HEALTH TIPS

ರಾಹುಲ್ ಕಾರ್ಯಕ್ರಮದಲ್ಲಿ ಮಿಮಿಕ್ರಿ ಪ್ರಹಸನ; ಕಾಂಗ್ರೆಸ್ ಜೋಕರ್‌ಗಳ ಪಕ್ಷ: ಬಿಜೆಪಿ

ನವದೆಹಲಿ: ಕಾಂಗ್ರೆಸ್ ಪಕ್ಷವು ಸರ್ಕಸ್‌ ರೀತಿಯಲ್ಲಿ ಬದಲಾಗಿದೆ. ರಾಹುಲ್ ಗಾಂಧಿ ಅವರು 'ಅಸಂಸ್ಕರಿ ನರಾಜ್ ಫುಫಾ'(ಸಂಸ್ಕಾರವಿಲ್ಲದ, ಅತೃಪ್ತ ಸೋದರಮಾವ) ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.


ಇಂದೋರ್‌ನಲ್ಲಿ ನಡೆದ ಛತ್ರೋಂ ಕಿ ಗೂಂಜ್‌ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಜತೆಯಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಒಬ್ಬರು ಪ್ರಧಾನಿ ನರೇಂದ್ರ ಮೋದಿ ಅವರ ಮಿಮಿಕ್ರಿ ಮಾಡಿದ ಘಟನೆಯು ವಿವಾದಕ್ಕೆ ಕಾರಣವಾಗಿದ್ದು, ಇದನ್ನು ಬಿಜೆಪಿ ಟೀಕಿಸಿದೆ. 

ಪ್ರಧಾನಿ ಮೋದಿ ಅವರು ಜಗತ್ತಿನ 'ಅತ್ಯಂತ ಜನಪ್ರಿಯ' ಚುನಾಯಿತ ನಾಯಕರಾಗಿದ್ದಾರೆ ಎಂಬುದು ಭಾರತೀಯರಿಗೆ ಹೆಮ್ಮೆ ತಂದಿದೆ. ಆದರೆ, ಸುಮಾರು ಆರು ದಶಕಗಳ ಕಾಲ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಪಕ್ಷವೊಂದು, ಸರ್ಕಸ್ ಆಗಿ ಬದಲಾಗುತ್ತದೆ ಎಂದು ನಾನು ಊಹಿಸಿರಲಿಲ್ಲ. ಅದು ಜೋಕರ್‌ಗಳ ಪಕ್ಷವಾಗಿ ಬದಲಾಗಿದೆ. ವಯಸ್ಸಾದ ತಾಯಿ ಮತ್ತು ಭಾರತದ ಪ್ರಧಾನ ಮಂತ್ರಿಯವರನ್ನು ಗೇಲಿ ಮಾಡಲು ನಿಮಗೆ ಸ್ವಲ್ಪವೂ ನಾಚಿಕೆಯಾಗುವುದಿಲ್ಲವೇ? ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಟೀಕಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಮೃತಿ ಇರಾನಿ, 'ಮನುಷ್ಯನಿಗೆ ವಿನಾಶ ಕಾಲ ಬಂದಾಗ, ಮೊದಲು ಅವನ ವಿವೇಕವೇ ಸತ್ತುಹೋಗುತ್ತದೆ' ಎಂದು ಬರೆದುಕೊಂಡಿದ್ದಾರೆ.

ಕೇಂದ್ರ ಸಚಿವ ಪಿಯೂಷ್ ಗೋಯಲ್, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಂದೀಪ್ ಪಾಠಕ್ ಸೇರಿದಂತೆ ಬಿಜೆಪಿಯ ಹಲವು ನಾಯಕರು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ್ದಾರೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries