HEALTH TIPS

ಹಿರಿಯ ಯಕ್ಷಗಾನ ಕಲಾವಿದ ಎಂ.ಟಿ. ಸುಂದರ ಕುಲಾಲ್ ನಿಧನ

ಉಪ್ಪಳ: ಹಿರಿಯ ಯಕ್ಷಗಾನ ಕಲಾವಿದ, ಎಂ.ಟಿ.ಎಸ್ ಕುಲಾಲ್ ಎಂದೇ ಖ್ಯಾತರಾಗಿದ್ದ ಮುಳಿಗದ್ದೆ ತಾಳ್ತಜೆ ನಿವಾಸಿ ಸುಂದರ ಕುಲಾಲ್ (79) ಬೇಡಗುಡ್ಡೆಯಲ್ಲಿರುವ ಸ್ವ-ಗೃಹದಲ್ಲಿ ಮಂಗಳವಾರ ನಿಧನರಾದರು.  ಇವರು ಯಕ್ಷಗಾನ ಮಾತ್ರ ವಲ್ಲದೆ, ಕೋಟಿಚೆನ್ನಯ, ಸಾವಿರಡೊರ್ತಿ ಸಾವಿತ್ರಿ ಸೇರಿದಂತೆ ನಾಲ್ಕು ಸಿನಿಮಾಗಳಲ್ಲೂ ಅಭಿನಯಿಸಿದ್ದರು. ಕಟೀಲು, ಧರ್ಮಸ್ಥಳ ಸಹಿತ ವಿವಿಧ ಯಕ್ಷಗಾನ ಮೇಳಗಳಲ್ಲಿ ಆರು ದಶಕಗಳ ಕಾಲ ಕಲಾವಿದರಾಗಿ ತಿರುಗಾಟ ನಡೆಸಿದರು. 

ತಮ್ಮ ಮಾವನವರಿಂದ ಯಕ್ಷಗಾನದ ಹೆಜ್ಜೆಗಾರಿಕೆ ಅಭ್ಯಸಿಸಿ ಧರ್ಮಸ್ಥಳ ಮೇಳ ಸೇರಿಕೊಂಡು ಕೋಡಂಗಿ ವೇಷದೊಂದಿಗೆ ಯಕ್ಷರಂಗಕ್ಕೆ ಪದಾರ್ಪಣೆಗೈದಿದ್ದರು.  ಬಾಲಗೋಪಾಲ, ಮುಖ್ಯ ಸ್ತ್ರೀವೇಷಗಳನ್ನು ಮಾಡುತ್ತಿದ್ದ ಇವರು ಮುಲ್ಕಿ, ಸುರತ್ಕಲ್, ಕುಂಬ್ಳೆ, ಕದ್ರಿ, ಬಪ್ಪನಾಡು ಸೇರಿದಂತೆ ವಿವಿಧ ಮೇಳಗಳಲ್ಲಿ ಸೇವೆಸಲ್ಲಿಸಿ,  ಕಟೀಲು ಮೇಳದಲ್ಲಿ ನಿವೃತ್ತರಾಗಿದ್ದರು.  ಜನಪ್ರಿಯ ಕಲಾವಿದರಾಗಿ ಗುರುತಿಸಿಕೊಂಡ ಎಂ.ಟಿ.ಎಸ್ ಕುಲಾಲ್ ರಾಜವೇಷ, ಪೆÇೀಷಕ ವೇಷ, ಸ್ತ್ರೀವೇಷ, ಹಾಸ್ಯ ಹೀಗೆ ಎಲ್ಲಾ ರೀತಿಯ ಪಾತ್ರಗಳನ್ನು ನಿರ್ವಹಿಸುವ ಸಾಮಥ್ರ್ಯವನ್ನು ಹೊಂದಿದ್ದರು. ಭಾಗವತಿಕೆಯಲ್ಲೂ ಪರಿಣತಿ ಹೊಂದಿದ್ದರು.

ಕಾರ್ತವೀರ್ಯ, ವನಪಾಲಕ, ರಾಘ, ರೇಣುಕೆ, ಜಮದಗ್ನಿ, ಭಾರ್ಗವ ಮೊದಲಾದ ಪಾತ್ರಗಳಲ್ಲಿ ಅದ್ಭುತ ಪ್ರತಿಭೆ ಪ್ರದರ್ಶಿಸಿದ್ದರು. ಇವರು ಪತ್ನಿ, ಪುತ್ರಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries