HEALTH TIPS

ರಸ್ತೆ ಕೆಸರುಗದ್ದೆಯಾಗಿ ಮಾರ್ಪಾಡು: ನಾಗರಿಕರಿಗೆ ಸಂಚಾರ ಸಮಸ್ಯೆ

ಬದಿಯಡ್ಕ: ದಿನಂಪ್ರತಿ ನೂರಾರು ಮಂದಿ ಆಶ್ರಯಿಸುವ ರಸ್ತೆಯೊಂದು ಇನ್ನೂ ಡಾಮರು ಕಾಣದೆ ಇದೀಗ ಕೆಸರುಗದ್ದೆಯಾಗಿ ಮಾರ್ಪಾಡುಗೊಂಡಿದೆ.


ಬೇಳ ಗ್ರಾಮದ ದರ್ಬೆತ್ತಡ್ಕ-ನಾನಿಲಪಳ್ಳ-ಮುಖಾರಿಕಂಡವನ್ನು ಸಂಪರ್ಕಿಸುವ ರಸ್ತೆಯ ಸ್ಥಿತಿ ಶೋಚನೀಯವಾಗಿದೆ. ಸುಮಾರು ಒಂದೂವರೆ ಕಿಲೋ ಮೀಟರ್ ಉದ್ದದ ಈ ರಸ್ತೆಯ ಇಕ್ಕಡೆಗಳಲ್ಲಿ ಹಲವು ಮನೆಗಳಿವೆ. ಶಾಲೆ, ಕಾಲೇಜುಗಳಿಗೆ ವಿದ್ಯಾರ್ಥಿಗಳ ಸಹಿತ ವಿವಿಧ ಅಗತ್ಯಗಳಿಗಾಗಿ ಈ ಭಾಗದ ಜನತೆ ಇದೇ ರಸ್ತೆಯಲ್ಲಿ ತೆರಳಬೆ ಕಾಗಿದೆ. ಇದೀಗ ಸುರಿಯುತ್ತಿರುವ ಮಳೆಯಿಂದ ರಸ್ತೆಯಲ್ಲಿ ತುಂಬಿ ಕೊಂಡಿದ್ದು ಕೆಸರುಗದ್ದೆಯಂತಾಗಿದೆ. ಇದರಿಂದಾಗಿ ಜನರಿಗೆ ನಡೆದು ಹೋಗಲು ಕೂಡಾ ಸಾಧ್ಯವಾಗದ ಸ್ಥಿತಿಯುಂಟಾಗಿದೆ.

ಇಲ್ಲಿಯ ನೂರಾರು ನಾಗರಿಕರು ತುರ್ತಾಗಿ ತೆರಳಬೇಕೆಂದಾದರೆ ಆಟೋ ರಿಕ್ಷಾ ಅಥವಾ ಇನ್ನಿತರ ವಾಹನಗಳು ಈ ರಸ್ತೆಯಲ್ಲಿ ಸಂಚರಿಸಲು ಚಾಲಕರು ಹಿಂಜರಿಯುತ್ತಿದ್ದಾರೆ. ಈ ರಸ್ತೆ ಮೂಲಕ ಕೆಂಪು ಕಲ್ಲಿನ ಲಾರಿಗಳು, ಮರ ಸಾಗಾಟದ ಲಾರಿಗಳು ನಿರಂತರ ಸಂಚರಿಸುತ್ತಿದ್ದು ಇದುವೇ ರಸ್ತೆ ಇಷ್ಟು ಹದಗೆಡಲು ಕಾರಣವಾಗಿದೆ. ಆದರೆ ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ಯಾರೂ ಮುಂದಾಗುತ್ತಿಲ್ಲವೆಂದು ನಾಗರಿಕರು ತಿಳಿಸುತ್ತಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries