HEALTH TIPS

ಹಮಾಸ್‌ ದಾಳಿ: ಇಸ್ರೇಲ್‌ಗೆ ಮೊದಲೇ ಎಚ್ಚರಿಕೆ ನೀಡಿದ್ದ ಯುಎಇ, ಈಜಿಪ್ಟ್‌

ಜೆರುಸೆಲೇಂ (AP): 'ಹಮಾಸ್‌ ಬಂಡುಕೋರರು ದಾಳಿ ನಡೆಸಬಹುದು ಎಂದು 2023ರ ಅಕ್ಟೋಬರ್‌ 7ರ ದಾಳಿಗೂ ಮುನ್ನವೆ ಯುಎಇ ಅಧ್ಯಕ್ಷ ಶೇಖ್‌ ಮೊಹಮದ್ ಬಿನ್‌ ಝಾಯೆದ್ ಅಲ್‌ ನಹ್ಯಾನ್‌ ಅವರು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರಿಗೆ ಎಚ್ಚರಿಕೆ ನೀಡಿದ್ದರು' ಎಂದು ಇಸ್ರೇಲ್‌ನ 'ಹಅರಿಜ್‌' ಎಂಬ ಪತ್ರಿಕೆಯು ಇದೇ ಸೆ.7ರಂದು ವರದಿ ಪ್ರಕಟಿಸಿದೆ. 

'ಈ ವರದಿಯ ಕಾರಣಕ್ಕಾಗಿಯೇ ನೆತನ್ಯಾಹು ಅವರು ನಹ್ಯಾನ್‌ ಅವರನ್ನು ರಹಸ್ಯವಾಗಿ ಭೇಟಿ ಮಾಡಲು ತೆರಳಿದ್ದರು. ಭಾನುವಾರ ಇಬ್ಬರು ನಾಯಕರು ಮಾತುಕತೆ ನಡೆಸಿದರು. ಈ ವೇಳೆ 'ಹಅರಿಜ್‌' ಪತ್ರಿಕೆಯ ವರದಿಯನ್ನು ಅಲ್ಲಗಳೆಯುವಂತೆ ನೇತನ್ಯಾಹು ಅವರು ನಹ್ಯಾನ್‌ ಅವರಲ್ಲಿ ಮನವಿ ಮಾಡಿದರು' ಎಂಬ ವಿಚಾರ ಈ ಬಹಿರಂಗವಾಗಿದೆ.

ವರದಿ ಅಲ್ಲಗಳೆಯುವಂತೆ ಮಾಡಿದ ಮನವಿ ಕುರಿತು ಸಭೆಯಲ್ಲಿ ನಡೆದ ಮಾತುಕತೆ ಬಗ್ಗೆ ಖುದ್ದು ಮಾಹಿತಿ ಇರುವ ಕೆಲವು ಅಧಿಕಾರಿಗಳು 'ಎಪಿ' ಸುದ್ದಿ ಸಂಸ್ಥೆ ಸೇರಿ ಕೆಲವು ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ. ನೆತನ್ಯಾಹು ಅವರು ಯುಎಇಗೆ ತೆರಳಿದ ಕುರಿತು ಇಸ್ರೇಲ್‌ನ 'ಚಾನೆಲ್‌ 12 ಟಿವಿ' ವರದಿ ಮಾಡಿತು. ಇದಾದ ಬಳಿಕವೇ ಎರಡೂ ದೇಶಗಳು ಭೇಟಿಯ ಕುರಿತು ಅಧಿಕೃತ ಮಾಹಿತಿ ನೀಡಿವೆ.

'ಇಬ್ಬರೂ ನಾಯಕರು ದ್ವಿಪಕ್ಷೀಯ ಸಂಬಂಧದ ಕುರಿತು ಮಾತುಕತೆ ನಡೆಸಿದ್ದಾರೆ' ಎಂದು ಎರಡೂ ದೇಶಗಳು ಹೇಳಿವೆ. ವರದಿ ಅಲ್ಲಗಳೆಯುವ ಬಗ್ಗೆ ನೆತನ್ಯಾಹು ಅವರು ಮಾಡಿದ ಮನವಿಯ ಕುರಿತ ಸುದ್ದಿಯನ್ನು ಇಸ್ರೇಲ್‌ನ ಪ್ರಧಾನಿ ಕಚೇರಿ ಸ್ಪಷ್ಟ ಮಾತುಗಳಲ್ಲಿ ಅಲ್ಲಗಳೆದಿದೆ. 'ಚಾನೆಲ್‌ 12 ಟಿವಿ' ವಿರುದ್ಧ ಇಸ್ರೇಲ್‌ ಭದ್ರತಾ ಸಂಸ್ಥೆ 'ಶೈನ್‌ ಬೆಟ್‌', ಸೇನಾ ಸೆನ್ಸಾರ್‌ ವಿಭಾಗಕ್ಕೆ ದೂರು ನೀಡಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries