HEALTH TIPS

ಮತಪತ್ರವೇ ಪ್ರಜಾಪ್ರಭುತ್ವದ ಅಸ್ತ್ರ: ಇವಿಎಂ ಬದಲು ಬ್ಯಾಲಟ್ ಬಳಸಲು ಖರ್ಗೆ ಆಗ್ರಹ

ನವದೆಹಲಿ: ಮುಂಬರುವ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರ (ಇವಿಎಂ) ಬದಲಿಗೆ ಸಾಂಪ್ರದಾಯಿಕ ಮತಪತ್ರಗಳನ್ನೇ (ಬ್ಯಾಲಟ್ ಪೇಪರ್) ಬಳಸಬೇಕು ಹಾಗೂ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಜಾರಿಗೂ ಮುನ್ನ ಇದ್ದ ಮತದಾರರ ಪಟ್ಟಿಯನ್ನೇ ಅಳವಡಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಪಾದಿಸಿದ್ದಾರೆ.  


ಬುಧವಾರ ನಡೆದ 'ಇಂಡಿಯಾ' ಒಕ್ಕೂಟದ ಸಭೆಯಲ್ಲಿ ಮಾತನಾಡಿದ ಅವರು, ಒಕ್ಕೂಟವು ಜಂಟಿ ಕ್ರಿಯಾ ಯೋಜನೆಯೊಂದಿಗೆ ಒಗ್ಗಟ್ಟಿನಿಂದ ಮುನ್ನಡೆಯಬೇಕೆಂದು ಒತ್ತಿ ಹೇಳಿದ್ದಾರೆ.

'ಪ್ರಜಾಪ್ರಭುತ್ವದಲ್ಲಿ ಪಾರದರ್ಶಕತೆಯನ್ನು ತೊಡೆದು ಹಾಕಲು ನಾವು ಬಿಡುವುದಿಲ್ಲ. ನಮ್ಮ ಗಣರಾಜ್ಯದ ಮೂಲತತ್ವವಾದ 'ಒಬ್ಬ ವ್ಯಕ್ತಿ, ಒಂದು ಮತ, ಒಂದು ಮೌಲ್ಯ' ಬಲಹೀನಗೊಳ್ಳಲೂ ಬಿಡುವುದಿಲ್ಲ' ಎಂದಿದ್ದಾರೆ.

ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದ ಈ ಸಭೆಯಲ್ಲಿ, ಮತಪತ್ರ ಮತ್ತು ಜನಾಭಿಪ್ರಾಯ ಸಾರ್ವಜನಿಕರ ಆಸ್ತಿ. ಸರ್ಕಾರದ ಅಂತಿಮ ಅಧಿಕಾರ ದೇಶದ ಜನರ ಕೈಯಲ್ಲೇ ಇರಬೇಕು ಎಂದು ಖರ್ಗೆ ಹೇಳಿದ್ದಾರೆ.

ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವ ಮುನ್ನ ಸೂಕ್ತ ನೋಟಿಸ್, ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಬೇಕು. ಆಡಳಿತಾತ್ಮಕ ವೈಫಲ್ಯ, ದಾಖಲೆಗಳ ಕೊರತೆ ಅಥವಾ ಅರಿವಿನ ಕೊರತೆಯಿಂದಾಗಿ ಅರ್ಹ ಮತದಾರರು ಸಂವಿಧಾನಾತ್ಮಕ ಹಕ್ಕಿನಿಂದ ವಂಚಿತರಾಗದಂತೆ ತಡೆಯಬೇಕು ಎಂದು ಹೇಳಿದ್ದಾರೆ.

ಮೊದಲ ಬಾರಿಗೆ ಮತದಾನ ಮಾಡಲು ಅರ್ಹರಾಗಿರುವ ಯುವಕರಿಗೆ ಸರಳ ಮತ್ತು ಸುಲಭ ಮತದಾರರ ನೋಂದಣಿ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದೂ ತಿಳಿಸಿದ್ಧಾರೆ.

ಇಡೀ ರಾಜಕೀಯ ಕ್ಷೇತ್ರದಲ್ಲಿ ವಿಶ್ವಾಸಾರ್ಹತೆ ಉಳಿಸಿಕೊಳ್ಳುವಂತಹ ಮತ್ತು ಸಾಂಸ್ಥಿಕ ಹೊಣೆಗಾರಿಕೆ ಹೊಂದಿರುವ ಚುನಾವಣೆ ಆಯೋಗ ಅಗತ್ಯವಿದೆ ಎಂದಿದ್ದಾರೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries