HEALTH TIPS

ಇರಾನ್ ಮೇಲಿನ ದಾಳಿಯಲ್ಲಿ ಅಮೆರಿಕದಿಂದ ಸಂಭವನೀಯ ಯುದ್ಧಾಪರಾಧ: ವಿಶ್ವಸಂಸ್ಥೆ ತಜ್ಞರ ಉಲ್ಲೇಖ

ಜಿನೀವಾ: ಇರಾನ್‍ನಲ್ಲಿ ನಡೆದ ಎರಡು ವಾಯುದಾಳಿಗಳಲ್ಲಿ ಅಮೆರಿಕ ಯುದ್ಧ ಅಪರಾಧಗಳನ್ನು ಎಸಗಿದೆ ಎಂದು ನಂಬಲು ಸೂಕ್ತ ಆಧಾರಗಳು ಇವೆ ಎಂದು ವಿಶ್ವಸಂಸ್ಥೆಯ ಉನ್ನತ ಮಾನವ ಹಕ್ಕುಗಳ ಸಂಸ್ಥೆಯಿಂದ ನಿಯೋಜಿಸಲ್ಪಟ್ಟ ಮಾನವ ಹಕ್ಕುಗಳ ತಜ್ಞರು ತಿಳಿಸಿದ್ದಾರೆ. ಇದರಲ್ಲಿ ದಕ್ಷಿಣದ ನಗರವಾದ ಮಿನಾಬ್‍ನ ಶಾಲೆಯೊಂದರ ಮೇಲಿನ ದಾಳಿಯೂ ಸೇರಿದೆ.


ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 178 ನಾಗರಿಕರು ಮೃತಪಟ್ಟ ಎರಡು ವಾಯುದಾಳಿಗಳ ಮೇಲೆ ಈ ಶೋಧನೆಗಳು ಗಮನ ಹರಿಸಿವೆ ಎಂದು ಇರಾನ್ ಕುರಿತ ಅಂತಾರಾಷ್ಟ್ರೀಯ ಸತ್ಯಶೋಧನಾ ಸಮಿತಿ ಹೇಳಿದೆ. ಬಾಂಗ್ಲಾದೇಶದ ನ್ಯಾಯಶಾಸ್ತ್ರಜ್ಞೆ ಸಾರಾ ಹುಸೇನ್ ಅವರ ಅಧ್ಯಕ್ಷತೆಯಲ್ಲಿರುವ ಇರಾನ್ ಕುರಿತ ಸತ್ಯಶೋಧನಾ ಸಮಿತಿಯು ಸ್ವತಂತ್ರ ತಜ್ಞರನ್ನು ಒಳಗೊಂಡಿದ್ದು, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ 2022ರಲ್ಲಿ ರಚಿಸಲ್ಪಟ್ಟಿದೆ.

ಫೆಬ್ರವರಿಯಲ್ಲಿ ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ಧ ಪ್ರಾರಂಭವಾದ ಬಳಿಕ ಮಿನಾಬ್‍ನ ಶಜರೆ ತಯ್ಯಿಬೆ ಶಾಲೆಯ ಮೇಲೆ ಕನಿಷ್ಠ ಒಂದು ಅಮೆರಿಕನ್ ಕ್ಷಿಪಣಿ ಅಪ್ಪಳಿಸಿದೆ. ಈ ದಾಳಿಯಲ್ಲಿ 168 ಜನರು ಮೃತರಾಗಿದ್ದಾರೆ ಮತ್ತು ಅವರಲ್ಲಿ ಹೆಚ್ಚಿನವರು ಮಕ್ಕಳು ಎಂದು ಇರಾನ್‍ನ ಸರಕಾರಿ ಮಾಧ್ಯಮಗಳು ಹೇಳಿವೆ.

ನಾಗರಿಕರ ಸಾವು ನೋವು ಅಥವಾ ನಾಗರಿಕ ಆಸ್ತಿಪಾಸ್ತಿಗಳಿಗೆ ಹಾನಿಯನ್ನುಂಟುಮಾಡುವ ವಿವೇಚನಾರಹಿತ ದಾಳಿಗಳನ್ನು ನಡೆಸಿ ಅಮೆರಿಕ ಯುದ್ಧ ಅಪರಾಧ ಎಸಗಿದೆ ಎಂದು ನಂಬಲು ಸಮಿತಿಗೆ ಸೂಕ್ತ ಆಧಾರಗಳು ದೊರೆತಿವೆ ಎಂದು ಸತ್ಯಶೋಧನಾ ತಂಡವು ಹೇಳಿಕೆಯಲ್ಲಿ ತಿಳಿಸಿದೆ.

ಯುಎನ್ ಬೆಂಬಲಿತ ತಂಡವು ಎರಡು ದಾಳಿಗಳ ಮೇಲೆ ಯುದ್ಧ ಅಪರಾಧಗಳ ಆರೋಪಗಳನ್ನು ಉಲ್ಲೇಖಿಸಿದೆ - ಒಂದು "ಸ್ಪಷ್ಟವಾಗಿ ಗುರುತಿಸಬಹುದಾದ" ಶಾಲೆಯ ಮೇಲಿನ ಟೊಮಾಹಾಕ್ ಕ್ಷಿಪಣಿ ದಾಳಿ, ಮತ್ತು ಇನ್ನೊಂದು ಫೆಬ್ರವರಿ 28 ರಂದೇ ಲೇಮೆರ್ಡ್‍ನ ದಕ್ಷಿಣ ನಗರದ ಕ್ರೀಡಾ ಸಂಕೀರ್ಣ ಮತ್ತು ವಸತಿ ಪ್ರದೇಶದ ಮೇಲಿನ ನಿಖರ ಕ್ಷಿಪಣಿ ದಾಳಿ. ಲೇಮೆರ್ಡ್ ದಾಳಿಯಲ್ಲಿ 22 ಪುರುಷರು ಮತ್ತು ಮಹಿಳೆಯರು ಮೃತರಾಗಿದ್ದಾರೆ ಎಂದು ವಿಶ್ವಸಂಸ್ಥೆ ಬೆಂಬಲಿತ ತಂಡ ಹೇಳಿದೆ. ಆದರೆ ಲೇಮೆರ್ಡ್ ಮೇಲಿನ ದಾಳಿಯ ಹೊಣೆಗಾರಿಕೆಯನ್ನು ವಿಶ್ವಸಂಸ್ಥೆಯ ಸೆಂಟ್ರಲ್ ಕಮಾಂಡ್ ನಿರಾಕರಿಸಿದೆ. ಶಾಲೆಯ ಮೇಲಿನ ಬಾಂಬ್ ದಾಳಿಯ ಬಗ್ಗೆ ಅಮೆರಿಕದ ರಕ್ಷಣಾ ಇಲಾಖೆ ನಡೆಸಿದ ತನಿಖೆಯ ವಿವರಗಳನ್ನು ಬಿಡುಗಡೆ ಮಾಡಲು ಅಥವಾ ನೇರವಾಗಿ ಹೊಣೆಗಾರಿಕೆಯನ್ನು ಒಪ್ಪಿಕೊಳ್ಳಲು ಟ್ರಂಪ್ ಆಡಳಿತವು ಇನ್ನೂ ಮುಂದಾಗಿಲ್ಲ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries