HEALTH TIPS

ಭಾರತ ಮೂಲದ ಎಸ್ಸಾರ್‌ನಿಂದ ಅಮೆರಿಕದಲ್ಲಿ ಬೃಹತ್ ಉಕ್ಕು ಘಟಕ: ಟ್ರಂಪ್ ಘೋಷಣೆ

ವಾಷಿಂಗ್ಟನ್: ಭಾರತೀಯ ಮೂಲದ ಎಸ್ಸಾರ್ ಗ್ರೂಪ್ ಅಮೆರಿಕದಲ್ಲಿ ಬರೋಬ್ಬರಿ 15 ಬಿಲಿಯರ್ ಡಾಲರ್ (ಅಂದಾಜು ₹1.25 ಲಕ್ಷ ಕೋಟಿಗೂ ಅಧಿಕ) ವೆಚ್ಚದಲ್ಲಿ ಬೃಹತ್ ಉಕ್ಕು ಘಟಕ ನಿರ್ಮಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.


ಶ್ವೇತಭವನದ ಓವಲ್ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಎಸ್ಸಾರ್ ಗ್ರೂಪ್‌ನ ಸಹ-ಸಂಸ್ಥಾಪಕ ರವಿ ರೂಯಿಯಾ ಹಾಗೂ ಅವರ ಪುತ್ರ ರೇವಂತ್ ಅವರ ಸಮ್ಮುಖದಲ್ಲಿ ಟ್ರಂಪ್ ಈ ಮಹತ್ವದ ಯೋಜನೆಗೆ ಚಾಲನೆ ನೀಡಿದ್ದಾರೆ. 

'ಅಮೆರಿಕದ ಇತಿಹಾಸದಲ್ಲೇ ಅತಿ ದೊಡ್ಡ ಉಕ್ಕು ಘಟಕವನ್ನು ಮೆಸಾಬಿ ಮೆಟಾಲಿಕ್ಸ್ ಸಂಸ್ಥೆಯು ಲೋವಾದಲ್ಲಿ ಸ್ಥಾಪಿಸಲಿದೆ ಎಂದು ಪ್ರಕಟಿಸಲು ನನಗೆ ಅತೀವ ಸಂತಸವಾಗುತ್ತಿದೆ,' ಎಂದು ಟ್ರಂಪ್ ತಿಳಿಸಿದರು.

ಈ ವೇಳೆ ಮಾತನಾಡಿದ ಎಸ್ಸಾರ್ ಗ್ರೂಪ್ ಮೆಸಾಬಿ ಮೆಟಾಲಿಕ್ಸ್‌ನ ಅಧ್ಯಕ್ಷ ರೇವಂತ್ ರೂಯಿಯಾ, ಅಮೆರಿಕದಲ್ಲಿ ಉತ್ಪಾದನೆಗೆ ಮರುಜೀವ ತುಂಬಿದ ಟ್ರಂಪ್‌ಗೆ ಧನ್ಯವಾದ ಸಲ್ಲಿಸಿದರು.

'ಈ ಘಟಕವು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರಲಿದ್ದು, ಗಾತ್ರ, ಗುಣಮಟ್ಟ ಹಾಗೂ ಉತ್ಪಾದನಾ ವೆಚ್ಚದ ವಿಚಾರದಲ್ಲಿ ಜಾಗತಿಕ ಮಟ್ಟದ ಯಾವುದೇ ಉಕ್ಕು ಘಟಕದೊಂದಿಗೂ ಪೈಪೋಟಿ ನೀಡಲಿದೆ' ಎಂದರು.

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ


ಭಾರತ ಮೂಲದ ಎಸ್ಸಾರ್‌ನಿಂದ ಅಮೆರಿಕದಲ್ಲಿ ಬೃಹತ್ ಉಕ್ಕು ಘಟಕ: ಟ್ರಂಪ್ ಘೋಷಣೆ

ಒಂದು ಸಾಲಿನಲ್ಲಿಭಾರತೀಯ ಮೂಲದ ಎಸ್ಸಾರ್ ಗ್ರೂಪ್ ಅಮೆರಿಕದಲ್ಲಿ 15 ಬಿಲಿಯನ್ ಡಾಲರ್ ಹೂಡಿಕೆಯೊಂದಿಗೆ ಬೃಹತ್ ಉಕ್ಕು ಘಟಕವನ್ನು ನಿರ್ಮಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ಎಸ್ಸಾರ್ ಗ್ರೂಪ್ ಅಮೆರಿಕದಲ್ಲಿ ಹೂಡಿಕೆ ಮಾಡುತ್ತಿರುವ ಮೊತ್ತ ಎಷ್ಟು?

ಎಸ್ಸಾರ್ ಗ್ರೂಪ್ ಅಮೆರಿಕದಲ್ಲಿ ಬರೋಬ್ಬರಿ 15 ಬಿಲಿಯನ್ ಡಾಲರ್ (ಅಂದಾಜು ₹1.25 ಲಕ್ಷ ಕೋಟಿಗೂ ಅಧಿಕ) ಹೂಡಿಕೆ ಮಾಡಿ ಬೃಹತ್ ಉಕ್ಕು ಘಟಕವನ್ನು ಸ್ಥಾಪಿಸಲಿದೆ.


ಈ ಉಕ್ಕು ಘಟಕ ಯಾವಾಗ ಕಾರ್ಯಾರಂಭ ಮಾಡಲಿದೆ?

ಶ್ವೇತಭವನದ ಅಧಿಕಾರಿಗಳ ಪ್ರಕಾರ, ಈ ಯೋಜನೆಯು 2030ರ ವೇಳೆಗೆ ಪೂರ್ಣಗೊಳ್ಳಲಿದ್ದು, ಆ ಸಮಯಕ್ಕೆ ಉತ್ಪಾದನೆ ಆರಂಭವಾಗುವ ನಿರೀಕ್ಷೆಯಿದೆ.


ಈ ಯೋಜನೆಯಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆಯೇ?

ಈ ಘಟಕದಿಂದ ಸ್ಥಳೀಯವಾಗಿ ಸುಮಾರು 1,750 ಕಾಯಂ ಉದ್ಯೋಗಗಳು ಸೃಷ್ಟಿಯಾಗಲಿದ್ದು, ಜೊತೆಗೆ ಮಿನೆಸೋಟಾದ ಹೊಸ ಗಣಿಯಲ್ಲಿ 350 ಉದ್ಯೋಗಗಳು ಲಭ್ಯವಾಗಲಿವೆ.


ಉಕ್ಕು ಘಟಕಕ್ಕೆ ಅಗತ್ಯವಿರುವ ಅದಿರು ಎಲ್ಲಿಂದ ಪೂರೈಕೆಯಾಗುತ್ತದೆ?

ಕಂಪನಿಯು ಮಿನೆಸೋಟಾದ ಮೆಸಾಬಿ ಕಬ್ಬಿಣ ಶ್ರೇಣಿಯಲ್ಲಿ 2.5 ಶತಕೋಟಿ ಡಾಲರ್ ವೆಚ್ಚದಲ್ಲಿ ನಿರ್ಮಿಸುತ್ತಿರುವ ನೂತನ ಗಣಿಯಿಂದ ಅದಿರು ಪೂರೈಕೆಯಾಗಲಿದೆ.


ಅಮೆರಿಕದ ಉಕ್ಕಿನ ಉತ್ಪಾದನೆಯಲ್ಲಿ ಈ ಘಟಕದ ಪಾತ್ರವೇನು?

ಈ ಘಟಕವು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ವಾರ್ಷಿಕ 1 ಕೋಟಿ ಟನ್ ಉಕ್ಕು ಉತ್ಪಾದಿಸುವ ಸಾಮರ್ಥ್ಯದೊಂದಿಗೆ ಜಾಗತಿಕ ಮಟ್ಟದಲ್ಲಿ ಪೈಪೋಟಿ ನೀಡಲಿದೆ.

ಪ್ರಮುಖ ಅಂಕಿಅಂಶಗಳು

15 ಬಿಲಿಯನ್ ಡಾಲರ್ಒಟ್ಟು ಹೂಡಿಕೆ ಮೊತ್ತ2030ಉತ್ಪಾದನೆ ಆರಂಭದ ವರ್ಷ

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

2030ರ ವೇಳೆಗೆ ಉತ್ಪಾದನೆ ಆರಂಭ:

ಈ ಯೋಜನೆಯು 2030ರ ವೇಳೆಗೆ ಪೂರ್ಣಗೊಂಡು ಉತ್ಪಾದನೆ ಆರಂಭಿಸುವ ಗುರಿ ಹೊಂದಿದೆ ಎಂದು ಶ್ವೇತಭವನದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಘಟಕದಿಂದ ವಾರ್ಷಿಕ 1 ಕೋಟಿ ಟನ್ ಉಕ್ಕು ಉತ್ಪಾದನೆಯಾಗುವ ನಿರೀಕ್ಷೆಯಿದ್ದು, ಸ್ಥಳೀಯವಾಗಿ ಸುಮಾರು 1,750 ಕಾಯಂ ಉದ್ಯೋಗಗಳು ಸೃಷ್ಟಿಯಾಗಲಿವೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries