HEALTH TIPS

ಹಬ್ಬ- ರಜೆ: IRCTCಯಲ್ಲಿ ಒಂದೇ ದಿನ 20 ಲಕ್ಷ ಟಿಕೆಟ್ ಬುಕಿಂಗ್, ಹೊಸ ದಾಖಲೆ!

ಹಬ್ಬದ ಹಿನ್ನೆಲೆ ಸಾಲು ಸಾಲು ರಜೆ ಇರುವ ಕಾರಣ, ನಗರಗಳಿಂದ ಊರಿಗೆ ತೆರಳುವವರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಬಸ್‌, ರೈಲುಗಳ ಟಿಕೆಟ್‌ ಬುಕಿಂಗ್‌ ಕೂಡ ದಾಖಲೆ ಬರೆದಿದೆ.


ಈ ಬಗ್ಗೆ ಭಾರತೀಯ ರೈಲ್ವೆ (ಐಆರ್‌ಸಿಟಿಸಿ) ಮಾಹಿತಿ ಹಂಚಿಕೊಂಡಿದ್ದು, ಸೆ.7ರಂದು ಒಂದೇ ದಿನ ಬರೋಬ್ಬರಿ 20 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಬುಕ್‌ ಆಗಿವೆ.

ಇದು ದಾಖಲೆಯಾಗಿದೆ. ಅದೇ ರೀತಿ ಸೆ.8 ರಂದು 19.50 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಬುಕ್‌ ಆಗಿವೆ ಎಂದು ಹೇಳಿದೆ.

ಕಳೆದ ವರ್ಷದ ಹಬ್ಬದ ಅವಧಿಯಲ್ಲಿ ಒಂದೇ ದಿನ 18 ಲಕ್ಷ ಟಿಕೆಟ್‌ ಬುಕ್‌ ಆಗಿದ್ದವು. ಈ ಸಲ ಇದರ ಪ್ರಮಾಣ ಶೇ 6 ರಷ್ಟು ಹೆಚ್ಚಾಗಿದೆ. ಶೇ 89ರಷ್ಟು ಸೀಟುಗಳ ಕಾಯ್ದಿರಿಸುವಿಕೆ ಆನ್‌ಲೈನ್‌ನಲ್ಲೇ ಆಗಿದೆ. ಒತ್ತಡ ನಿಭಾಯಿಸಲು ಹೊಸ ಸರ್ವರ್‌ಗಳನ್ನು ಅಳವಡಿಸಲಾಗಿದ್ದು, ಆನ್‌ಲೈನ್ ಟಿಕೆಟ್ ಬುಕಿಂಗ್ ವ್ಯವಸ್ಥೆಯ ಸಾಮರ್ಥ್ಯವು ದುಪ್ಪಟ್ಟಾಗಿದೆ ಎಂದು ಐಆರ್‌ಸಿಟಿಸಿ ಹೇಳಿದೆ.

2026ರ ಜುಲೈ 15ರಂದು ಐಆರ್‌ಸಿಟಿಸಿ ಹೊಸ ವೆಬ್‌ಸೈಟ್‌ಅನ್ನು ಪರಿಚಯಿಸಿದೆ. ಇದರ ಮೂಲಕ ಪ್ರಯಾಣಿಕರು ಒಂದೇ ಪರದೆಯ ಮೇಲೆ ವಿವಿಧ ದರ್ಜೆಗಳಲ್ಲಿನ ಆಸನಗಳ ಲಭ್ಯತೆಯನ್ನು ವೀಕ್ಷಿಸಬಹುದು. ಅಲ್ಲದೆ, ಆಯಂಟಿ-ಬಾಟ್ ವ್ಯವಸ್ಥೆಯ ಮೂಲಕ ಅನುಮಾನಾಸ್ಪದ ಬಾಟ್ ದಟ್ಟಣೆಯನ್ನು ಶೇ 55-65 ರಷ್ಟು ಕಡಿಮೆ ಮಾಡಿದೆ ಎಂದು ತಿಳಿಸಿದೆ.

ಟಿಕೆಟ್ ಬುಕಿಂಗ್ ವೇದಿಕೆಯ ವ್ಯವಸ್ಥೆಯ ಅನ್ವಯ, ಬುಕಿಂಗ್ ಪ್ರಕ್ರಿಯೆ ಆರಂಭವಾದ ಮೊದಲ 10 ನಿಮಿಷಗಳಲ್ಲಿ (ಬೆಳಗ್ಗೆ 8 ರಿಂದ 8:10 ರವರೆಗೆ) ಅಧಿಕೃತ ಟಿಕೆಟ್ ಏಜೆಂಟ್‌ಗಳಿಗೆ ಟಿಕೆಟ್ ಕಾಯ್ದಿರಿಸಲು ಅವಕಾಶವಿರುವುದಿಲ್ಲ. ಕಾಯ್ದಿರಿಸುವಿಕೆ ಆರಂಭವಾದಾಗ ಟಿಕೆಟ್ ಬುಕ್ ಮಾಡುವ ಬಳಕೆದಾರರಿಗೆ ಆಧಾರ್ ಪರಿಶೀಲನೆಯೂ ಕಡ್ಡಾಯವಾಗಿರುತ್ತದೆ.

ರೈಲ್ವೆ ಟಿಕೆಟ್‌ ಕಾಯ್ದಿರಿಸುವಿಕೆಯಲ್ಲಿ ನಡೆಯುವ ವಂಚನೆಯನ್ನು ತಡೆಯಲು ಭಾರತೀಯ ರೈಲ್ವೆ ಈ ಕ್ರಮ ಕೈಗೊಂಡಿತ್ತು. ಇದರ ಪರಿಣಾಮ, ಈವರೆಗೆ 3.04 ಕೋಟಿ ಬಳಕೆದಾರರ ಐಡಿಗಳನ್ನು ನಿಷ್ಕ್ರಿಯಗೊಳಿಸಿದೆ. 6.33 ಕೋಟಿ ಐಡಿಗಳನ್ನು ಮರು-ಪರಿಶೀಲನೆಗಾಗಿ ಪಟ್ಟಿ ಮಾಡಿದೆ.

ದಾಖಲೆ ಮಟ್ಟದ ಬುಕಿಂಗ್ ನಡೆದಿದ್ದರೂ, ಹೊಸ ಆನ್‌ಲೈನ್ ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ಯಾವುದೇ ಪ್ರಮುಖ ತಾಂತ್ರಿಕ ದೋಷ ಅಥವಾ ವ್ಯತ್ಯಯ ಉಂಟಾಗಿಲ್ಲ ಎಂದು ಐಆರ್‌ಸಿಟಿಸಿ ಸ್ಪಷ್ಟಪಡಿಸಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries