ಕಾಸರಗೋಡು: ಕರ್ತವ್ಯ ಲೋಪವೆಸಗಿದ ಹಿನ್ನೆಲೆಯಲ್ಲಿ ಸೇವೆಯಿಂದ ಅಮಾನತುಗೊಂಡಿದ್ದ ಪೆÇಲೀಸ್ ಸಿಬ್ಬಂದಿಯೊಬ್ಬ ಮೊಬೈಲ್ ಫೆÇೀನ್ ಕಳವುಗೈದ ಪ್ರಕರಣದಲ್ಲಿ ಬಂಧನಕ್ಕೀಡಾಗಿದ್ದಾನೆ. ಪುಯಿಂಕಾವು ನಿವಾಸಿಯಾಗಿರುವ ಡಿ.ಎಂ. ವಿಪಿನ್ ಕುಮಾರ್ (40) ಬಂಧಿತ.
ಸೇವೆಯಿಂದ ಅಮಾನತುಗೊಂಡಿರುವ ಈತ ಕಳೆದ ಗುರುವಾರ ಬೆಳಿಗ್ಗೆ ತಳಿಪರಂಬ ಶ್ರೀ ರಾಜರಾಜೇಶ್ವರ ಕ್ಷೇತ್ರ ದರ್ಶನಕ್ಕೆ ತಲುಪಿದ ಚಿಟ್ಟಾರಿಕ್ಕಲ್ ನಿವಾಸಿ, ಜ್ಯೋತಿಷಿಯೊಬ್ಬರ ಮೊಬೈಲ್ ಫೆÇೀನ್ ಕಳವುಗೈದು ಪಯ್ಯನ್ನೂರು ಠಾಣೆ ಪೊಲೀಸರ ಅತಿಥಿಯಾಗಿದ್ದಾನೆ.
ರಾಜರಾಜೇಶ್ವರ ಕ್ಷೇತ್ರಗಳಲ್ಲಿ ನಡೆದ ಮೊಬೈಲ್ ಫೆÇೀನ್ ಕಳವು ದೃಶ್ಯ ಅಲ್ಲಿನ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ದೃಶ್ಯಗಳನ್ನು ಪೆÇಲೀಸರು ಪರಿಶೀಲಿಸಿದಾಗ ಕಳವು ನಡೆಸಿರುವುದು ವಿಪಿನ್ ಕುಮಾರ್ ಎಂದು ತಿಳಿದುಬಂದಿತ್ತು. ತಳಿಪರಂಬ ಡಿವೈಎಸ್ಪಿ ಟಿ.ಪಿ. ಸುಮೇಶ್‍ರ ನಿರ್ದೇಶ ಪ್ರಕಾರ ಸಿಐ ಶ್ರೀಕುಮಾರ್, ಎಸ್‍ಐಗಳಾದ ಸ್ಯಾಮ್ಸನ್, ಗೋಪಿನಾಥನ್, ಬಾಲಕೃಷ್ಣನ್ ಮೊದಲಾದವರ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಈತನ ವಶದಲ್ಲಿದ್ದ 3 ಮೊಬೈಲ್ ಫೆÇೀನ್ ಹಾಗೂ 6 ಸಾವಿರ ರೂ. ನಗದು ವಶಪಡಿಸಲಾಗಿದೆ.
ಕುಂಬಳೆ ಠಾಣೆಯಲ್ಲಿ ಪೊಲೀಸ್ ಆಗಿ ಸೇವೆ ಸಲ್ಲಿಸುತ್ತಿದ್ದ ವಿಪಿನ್ ಕುಮಾರ್ ಸರಿಯಾಗಿ ಕೆಲಸ ನಿರ್ವಹಿಸುತ್ತಿರಲಿಲ್ಲವೆನ್ನಲಾಗಿದೆ. ಕರ್ತವ್ಯಕ್ಕೆ ಹಾಜರಾಗದೆ ಗೈರುಹಾಜರಾಗುತ್ತಿದ್ದ ಈತನನ್ನು ನಂತರ ಅಮಾನತುಗೊಳಿಸಿಸಲಾಗಿತ್ತು.

