HEALTH TIPS

ಜಂತರ್ ಮಂತರ್ ಪ್ರತಿಭಟನೆ| FR ಸಾಫ್ಟ್‌ವೇರ್ ಗುರುತಿಸಿರುವ 25 ಜನರು ಪೋಲಿಸರ ಪ್ರಕಾರ ಆಗ ಜೈಲಿನಲ್ಲಿದ್ದರು: ವರದಿ

ನವದೆಹಲಿ:  ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಜಂತರ್ ಮಂತರ್‌ನಲ್ಲಿ ನಡೆದ ಯುವಜನರ ಪ್ರತಿಭಟನೆಯ ವೇಳೆ ಸ್ಥಳದಲ್ಲಿದ್ದವರ ಪೈಕಿ ಮುಖ ಗುರುತಿಸುವ ಫೇಷಿಯಲ್ ರೆಕಗ್ನಿಷನ್ (ಎಫ್‌ಆರ್) ಸಾಫ್ಟ್‌ವೇರ್ ಗುರುತಿಸಿದ 2,873 ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳ ಪೈಕಿ 25 ಜನರು ಪೊಲೀಸರು ಮತ್ತು ನ್ಯಾಯಾಲಯದ ದಾಖಲೆಗಳ ಪ್ರಕಾರ ಆ ಸಮಯದಲ್ಲಿ ಜೈಲಿನಲ್ಲಿದ್ದರು ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.


ಜುಲೈ 20ರಂದು ಸಂಸತ್ ಭವನಕ್ಕೆ ಪ್ರತಿಭಟನಾ ಜಾಥಾದ ಸಂದರ್ಭದಲ್ಲಿ ಪೊಲೀಸರು ಅತಿರೇಕದ ಬಲಪ್ರಯೋಗ ಮಾಡಿದ್ದಾರೆ ಎಂಬ ಆರೋಪದ ವಿಚಾರಣೆಗೆ ಸಂಬಂಧಿಸಿದಂತೆ ಆಗಸ್ಟ್ 17 ರಂದು ಪೊಲೀಸರು ಸರ್ವೋಚ್ಚ ನ್ಯಾಯಾಲಯಕ್ಕೆ ಈ ಮಾಹಿತಿಯನ್ನು ಸಲ್ಲಿಸಿದ್ದರು.

ಫೇಷಿಯಲ್ ರೆಕಗ್ನಿಷನ್ ಸಾಫ್ಟ್‌ವೇರ್ ಪ್ರತಿಭಟನಾ ಸ್ಥಳದಲ್ಲಿದ್ದವರನ್ನು ಗುರುತಿಸಿದ್ದು, ಅವರ ವಿವರಗಳು ಪೊಲೀಸ್ ದತ್ತಾಂಶ ಕೋಶದಲ್ಲಿರುವ ದಾಖಲೆಗಳಿಗೆ ತಾಳೆಯಾಗಿವೆ ಎಂದೂ ಪೋಲಿಸರು ತಿಳಿಸಿರುವುದಾಗಿ ವರದಿಯು ಹೇಳಿದೆ.

ಆದರೆ ಹೀಗೆ ಗುರುತಿಸಲ್ಪಟ್ಟವರು ಆರೋಪಿಗಳೇ, ಅಪರಾಧಿಗಳೇ ಅಥವಾ ಕೇವಲ ಕ್ರಿಮಿನಲ್ ಪ್ರಕರಣಗಳಲ್ಲಿ ಹೆಸರಿಸಲ್ಪಟ್ಟವರೇ ಎನ್ನುವುದನ್ನು ಪೊಲೀಸರು ಸ್ಪಷ್ಟಪಡಿಸಿಲ್ಲ.

ಜೈಲಿನಲ್ಲಿದ್ದರು ಎಂದು ಹೇಳಲಾಗಿದ್ದರೂ ಪ್ರತಿಭಟನಾ ಸ್ಥಳದಲ್ಲಿದ್ದ ಈ 25 ಜನರ ಪೈಕಿ 17 ಮಂದಿ ಕೊಲೆ ಆರೋಪ, ನಾಲ್ವರು ಅತ್ಯಾಚಾರ ಆರೋಪ ಮತ್ತು ನಾಲ್ವರು ಕೊಲೆ ಯತ್ನ ಆರೋಪ ಎದುರಿಸುತ್ತಿದ್ದಾರೆ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.

ಮುಖ ಗುರುತಿಸುವ ಸಿಸ್ಟಮ್‌ನ ಫಲಿತಾಂಶದ ಆಧಾರವೊಂದನ್ನೇ ನೆಚ್ಚಿಕೊಂಡು ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಪೊಲೀಸರು ತಮ್ಮ ಅಫಿಡವಿಟ್‌ನಲ್ಲಿ ನ್ಯಾಯಾಲಯಕ್ಕೆ ತಿಳಿಸಿದ್ದರು. ಮುಖ ಗುರುತಿಸಲ್ಪಟ್ಟ ನಂತರ ವ್ಯಕ್ತಿಯ ವಿವರಗಳು ಈಗಾಗಲೇ ಪೊಲೀಸ್ ದಾಖಲೆಗಳಲ್ಲಿ ಇರುವುದರಿಂದ ಕ್ಷೇತ್ರ ಪರಿಶೀಲನೆ ನಡೆಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ವ್ಯಕ್ತಿಯು ಸ್ಥಳದಲ್ಲಿ ಉಪಸ್ಥಿತನಿದ್ದ ಎನ್ನುವುದು ಕಂಡುಬಂದರೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಯುವಜನರ ಪ್ರತಿಭಟನೆಗೆ ಸಂಬಂಧಿಸಿದಂತೆ ದಾಖಲಾದ ಎಲ್ಲಾ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ಕೇಂದ್ರ ಸರಕಾರವು ಸೋಮವಾರ ಸರ್ವೋಚ್ಚ ನ್ಯಾಯಾಲಯವನ್ನು ಕೋರಿತ್ತು. ಆದರೆ ಪ್ರತಿಭಟನಾ ಸ್ಥಳದಲ್ಲಿದ್ದ ಕ್ರಿಮಿನಲ್ ಹಿನ್ನೆಲೆಯುಳ್ಳ 2,873 ವ್ಯಕ್ತಿಗಳ ವಿರುದ್ಧದ ತನಿಖೆಯನ್ನು ಮುಂದುವರಿಸುವುದಾಗಿ ಅದು ತಿಳಿಸಿತ್ತು. ದೇಹಕ್ಕೆ ಹಾನಿ ಅಥವಾ ಆಸ್ತಿಗೆ ಹಾನಿಯನ್ನು ತನಿಖೆಯು ಕೇಂದ್ರೀಕರಿಸಲಿದೆ ಎಂದು ಅದು ಹೇಳಿತ್ತು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries