ಮಧೂರು: ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇಗುಲದಲ್ಲಿ ದೇವಸ್ಥಾನ ತುಂಬಿಸುವ ಕಾರ್ಯಕ್ರಮ ಮಂಗಳವಾರ ನೆರವೇರಿತು. ಬ್ರಹ್ಮಶ್ರೀ ಗುರುರಾಜ ತಂತ್ರಿ ಅವರನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ದೇವಾಲಯಸನಿಹದ ಗದ್ದೆಯಿಂದ ಪೈರಿಗೆ ಪೂಜೆ ನಡೆಸಿದ ಬಳಿಕ ಭತ್ತದ ತೆನೆಯನ್ನು ಶಂಖ, ಜಾಗಟೆ ನಿನಾದೊಂದಿಗೆ ಅರ್ಚಕರು ಹಾಗೂ ತಂತ್ರಿವರ್ಯರ ನೇತೃತ್ವದಲ್ಲಿ ದೇವಾಲಯಕ್ಕೆ ತರಲಾಯಿತು. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಟಿ ರಾಜೇಶ್, ದೇಗುಲದ ಪವಿತ್ರ ಪಾಣಿ ರತನ್ ಕುಮಾರ್ ಕಾಮಡ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ದೇಗುಲದ ಹಿರಿಯ ಸಿಬಂದಿ ಕೆ. ಶ್ರೀಕೃಷ್ಣ ಭಟ್, ಕೆ.ಎಸ್ ಮಧ್ಯಸ್ಥ, ವಾಸುದೇವ ಹೊಳ್ಳ ಎಲ್ಲಂಗಳ, ಮುರಳಿ ಗಟ್ಟಿ ಪರಕ್ಕಿಲ, ಅಳಕೆ sಟಿ ಭಟ್ ಮೊದಲದವರು ಉಪಸ್ಥಿತರಿದ್ದರು.



