ಪೆರ್ಲ: ಬಜಕೂಡ್ಲು ಏರೋಟಿ ಶ್ರೀ ಧೂಮಾವತೀ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಶ್ರೀ ಧೂಮಾವತಿ ದೈವದ ನೂತನ ಪೀಠ ತಯಾರಿಗಾಗಿ ಹಲಸಿನ ಮರ ಕಡಿಯುವ ಮುಹೂರ್ತ ಭಾನುವಾರ ತುಲಾ ಲಗ್ನ ಸುಮುಹೂರ್ತದಲ್ಲಿ ಬಜಕೂಡ್ಲು ಶ್ರೀಮಹಾಳಿಂಗೇಶ್ವರ ದೇವಸ್ಥಾನ ಸಮಿತಿ ಸ್ಥಳದಲ್ಲಿ ಜರುಗಿತು. ಈ ಹಿಂದೆ ದೈವಜ್ಞರು ದೈವಸ್ಥಾನದಲ್ಲಿ ಇರಿಸಿರುವ ಪ್ರಶ್ನಾ ಚಿಂತನೆ ಪ್ರಕರ ನೂತನ ಪೀಠ ನಿರ್ಮಾಣಕ್ಕೆ ಮಾಡಿರುವ ಶಿಫಾರಸಿನನ್ವಯ ಮರ ಗುರುತಿಸಲಾಗಿತ್ತು.
ವಿಶ್ವಕರ್ಮ ಚಂದ್ರಶೇಖರ ಆಚಾರ್ಯ ಬಜಕೂಡ್ಲು ಪೂಜಾವಿಧಿ ನೆರವೇರಿಸಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಕೃಷ್ಣ ಶ್ಯಾನುಭಾಗ್ ಬಜಕೂಡ್ಲು, ಸಮಿತಿ ಅಧ್ಯಕ್ಷರಾದ ರಾಮಕೃಷ್ಣ ಭಟ್ ಸಪರ್ಂಗಳ, ಪ್ರಶಾಂತ್ ( ಸಿವಿಲ್ ಇಂಜಿನಿಯರ್) ಬಜಕೂಡ್ಲು , ಮುರಳಿ ಶ್ಯಾನುಭಾಗ್ ಬಜಕೂಡ್ಲು, ಸಂಕಪ್ಪ ರೈ ಬಜಕೂಡ್ಲು, ವಿಶ್ವನಾಥ ರೈ ಬಜಕೂಡ್ಲು, ಬಾಲಕೃಷ್ಣ ರೈ ಬಜಕೂಡ್ಲು, ರಾಧಾಕೃಷ್ಣ ಕುಲಾಲ್ ಬಜಕೂಡ್ಲು, ಹರೀಶ ಬಜಕೂಡ್ಲು ಕರುಣಾಕರ ಬಜಕೂಡ್ಲು, ಚಂದ್ರಶೇಖರ ಎಸ್ ಸರ್ಪಮಲೆ, ಐತ್ತ ಪಾಟಾಳಿ ಸೂರ್ಡೇಲು, ಅನಂತೇಶ್ವರ ಪೈ ಬಜಕೂಡ್ಲು, ಗೋವಿಂದ ನಾಯ್ಕ್ ಆಮೆಕ್ಕಳ ಮೊದಲಾದರು ಉಪಸ್ಥಿತರಿದ್ದರು.


