ ಸ್ಥಾನ ಪಡೆದರು.

ಇದೀಗ ಬೆಳ್ಳಿ ಪದಕ ಗೆದ್ದಿರುವ ಗುಲ್ವೀರ್ ಈಗ ನಡೆಯುತ್ತಿರುವ ಗೇಮ್ಸ್‌ನಲ್ಲಿ ಮತ್ತೊಂದು ಪದಕ ಜಯಿಸಿದರು. ಪುರುಷರ 10,000ಮೀ. ಓಟದಲ್ಲಿ ಈಗಾಗಲೆ ಬೆಳ್ಳಿ ಪದಕ ಜಯಿಸಿದ್ದರು.

ಹಾಲಿ ಚಾಂಪಿಯನ್ ಅವಿನಾಶ್ ಸಾಬ್ಲೆ 3,000 ಮೀ. ಸ್ಟೀಪಲ್ ಚೇಸ್‌ನಲ್ಲಿ ಪದಕ ವಂಚಿತರಾಗಿರುವ ಹಿನ್ನೆಲೆಯಲ್ಲಿ ಗುಲ್ವೀರ್ ಸಾಧನೆ ಗಮನಾರ್ಹವಾಗಿದೆ.

ಎರಡು ಪ್ರಮುಖ ದೂರ ಅಂತರದ ಸ್ಪರ್ಧೆಗಳಲ್ಲಿ ಅವಳಿ ಬೆಳ್ಳಿ ಗೆದ್ದಿರುವುದು ಗುಲ್ವೀರ್ ಅವರ ಸ್ಥಿರ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. 1,500 ಮೀ. ಓಟದಲ್ಲಿ ತನ್ನ ವೈಯಕ್ತಿಕ ಶ್ರೇಷ್ಠ ಪ್ರದರ್ಶನವನ್ನು ಉತ್ತಮಪಡಿಸಿಕೊಂಡಿರುವ ಗುಲ್ವೀರ್ ಕಣದಲ್ಲಿರುವ ಪ್ರಮುಖ ರನ್ನರ್‌ಗಳನ್ನು ಹಿಂದಿಕ್ಕಿ ಎರಡನೇ ಸ್ಥಾನ ಪಡೆದರು.

ಅವಿನಾಶ್ ಸಾಬ್ಳೆ ನಿರಾಶಾದಾಯಕ ಪ್ರದರ್ಶನ: ಭಾರತವು ದಿನದಾರಂಭದಲ್ಲಿ ಪುರುಷರ 3,000 ಮೀ. ಸ್ಟೀಪಲ್ ಚೇಸ್‌ನಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದು, ಹಾಲಿ ಚಾಂಪಿಯನ್ ಹಾಗೂ ಗೇಮ್ಸ್ ದಾಖಲೆ ವೀರ ಅವಿನಾಶ್ ಸಾಬ್ಳೆ ಈ ಋತುವಿನ ಶ್ರೇಷ್ಠ ಸಮಯ(8:21.67)ದಲ್ಲಿ ಗುರಿ ತಲುಪಿದರೂ ನಾಲ್ಕನೇ ಸ್ಥಾನ ಪಡೆದು ನಿರಾಶೆಗೊಳಿಸಿದರು.

ಮಹಾರಾಷ್ಟ್ರದ ಎರಡು ಬಾರಿಯ ಒಲಿಂಪಿಯನ್ 32ರ ವಯಸ್ಸಿನ ಸಾಬ್ಳೆ, ಗೇಮ್ಸ್ ದಾಖಲೆ(8:17.36)ಯೊಂದಿಗೆ ಚಿನ್ನದ ಪದಕ ಜಯಿಸಿರುವ ಜಪಾನಿನ ರಿಯುಜಿ ಮಿಯುರಾಗಿಂತ 4.31 ಸೆಕೆಂಡ್ ಹಿಂದಿಳಿದರು. ಜಪಾನಿನ ಇನ್ನೋರ್ವ ಅತ್ಲೀಟ್ ರಿಯೊಮಾ ಅಯೊಕಿ(8:17.60)ಬೆಳ್ಳಿ ಪದಕ ಜಯಿಸಿದರೆ, ಖತರ್‌ನ ಝಕಾರಿಯಾ(8:18.13)ಕಂಚಿನ ಪದಕ ಜಯಿಸಿದರು.

ದೇಶದ ಓರ್ವ ಪ್ರಮುಖ ದೂರ ಅಂತರದ ಓಟಗಾರರಲ್ಲಿ ಒಬ್ಬರಾಗಿರುವ ಸಾಬ್ಳೆ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ವಿಫಲವಾಗಿರುವುದು ಭಾರತದ ಪಾಲಿಗೆ ತೀರಾ ನಿರಾಶಾದಾಯಕ ವಿಚಾರವಾಗಿದೆ.

ಮಹಿಳೆಯರ ಡಿಸ್ಕಸ್ ಎಸೆತದ ಸ್ಪರ್ಧೆಯಲ್ಲೂ ಮತ್ತಷ್ಟು ಹಿನ್ನಡೆಯಾಗಿದ್ದು, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಸೀಮಾ ಕಾಲಿರಾಮ ವೈಯಕ್ತಿಕ ಶ್ರೇಷ್ಠ ಪ್ರದರ್ಶನ(59.88)ನೀಡಿದರೂ ನಾಲ್ಕನೇ ಸ್ಥಾನ ಪಡೆದರು. ಎಲ್ಲ ಮೂವರು ಪದಕ ವಿಜೇತರು 60 ಮೀ. ಮಾರ್ಕ್ ಕ್ರಮಿಸಿದ್ದರು.

ಪುರುಷರ 400 ಮೀ.ಹರ್ಡಲ್ಸ್‌ನಲ್ಲಿ ಸಂತೋಷ್ ಕುಮಾರ್ ತಮಿಳರಸನ್ ಎಂಟು ಸ್ಪರ್ಧಿಗಳಿದ್ದ ಫೈನಲ್‌ನಲ್ಲಿ 49.95 ಸೆಕೆಂಡ್‌ನಲ್ಲಿ ಗುರಿ ತಲುಪಿ ಏಳನೇ ಸ್ಥಾನ ಪಡೆದರು. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries