HEALTH TIPS

ಮಹಾರಾಷ್ಟ್ರ ಸಚಿವಾಲಯಕ್ಕೆ ಬರಲಿದೆ ಪಂಚಾಂಗ ತಿಳಿಸುವ ಯಂತ್ರ

ಮುಂಬೈ: ಸಚಿವಾಲಯ ಮತ್ತು ವಿಧಾನಮಂಡಲದ ಕಟ್ಟಡಗಳಲ್ಲಿ ಎರಡು 'ಖಗೋಳ ಸಮಯ ಪ್ರದರ್ಶಕ ಯಂತ್ರಗಳನ್ನು' ಅಳವಡಿಸಲು ಮಹಾರಾಷ್ಟ್ರ ಸರ್ಕಾರ ಅನುಮೋದನೆ ನೀಡಿದೆ. 


ಜಿಪಿಎಸ್‌ ಸಮಯದ ಜತೆಗೆ ಸಾಂಪ್ರದಾಯಿಕ ಭಾರತೀಯ ಖಗೋಳಶಾಸ್ತ್ರವನ್ನು ಪ್ರದರ್ಶಿಸುವ ಉದ್ದೇಶವನ್ನು ಮಹಾರಾಷ್ಟ್ರ ಸರ್ಕಾರ ಹೊಂದಿದೆ.

ಸಾಂಪ್ರದಾಯಿಕ ಪಂಚಾಂಗ, ಗ್ರಹಗಳ ಸ್ಥಾನಗಳು ಮತ್ತು ಚಲನೆಗಳು, ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯ, ಪ್ರಮುಖ ದಿನಗಳು ಮತ್ತು ಕಾಲಘಟ್ಟಗಳನ್ನು ಈ ಸಾಧನಗಳು ಪ್ರದರ್ಶಿಸುತ್ತವೆ. ಅಲ್ಲದೆ ಭಾರತೀಯ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಮತ್ತು ರಾಷ್ಟ್ರೀಯ ಕಾರ್ಯಕ್ರಮಗಳ ಕುರಿತ ಮಾಹಿತಿಯನ್ನೂ ಇವು ಬಿತ್ತರಿಸಬಲ್ಲವು.

ಈ ಸಾಧನಗಳ ಖರೀದಿಸಲು ರಾಜ್ಯ ಸರ್ಕಾರ ₹10.97 ಲಕ್ಷ ವ್ಯಯಿಸಲಿದೆ ಎಂದು ಸಾಂಸ್ಕೃತಿಕ ವ್ಯವಹಾರಗಳ ಇಲಾಖೆ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

ಈ ರೀತಿಯ ಯಂತ್ರಗಳನ್ನು ತಯಾರಿಸುವ ಏಕೈಕ ಸಂಸ್ಥೆಯಾಗಿರುವ ಆರ್ಷ ವಿದ್ಯಾ ಪ್ರೈವೇಟ್‌ ಲಿಮಿಟೆಡ್‌ ಈ ಸಾಧನಗಳನ್ನು ಪೂರೈಸಲು ಆಸಕ್ತಿ ತೋರಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. 





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries