HEALTH TIPS

ಯುಸಿಸಿ ಜಾರಿ ಕುರಿತ ಅಮಿತ್‌ ಶಾ ಹೇಳಿಕೆ: ಎನ್‌ಡಿಎನಲ್ಲಿ ಕೆಲವರದು ಭಿನ್ನರಾಗ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು, 2029ರ ಒಳಗೆ ಎನ್‌ಡಿಎ ಆಡಳಿತವಿರುವ ಎಲ್ಲ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿ ಮಾಡುವುದಾಗಿ ನೀಡಿದ ಹೇಳಿಕೆಯು ದೇಶದಲ್ಲಿ ಚರ್ಚೆ ಹುಟ್ಟು ಹಾಕಿದೆ. ಜೆನ್‌-ಝೀ ಪ್ರತಿಭಟನೆ ಬಳಿಕ ನಿರುದ್ಯೋಗ, ಶಿಕ್ಷಣದ ಕುರಿತು ನಡೆಯುತ್ತಿರುವ ಚರ್ಚೆಗಳಿಗೆ ಲಗಾಮು ಹಾಕುವುದು ಕೇಂದ್ರದ ಉದ್ದೇಶ ಎಂದು ವಿಪಕ್ಷಗಳು ಆರೋಪಿಸಿವೆ. 


ಎನ್‌ಡಿಎ ಮಿತ್ರಪಕ್ಷಗಳ ಪೈಕಿ ಕೆಲವು ಪಕ್ಷಗಳಲ್ಲಿ ಯುಸಿಸಿ ಬಗ್ಗೆ ಭಿನ್ನರಾಗ ಮೂಡಿದೆ.

ಚುನಾವಣೆಗೆ ಮುನ್ನವೇ ಉತ್ತರ ಪ್ರದೇಶದಲ್ಲಿ ಜಾರಿ?

ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಮುನ್ನವೇ ಉತ್ತರ ಪ್ರದೇಶದಲ್ಲಿ ಯುಸಿಸಿ ಜಾರಿ ಆಗಬಹುದು ಎನ್ನಲಾಗುತ್ತಿದೆ. ಯುಸಿಸಿ ಜಾರಿಗೆ ರಾಜ್ಯದ ಎನ್‌ಡಿಎ ಮಿತ್ರ ಪಕ್ಷಗಳಾದ ಎಸ್‌ಬಿಎಸ್‌ಪಿ, ನಿಶಾದ್‌ ಪಕ್ಷ, ಆಪ್ನಾ ದಳ ಸಹಮತವನ್ನೂ ವ್ಯಕ್ತಪಡಿಸಿವೆ.

'ಯುಸಿಸಿ, ಮುಸ್ಲಿಮರ ವಿರುದ್ಧ ಇದೆ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ಇದೇ ಮಾದರಿಯ ವಾದಗಳನ್ನು ಎನ್‌ಆರ್‌ಸಿ ಮತ್ತು ಸಿಎಎ ಕುರಿತೂ ಮುಂದಿಟ್ಟಿದ್ದವು. ದೇಶದ ಪ್ರತಿಯೊಬ್ಬರ ಹಿತಾಸಕ್ತಿಗೆ ಯುಸಿಸಿ ಬೇಕು' ಎಂದು ಎಸ್‌ಬಿಎಸ್‌ಪಿ ಮುಖ್ಯಸ್ಥ ಓಂ ಪ್ರಕಾಶ್‌ ರಾಜ್ಬರ್‌ ಅಭಿಪ್ರಾಯಪಟ್ಟಿದ್ದಾರೆ.

'ಮುಸ್ಲಿಂ ಮಹಿಳೆಯರಿಗೆ ಯುಸಿಸಿ ಜಾರಿಯಿಂದ ಹೆಚ್ಚಿನ ಅನುಕೂಲವಾಗಲಿದೆ. ಮಹಿಳೆಯರಿಗೆ ಇದರಿಂದ ಸಮಾನ ಹಕ್ಕು ಮತ್ತು ಗೌರವ ದೊರೆಯಲಿದೆ. ಜೊತೆಗೆ, ಡಾ. ಬಿ. ಆರ್‌. ಅಂಬೇಡ್ಕರ್‌ ಅವರು ತಾರತಮ್ಯದ ವಿರುದ್ಧ ಇದ್ದವರು' ಎಂದು ನಿಶಾದ್‌ ಪಕ್ಷದ ಮುಖ್ಯಸ್ಥ ಸಂಜಯ್‌ ನಿಶಾದ್‌ ಹೇಳಿದರು.

'ಪಕ್ಷದ ನಿಲುವೇನು?': ಪತ್ರ ಬರೆದ ಎನ್‌ಸಿಪಿ ನಾಯಕ

ಮಹಾರಾಷ್ಟ್ರದಲ್ಲಿ ಮುಂಬರುವ ಚಳಿಗಾಲದ ಅಧಿವೇಶದಲ್ಲಿ ಯುಸಿಸಿ ಮಸೂದೆಯನ್ನು ಜಾರಿ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಹೊತ್ತಿನಲ್ಲಿ ಎನ್‌ಡಿಎ ಮಿತ್ರಪಕ್ಷವಾದ ಎನ್‌ಸಿಪಿ ನಾಯಕ ಇದ್ರೀಸ್‌ ನಾಯಿಕವಾಡಿ ಅವರು ಪಕ್ಷದ ಅಧ್ಯಕ್ಷೆ ಸುನೇತ್ರಾ ಪವಾರ್‌ ಅವರಿಗೆ ಪತ್ರ ಬರೆದಿದ್ದಾರೆ. 'ಯುಸಿಸಿ ಕುರಿತು ಪಕ್ಷದ ನಿಲುವೇನು' ಎಂದು ಪ್ರಶ್ನಿಸಿದ್ದಾರೆ.

ಎನ್‌ಸಿಪಿ ಪಕ್ಷದಲ್ಲಿರುವ ಮುಸ್ಲಿಂ ಸಮುದಾಯಕ್ಕೆ ಸೇರಿದ ಇಬ್ಬರು ಶಾಸಕ ಪೈಕಿ ಇದ್ರೀಸ್‌ ಒಬ್ಬರು. 'ಕಳೆದ ವಾರವೇ ನಾನು ಪತ್ರ ಬರೆದಿದ್ದೇನೆ. ನಮ್ಮದು ಜಾತ್ಯತೀತ ಪಕ್ಷ. ಆದ್ದರಿಂದ ಯುಸಿಸಿ ಕುರಿತು ನಿಲುವು ಸ್ಪಷ್ಟಪಡಿಸುವಂತೆ ಕೇಳಿಕೊಂಡಿದ್ದೇನೆ' ಎಂದರು. ಪಕ್ಷವು ತನ್ನ ನಿಲುವನ್ನು ಇನ್ನೂವರೆಗೂ ಸ್ಪಷ್ಟಪಡಿಸಿಲ್ಲ.

ಬಿಹಾರ: ಜೆಡಿಯುನಲ್ಲಿ ಭಿನ್ನ ನಿಲುವು

ಯುಸಿಸಿ ಜಾರಿ ಕುರಿತು ಜೆಡಿಯು ನಾಯಕರಲ್ಲಿ ಭಿನ್ನ ನಿಲುವು ಕಂಡುಬಂದಿದೆ. 'ಯುಸಿಸಿ ಜಾರಿಗೆ ನಮ್ಮ ಸಹಮತವಿದೆ' ಎಂದು ಉಪ ಮುಖ್ಯಮಂತ್ರಿ ವಿಜಯ್‌ ಕುಮಾರ್‌ ಚೌಧರಿ ಮಂಗಳವಾರ ಹೇಳಿದರು. ಆದರೆ, ಪಕ್ಷದ ನಾಯಕ ಶ್ಯಾಮ್‌ ರಜಕ್‌ ಅವರು ರಾಜ್ಯದಲ್ಲಿ ಯುಸಿಸಿ ಜಾರಿಯನ್ನು ವಿರೋಧಿಸಿದ್ದಾರೆ.

'ಯುಸಿಸಿ ಜಾರಿಯನ್ನು ಆರ್‌ಜೆಡಿ ವಿರೋಧಿಸಿದೆ ಎಂದು ಜೆಡಿಯು ಕೂಡ ವಿರೋಧಿಸುತ್ತದೆ ಎಂಬ ಭ್ರಮೆಯಲ್ಲಿ ಇರಬೇಡಿ. ಬಿಹಾರದಲ್ಲಿ ನಾವು ಎನ್‌ಡಿಎ ಮಿತ್ರಪಕ್ಷ. ಮಿತ್ರಪಕ್ಷಗಳ ಜೊತೆ ಮಾತುಕತೆ ನಡೆಸಿ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ' ಎಂದು ವಿಜಯ್‌ ಕುಮಾರ್‌ ಚೌಧರಿ ಹೇಳಿದರು.

'ಯುಸಿಸಿ ಮಸೂದೆಯಲ್ಲೇನಿದೆ ಎಂದು ಸಧ್ಯಕ್ಕೆ ನಮಗೆ ಮಾಹಿತಿ ಇಲ್ಲ. ಮಸೂದೆ ನಮ್ಮ ಮುಂದೆ ಬರಲಿ. ಅದನ್ನು ಅಭ್ಯಾಸ ಮಾಡುತ್ತೇವೆ. ಅದರಲ್ಲಿ ಆಕ್ಷೇಪಾರ್ಹವಾದುದು ಏನೂ ಇಲ್ಲವಾದರೆ, ಕಾರಣವೇ ಇಲ್ಲದೆ ನಾವು ಯಾಕೆ ಮಸೂದೆಯನ್ನು ವಿರೋಧಿಸಬೇಕು? ಆಕ್ಷೇಪಗಳೇನಾದರೂ ಇದ್ದರೆ ನಾವು ಕೇಂದ್ರ ಗೃಹ ಸಚಿವರನ್ನು ಭೇಟಿಯಾಗಿ, ವಿಚಾರ ತಿಳಿಸುತ್ತೇವೆ' ಎಂದರು.

'ಸಂಸತ್ತಿನಲ್ಲಿ ಯುಸಿಸಿ ಮಸೂದೆಯನ್ನು ನಾವು ಬೆಂಬಲಿಸುತ್ತೇವೆ. ಆದರೆ, ಬಿಹಾರದಲ್ಲಿ ಮಸೂದೆಯನ್ನು ವಿರೋಧಿಸುತ್ತೇವೆ' ಎಂದು ಶ್ಯಾಮ್‌ ರಜಕ್‌ ಹೇಳಿದ್ದಾರೆ. ಪಕ್ಷದ ವರಿಷ್ಠ ನಿತೀಶ್‌ ಕುಮಾರ್‌ ಅವರು ಈ ಹಿಂದೆ ಕೇಂದ್ರ ಸರ್ಕಾರಕ್ಕೆ ಇದನ್ನೇ ಹೇಳಿದ್ದರು.

ಅಮಿತ್‌ ಶಾ ಹೇಳಿದ್ದೇನು?

ತ್ರಿವಳಿ ತಲಾಖ್‌ ಅನ್ನು ನಾವು ರದ್ದುಗೊಳಿಸಿದ್ದೇವೆ. ಈ ಮೂಲಕ ಮುಸ್ಲಿಂ ಮಹಿಳೆಯರಿಗೆ ಸಮಾನ ಹಕ್ಕು ನೀಡಿದ್ದೇವೆ. ಹಲವು ರಾಜ್ಯಗಳಲ್ಲಿ ನಾವು ಯುಸಿಸಿ ಜಾರಿ ಮಾಡಿದ್ದೇವೆ. 2029ಕ್ಕೂ ಮುನ್ನ ಎನ್‌ಡಿಎ ಆಡಳಿತವಿರುವ ಎಲ್ಲ 21 ರಾಜ್ಯಗಳಲ್ಲಿಯೂ ಯುಸಿಸಿ ಜಾರಿ ಮಾಡುತ್ತೇವೆ ಎಂಬ ವಿಶ್ವಾಸವಿದೆ

-ಅಮಿತ್‌ ಶಾ, ಕೇಂದ್ರ ಗೃಹ ಸಚಿವ (ಮುಂಬೈನಲ್ಲಿ ಭಾನುವಾರ ನೀಡಿದ್ದ ಹೇಳಿಕೆ)

-ಅನುಪ್ರಿಯಾ ಪಟೇಲ್‌, ಆಪ್ನಾ ದಳದ ಮುಖ್ಯಸ್ಥೆಯುಸಿಸಿ ಜಾರಿಗೂ ಮುನ್ನ ವಿಸ್ತೃತ ಚರ್ಚೆಯ ಅಗತ್ಯ ಇದೆ. ಎಲ್ಲ ಪಕ್ಷಗಳೊಂದಿಗೆ ಈ ಕುರಿತು ಚರ್ಚಿಸಬೇಕು-ಪಿ. ಶ್ರೀನಿವಾಸ ರಾವ್‌, ಟಿಡಿಪಿ ಮುಖ್ಯಸ್ಥನಾವು ಎನ್‌ಡಿಎ ಮಿತ್ರಪಕ್ಷ. ಆದ್ದರಿಂದ ಅಮಿತ್‌ ಶಾ ಅವರು ಹೇಳಿದ್ದನ್ನು ನಾವು ಕೇಳಿಯೇ ಕೇಳುತ್ತೇವೆ. ಯುಸಿಸಿ, ದೇಶದ ಧಾರ್ಮಿಕ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತದೆ ಎಂದು ಟೀಕಿಸಲಾಗುತ್ತದೆ. ಆದರೆ ಯುಸಿಸಿ, ದೇಶವನ್ನು ಒಗ್ಗೂಡಿಸುತ್ತದೆ ಎಂದು ನಾವು ಭಾವಿಸಿದ್ದೇವೆವಿ. ಶ್ರೀನಿವಾಸ ರಾವ್, ಆಂಧ್ರ ಪ್ರದೇಶದ ಸಿಪಿಎಂ ಕಾರ್ಯದರ್ಶಿನಿರುದ್ಯೋಗ ಸೇರಿ ಹಲವು ವಿಚಾರಗಳಿಗೆ ಜೆನ್‌-ಝೀಗಳು ಬಿಜೆಪಿಯನ್ನು ವಿರೋಧಿಸುತ್ತಿದ್ದಾರೆ. ಈ ಚರ್ಚೆಯನ್ನು ಬೇರೆಡೆ ಸೆಳೆಯಲು ಯುಸಿಸಿ ರಾಜಕಾರಣವನ್ನು ದೇಶದಲ್ಲಿ ಮತ್ತೊಮ್ಮೆ ಆರಂಭಿಸಲು ಬಿಜೆಪಿ ಹೊರಟಿದೆ

'ಸಂಖ್ಯಾಬಲವಿದ್ದರೆ ಸಂಸತ್ತಿನಲ್ಲಿ ಮಂಡಿಸಿ'

ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಮಾತ್ರವೇ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ಯತ್ನಿಸುವುದಕ್ಕಿಂತ, ಸಂಖ್ಯಾಬಲವಿದೆ ಎಂದಾದರೆ, ಯುಸಿಸಿ ಮಸೂದೆಯನ್ನು ನೇರವಾಗಿ ಸಂಸತ್ತಿನಲ್ಲಿಯೇ ಕೇಂದ್ರ ಸರ್ಕಾರ ಮಂಡಿಸಲಿ. ಎನ್‌ಡಿಎ ಮಿತ್ರಗಳೇ ಕೆಲವರು ಯುಸಿಸಿ ವಿರೋಧಿಸುತ್ತಿದ್ದಾರೆ. ಇವರು ಸಂಸತ್ತಿನಲ್ಲಿ ಬಿಜೆಪಿಯನ್ನು ಬೆಂಬಲಿಸುವುದಿಲ್ಲ. ಆದ್ದರಿಂದಲೇ ಬಿಜೆಪಿಯು ರಾಜ್ಯಗಳಲ್ಲಿ ಯುಸಿಸಿ ಜಾರಿ ಮಾಡುವ ಈ ಮಾರ್ಗವನ್ನು ಹುಡುಕಿಕೊಂಡಿದ್ದಾರೆ

-ಒಮರ್‌ ಅಬ್ದುಲ್ಲಾ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ 








 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries