HEALTH TIPS

ಹೊರ್ಮುಜ್‌ಗೆ 'ಟ್ರಂಪ್ ಜಲಸಂಧಿ' ಎಂದು ಮರುನಾಮಕರಣಕ್ಕೆ ಮುಂದಾದ ಡೊನಾಲ್ಡ್ ಟ್ರಂಪ್?

ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ ಸದ್ಯಕ್ಕೆ ಅಂತ್ಯಕಾಣುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಇರಾನ್‌ನ ಮದುವೆ ಮನೆ ಮೇಲೆ ಅಮೆರಿಕ ವೈಮಾನಿಕ ದಾಳಿ ನಡೆಸಿ ಹಲವರನ್ನು ಕೊಂದಿತ್ತು. ಇದರ ಬೆನ್ನಲ್ಲೇ, ಪ್ರತಿ ದಾಳಿ ಸಂಘಟಿಸಿರುವ ಇರಾನ್, ಅಮೆರಿಕ ನೆಲೆಗಳ ಮೇಲೆ ದಾಳಿ ನಡೆಸಿದೆ. 


ಈ ಬೆಳವಣಿಗೆಗಳ ನಡುವೆಯೇ, ಹೊರ್ಮುಜ್ ಜಲಸಂಧಿ ಮೇಲೆ ಅಮೆರಿಕ ಬಹುತೇಕ ಹಿಡಿತ ಸಾಧಿಸಿದೆ ಎಂದು ಹೇಳಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹೊರ್ಮುಜ್ ಜಲಸಂಧಿಗೆ 'ಟ್ರಂಪ್ ಜಲಸಂಧಿ' ಎಂದು ಮರುನಾಮಕರಣಕ್ಕೆ ಶ್ವೇತಭವನಕ್ಕೆ ಪ್ರಸ್ತಾಪ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.

'ಹೊರ್ಮುಜ್ ಜಲಸಂಧಿ ಈಗ ಅಮೆರಿಕದ ಸಂಪೂರ್ಣ ನಿಯಂತ್ರಣದಲ್ಲಿದೆ. ನಾವು ಈಗ ಅದರ ಹೆಸರನ್ನು ಟ್ರಂಪ್ ಜಲಸಂಧಿ ಎಂದು ಬದಲಾಯಿಸಬೇಕೇ??? ಮುಂದೆ ಇದು ಅಮೆರಿಕದಂತೆಯೇ, ಅತ್ಯಂತ ಚಟುವಟಿಕೆಯಿಂದ ಕೂಡಿರುತ್ತದೆ' ಎಂದು ಟ್ರಂಪ್ ತಮ್ಮ ಟ್ರುತ್ ಸೋಶಿಯಲ್‌ನಲ್ಲಿ ಬರೆದುಕೊಂಡಿದ್ದಾರೆ.

ತಮಾಷೆಗೆ ಆಡಿದ ಮಾತುಗಳನ್ನು ನಿಜವಾಗಿಸಿರುವ ಟ್ರಂಪ್

ಈ ಹಿಂದೆ ಹೆಸರು ಬದಲಾವಣೆ ಕುರಿತಂತೆ ಹಲವು ಬಾರಿ ಅಮೆರಿಕ ಅಧ್ಯಕ್ಷರು ಆಡಿದ್ದ ತಮಾಷೆಯ ಮಾತುಗಳು ಬಳಿಕ ಕಾರ್ಯರೂಪಕ್ಕೆ ಬಂದಿದ್ದವು. ಹೊರ್ಮುಜ್ ವಿಚಾರದಲ್ಲೂ ಅದು ನಿಜವಾಗಬಹುದೇ ಎಂಬ ಕುತೂಹಲ ಮೂಡಿದೆ.

ಕೆನಡಾ ಜೊತೆಗಿನ ವ್ಯಾಪಾರ ಸಂಘರ್ಷದ ನಡುವೆ 'ಲೇಕ್ ಒಂಟಾರಿಯೊ' ಹೆಸರನ್ನು 'ಲೇಕ್ ಅಮೆರಿಕ' ಎಂದು ಬದಲಿಸಲು ಟ್ರಂಪ್ ಆದೇಶಿಸಿದ್ದರು. ಅದಾದ, ವಾರದ ಬಳಿಕ ಅವರು ಹೊರ್ಮುಜ್ ಹೆಸರು ಬದಲಿಸುವ ಪ್ರಸ್ತಾಪ ಇಟ್ಟಿದ್ದಾರೆ.

ಅಲ್ಲದೆ, 2025ರ ಜನವರಿಯಲ್ಲಿ 2ನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ 'ಗಲ್ಫ್ ಆಫ್ ಮೆಕ್ಸಿಕೊ' ಹೆಸರನ್ನು 'ಗಲ್ಫ್ ಆಫ್ ಅಮೆರಿಕ' ಎಂದು ಬದಲಾಯಿಸಿದ್ದರು.

ಹೊರ್ಮುಜ್ ಜಲಸಂಧಿ ಮೇಲೆ ಅಮೆರಿಕ ಹಿಡಿತ ಸಾಧಿಸಿರುವ ಬಗ್ಗೆ ಟ್ರಂಪ್ ಪದೇ ಪದೇ ಹೇಳುತ್ತಿದ್ದಾರೆ. ಅಲ್ಲದೇ, ಇದನ್ನು ಅಮೆರಿಕದ ಹೊಸ ಪ್ರದೇಶ ಎಂದು ತೋರಿಸುವ ನಕ್ಷೆಯನ್ನೂ ಹಂಚಿಕೊಂಡಿದ್ದರು.

ಫೆಬ್ರುವರಿಯಲ್ಲಿ ಇಸ್ರೇಲ್ ಜೊತೆ ಸೇರಿ ಅಮೆರಿಕವು ಇರಾನ್ ಮೇಲೆ ದಾಳಿ ನಡೆಸಿ, ಸರ್ವೋಚ್ಛ ನಾಯಕ ಆಯತೊಲ್ಲಾ ಖಮೇನಿ ಹತ್ಯೆ ಮಾಡಿದ ಬಳಿಕ ಉಭಯ ರಾಷ್ಟ್ರಗಳ ನಡುವೆ ಸಂಘರ್ಷ ಭುಗಿಲೆದ್ದಿದೆ. ಇದಕ್ಕೆ ಪ್ರತಿಯಾಗಿ ಹೊರ್ಮುಜ್ ಜಲಸಂಧಿಗೆ ತಡೆಹಾಕುವ ಮೂಲಕ ಇರಾನ್, ಜಾಗತಿಕ ತೈಲ ಬಿಕ್ಕಟ್ಟು ಸೃಷ್ಟಿಸಿತ್ತು. ಆ ಬಳಿಕ, ಹಲವು ಸುತ್ತಿನ ಶಾಂತಿ ಒಪ್ಪಂದದ ಮಾತುಕತೆ ನಡೆದರೂ ಫಲ ನೀಡಿಲ್ಲ. ಮಾತುಕತೆ ನಡುವೆಯೇ ಪರಸ್ಪರ ದಾಳಿ ನಡೆಸುವ ಮೂಲಕ ಎರಡೂ ದೇಶಗಳು ಸುದೀರ್ಘ ಸಂಘರ್ಷಕ್ಕೆ ಸಾಕ್ಷಿಯಾಗಿವೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries