HEALTH TIPS

ಚಡ್ಡಾ ಹೆಸರು ಮತ್ತೆ ಮತದಾರರ ಪಟ್ಟಿಗೆ ಸೇರ್ಪಡೆ: ಸಿಇಒ ಸ್ಪಷ್ಟನೆ ಹೀಗಿದೆ

ನವದೆಹಲಿ: ಚುನಾವಣಾ ಆಯೋಗದ ನಿಯಮಗಳ ಪ್ರಕಾರವೇ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅವರ ಹೆಸರನ್ನು ರಾಜಿಂದರ್ ನಗರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ದೆಹಲಿಯ ಮುಖ್ಯ ಚುನಾವಣಾಧಿಕಾರಿ (ಸಿಇಒ) ಸ್ಪಷ್ಟಪಡಿಸಿದ್ದಾರೆ.


ಚಡ್ಡಾ ಅವರು ಆಗಸ್ಟ್ 26ರಂದು ಫಾರ್ಮ್-6 ಸಲ್ಲಿಸಿ ಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಳ್ಳಲು ಅರ್ಜಿ ಸಲ್ಲಿಸಿದ್ದರು.

ಅಗತ್ಯ ದಾಖಲೆಗಳ ಪರಿಶೀಲನೆ ಹಾಗೂ ಕಡ್ಡಾಯ ಏಳು ದಿನಗಳ ನೋಟಿಸ್ ಅವಧಿ ಪೂರ್ಣಗೊಂಡ ಬಳಿಕ, ಸೆಪ್ಟೆಂಬರ್ 2ರಂದು ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಒ) ಅರ್ಜಿಯನ್ನು ಅನುಮೋದಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ

ಆದರೆ, ಈ ವಿವರಣೆಯನ್ನು ಆಮ್ ಆದ್ಮಿ ಪಕ್ಷ (ಎಎಪಿ) ತಳ್ಳಿಹಾಕಿದ್ದು, ಚಡ್ಡಾ ಅವರ ಹೆಸರನ್ನು 'ಹಿಂಬಾಗಿಲ ಮೂಲಕ' ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಆರೋಪಿಸಿದೆ.

'ಚಡ್ಡಾ ಸಲ್ಲಿಸಿದ ಫಾರ್ಮ್-6 ಅನ್ನು ಸಾರ್ವಜನಿಕಗೊಳಿಸಬೇಕು ಮತ್ತು ಸಾಮಾನ್ಯ ಮತದಾರರಂತೆ ನಾಗರಿಕರಿಗೂ ಅದರ ವಿರುದ್ಧ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕು' ಎಂದು ಎಎಪಿ ಮಾಧ್ಯಮ ವಿಭಾಗದ ಮುಖ್ಯಸ್ಥ ಅನುರಾಗ್ ಧಾಂಡಾ ಆಗ್ರಹಿಸಿದ್ದಾರೆ.

'ಕರಡು ಮತದಾರರ ಪಟ್ಟಿಯಲ್ಲಿ 746 ಮತದಾರರಿದ್ದಾಗ, ಚಡ್ಡಾ ಅವರ ಹೆಸರು 747ನೇ ಕ್ರಮ ಸಂಖ್ಯೆಯಲ್ಲಿ ಹೇಗೆ ಕಾಣಿಸಿಕೊಂಡಿತು?' ಎಂದೂ ಅವರು ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸಿಇಒ, ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಅವಧಿಯಲ್ಲಿ ಸೇರ್ಪಡೆಯಾಗುವ ಹೊಸ ಹೆಸರುಗಳಿಗೆ ಕರಡು ಪಟ್ಟಿಯ ಕೊನೆಯ ಕ್ರಮ ಸಂಖ್ಯೆಯ ನಂತರದ ಮುಂದುವರಿದ ಸಂಖ್ಯೆಯನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries