HEALTH TIPS

Come To Iran!: ಮೈನ್‌ಸ್ವೀಪರ್‌ ಗೇಮ್ ಪೋಸ್ಟ್ ಮಾಡಿ ಅಮೆರಿಕ ಕಾಲೆಳೆದ ಇರಾನ್

ಟೆಹರಾನ್: ಹೊರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ, ಸಿಯೆರಾ ಲಿಯೋನ್‌ನಲ್ಲಿರುವ ಇರಾನ್ ರಾಯಭಾರ ಕಚೇರಿ, ಅಮೆರಿಕವನ್ನು ಅಣಕಿಸುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡಿದೆ. 


'ಹಬೀಬಿ, ಇರಾನ್‌ಗೆ ಬನ್ನಿ!'

(Habibi (Uncle Sam), come to Iran!) ಎಂಬ ಶೀರ್ಷಿಕೆಯೊಂದಿಗೆ, ಹೊರ್ಮುಜ್ ಜಲಸಂಧಿಯ 3ಡಿ ನಕ್ಷೆಯಲ್ಲಿ 'ಮೈನ್‌ಸ್ವೀಪರ್‌' (Minesweeper) ಗೇಮ್ ಆಡುತ್ತಿರುವಂತಹ 35 ಸೆಕೆಂಡ್‌ಗಳ ಅನಿಮೇಟೆಡ್ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಜಲಸಂಧಿಯಲ್ಲಿ ಅಮೆರಿಕ ಇತ್ತೀಚೆಗಷ್ಟೇ ರಾಕೆಟ್ ಲಾಂಚರ್‌ಗಳ ಮೇಲೆ ದಾಳಿ ನಡೆಸಿದ್ದನ್ನು ಖಂಡಿಸಿ ಈ ಪೋಸ್ಟ್ ಮಾಡಲಾಗಿದೆ.

ದಾಳಿ-ಪ್ರತಿದಾಳಿ ತೀವ್ರ:

ಭಾನುವಾರ ಇರಾನ್‌ನ ದ್ವೀಪವೊಂದರಲ್ಲಿರುವ ರಾಕೆಟ್ ಲಾಂಚರ್‌ಗಳ ಮೇಲೆ ಅಮೆರಿಕ ಪಡೆಗಳು ದಾಳಿ ಮಾಡಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಜೋರ್ಡಾನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ದಾಳಿ ಮಾಡಿತ್ತು.

ಇರಾನ್ ಈ ಲಾಂಚರ್‌ಗಳನ್ನು ಬಳಸಿ ಜಲಸಂಧಿಯಲ್ಲಿ ಜಲಬಾಂಬ್‌/ ಸ್ಪೋಟಕ ಅಳವಡಿಸಲು ಸಂಚು ರೂಪಿಸುತ್ತಿತ್ತು ಎಂಬುದು ಅಮೆರಿಕದ ಆರೋಪವಾಗಿತ್ತು.

ಇರಾನ್ ಮಿಲಿಟರಿ ನೆಲೆಗಳ ಮೇಲೆ ಅಮೆರಿಕ ಸರಣಿ ದಾಳಿ ನಡೆಸಿದ್ದು, ಒಂದು ವೇಳೆ ಇರಾನ್ ಪ್ರತಿದಾಳಿ ನಡೆಸಿದರೆ 'ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನಲ್ಲಿ ಉಳಿಯುವುದು ತೀರ ಕಡಿಮೆ' ಎಂದು ಟ್ರಂಪ್ ಬೆದರಿಕೆ ಹಾಕಿದ್ದಾರೆ.

ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆ, ರೇಡಾರ್, ಸೇನಾ ಸಂಪರ್ಕ ಸಾಧನಗಳನ್ನೇ ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಅಮೆರಿಕದ 'ಸೆಂಟ್ರಲ್ ಕಮಾಂಡ್' ತಿಳಿಸಿದೆ. ಆದರೆ, 'ದಕ್ಷಿಣ ಇರಾನ್‌ನಲ್ಲಿ ಮದುವೆ ಸಮಾರಂಭ ನಡೆಯುತ್ತಿದ್ದ ಸ್ಥಳದ ಮೇಲೆ ಅಮೆರಿಕ ನಡೆಸಿದ ದಾಳಿಯಿಂದಾಗಿ ಮಗು ಸೇರಿದಂತೆ ನಾಲ್ವರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ' ಎಂದು ಇರಾನ್‌ನ ರೆಡ್‌ ಕ್ರೆಸೆಂಟ್‌ ಸೊಸೈಟಿ ಮಂಗಳವಾರ ತಿಳಿಸಿದೆ.

ಈ ಆರೋಪವನ್ನು ನಿರಾಕರಿಸಿದ ಅಮೆರಿಕ ಸೇನಾ ವಕ್ತಾರ ಟಿಮೋಥಿ ಹಾಕಿನ್ಸ್, 'ನಾವು ಎಂದಿಗೂ ಸಾರ್ವಜನಿಕರನ್ನು ಗುರಿಯಾಗಿಸುವುದಿಲ್ಲ' ಎಂದಿದ್ದಾರೆ.


Habibi (Uncle Sam), come to Iran!







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries