ಕಾಸರಗೋಡು: ಎಡನೀರು ಸನಿಹದ ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿಗಳ ಮಹಾಸಭೆ ಹಾಗೂ ಎಡನೀರು ಸನಿಹದ ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರದ ಬ್ರಹ್ಮಕಲಶೋತ್ಸವ ಸಬಿಡುಗಡೆ ಸಮಾರಂಭ ಕುಂಜರಕಾನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಎಡನೀರು ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರ ಮಾರ್ಗದರ್ಶನ ಹಾಗೂ ದಿವ್ಯ ಆಶೀರ್ವಾದಗಳೊಂದಿಗೆ 2027ರ ಜನವರಿ 19ರಿಂದ 26ರವರೆಗೆ ನಡೆಯಲಿರುವ ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರದ ನವೀಕರಣ, ಪುನಃಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಉಪಸಮಿತಿ ಹಾಗೂ ಸರ್ವ ಸಮಿತಿಗಳ ಮಹಾಸಭೆ ಆಯೋಜಿಸಲಾಗಿತ್ತು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಸಾಮಾಜಿಕ ಕಾರ್ಯಕರ್ತ ಹಾಗೂ ಧಾರ್ಮಿಕ ಮುಂದಾಳು ಮಧುಸೂಧನ ಆಯರ್ ಅಧ್ಯಕ್ಷತೆ ವಹಿಸಿದ್ದರು. ರಕ್ಷಾಧಿಕಾರಿಗಳಾದ ಕೆ. ಮಾಧವ ಹೇರಳ, ಹಿರಿಯ ಸಾಮಾಜಿಕ ಕಾರ್ಯಕರ್ತ, ರಕ್ಷಾಧಿಕಾರಿಗಳಾದ ಶಶಿಧರ ಭಟ್ ಆನೆಮಜಲು, ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಮಹಿಳಾ ಸಮಿತಿ ಅಧ್ಯಕ್ಷೆ ಶಾರದಾ ಭಟ್, ಕೋಶಾಧಿಕಾರಿ ಈಶ್ವರ ಭಟ್ ಕಿಳಿಂಗಾರು, ಪ್ರಧಾನ ಕಾರ್ಯದರ್ಶಿ ವಾಮನ ಆಚಾರ್ಯ, ಉಪಾಧ್ಯಕ್ಷ ಡಾ. ಶ್ರೀನಿಧಿ ಸರಳಾಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನವೀನ್ ಭಟ್ ಕುಂಜರಕಾನ, ಕೋಶಾಧಿಕಾರಿಯಾಗಿ ವಾಸುದೇವ ಭಟ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಂ. ಶರ್ಮಾ ಅವರನ್ನುಒಳಗೊಂಡಂತೆ ವಿವಿಧ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ವಿವಿಧ ಸಮಿತಿಗಳ ಪದಾಧಿಕಾರಿಗಳು ಸಮಿತಿಗಳ ಕಾರ್ಯಚಟುವಟಿಕೆಗಳ ವರದಿ ಮಂಡಿಸಿದರು. ಎಡನೀರು ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರ ಮಾರ್ಗದರ್ಶನ ಹಾಗೂ ದಿವ್ಯ ಆಶೀರ್ವಾದಗಳೊಂದಿಗೆ ಬ್ರಹ್ಮಕಲಶೋತ್ಸವವನ್ನು ಯಶಸ್ವಿ ಹಾಗೂ ವ್ಯವಸ್ಥಿತವಾಗಿ ನೆರವೇರಿಸುವ ಸಂಕಲ್ಪವನ್ನು ಸಭೆಯಲ್ಲಿ ವ್ಯಕ್ತಪಡಿಸಲಾಯಿತು. ವಾಮನ ಆಚಾರ್ಯ ಸ್ವಾಗತಿಸಿದರು. ಕೆ ಎಂ ಶರ್ಮಾ ಪ್ರಸ್ತಾವಿಕ ನುಡಿಗಳನ್ನಾಡಿದರು. ಈಶ್ವರ ಭಟ್ ಕಿಳಿಂಗಾರು ವಂದಿಸಿದರು.



