ಕಾಸರಗೋಡು: ನಗರದ ಸೂರ್ಲು ಶ್ರೀ ಗಣೇಶ ಭಜನಾ ಮಂದಿರದಲ್ಲಿ ಶ್ರೀ ಗಣೇಶ ಚತುರ್ಥಿಯ ಅಂಗವಾಗಿ ಧಾರ್ಮಿಕ ಸಭೆ ನಡೆಯಿತು. ಜೈ ಹಿಂದ್ ಆಟ್ರ್ಸ್ ಅಂಡ್ ಸ್ಪೋಟ್ರ್ಸ್ ಕ್ಲಬ್ ನ ಅಧ್ಯಕ್ಷ ಸತೀಶ್ ಕುಮಾರ್ ಸೂರ್ಲು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಸಭೆಯಲ್ಲಿ ಕಾಸರಗೋಡಿನ ಧಾರ್ಮಿಕ ಮುಂದಾಳು ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಇವರಿಗೆ ಶಾಲು, ಪೇಟ, ಹಾರ, ಸ್ಮರಣಿಕೆ ಹಾಗೂ ಗೌರವ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು. ಸನ್ಮಾನ ಪತ್ರವನ್ನು ಮಂದಿರ ಸಮಿತಿ ಹಿರಿಯ ಸದಸ್ಯ ರಘುರಾಮ ವಾಚಿಸಿದರು.,
ಬಾಲಗೋಕುಲ ಜಿಲ್ಲಾ ಕಾರ್ಯದರ್ಶಿ ರಾಜೇಂದ್ರ ಮವ್ವಾರು ಧಾರ್ಮಿಕ ಭಾಷಣ ಮಾಡಿದರು. ವಿನಯ್ ಕುಮಾರ್ ಸೂರ್ಲು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸೇವಾಭಾರತಿ ಕಾಸರಗೋಡು ಜಿಲ್ಲಾಧ್ಯಕ್ಷ ದಿನೇಶ್ ಎಂ.ಟಿ ಹಾಗೂ ಶ್ರಿ ಗಣೇಶ ಭಜನಾ ಮಂದಿರದ ಅಧ್ಯಕ್ಷ ಸೀತಾರಾಮ, ಮಂದಿರ ನವೀಕರಣ ಸಮಿತಿ ಅಧ್ಯಕ್ಷ ಸುರೇಶ್ ಕೆ, ಮಹಿಳಾ ಸಂಘದ ಅಧ್ಯಕ್ಷೆ ರಮಣಿ ಸೂರ್ಲು ಉಪಸ್ಥಿತರಿದ್ದರು.
ಜೈ ಹಿಂದ್ ಆಟ್ರ್ಸ್ ಅಂಡ್ ಸ್ಪೋಟ್ರ್ಸ್ ಕ್ಲಬ್ ನ ಜತೆ ಕಾರ್ಯದರ್ಶಿ ವಿಜಿತ್ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಗಣೇಶ್ ಶೆಟ್ಟಿ ವಂದಿಸಿದರು.



