HEALTH TIPS

MRPL ಘಟಕದಲ್ಲಿ ಅಗ್ನಿ ಅವಘಡ; ಒಬ್ಬರಿಗೆ ಗಾಯ, ಕೋಲ್ಡ್ ಸೆಪರೇಟರ್‌ ಒಡೆದ ಪರಿಣಾಮ ಬೆಂಕಿ; ಸ್ಪಷ್ಟನೆ ನೀಡಿದ ಎಂಆರ್‌ಪಿಎಲ್‌

ಮಂಗಳೂರು: MRPLನ 'ಕೋಕರ್ ಹೈಡ್ರೋಟ್ರೀಟರ್ ಘಟಕ'ದಲ್ಲಿ (Coker Hydrotreater Unit) ಹೆಚ್ಚಿನ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ 'ಕೋಲ್ಡ್ ಸೆಪರೇಟರ್' (Cold Separator) ಒಡೆದ ಪರಿಣಾಮ ಬುಧವಾರ ಮಧ್ಯಾಹ್ನ ವೇಳೆಗೆ ಅಗ್ನಿ ಅವಘಡ ಸಂಭವಿಸಿದೆ.


ಘಟನೆಯ ಬಳಿಕ ಅವಘಡ ಸಂಭವಿಸಿದ ಘಟಕದ ಕಾರ್ಯಾಚರಣಾ ಪ್ರದೇಶವನ್ನು (battery limits) ಪ್ರತ್ಯೇಕಿಸಲಾಗಿದೆ.

MRPLನ ತುರ್ತು ಸ್ಪಂದನಾ ಹಾಗೂ ಅಗ್ನಿಶಾಮಕ ತಂಡಗಳು ಬೆಂಕಿಯನ್ನು ನಿಯಂತ್ರಿಸಲು ಮತ್ತು ನಂದಿಸಲು ಕಾರ್ಯಾಚರಣೆ ನಡೆಸಿವೆ. ಸದ್ಯ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು MRPL ತಿಳಿಸಿದೆ.

ಘಟನೆಯನ್ನು ಸುರಕ್ಷಿತವಾಗಿ ನಿರ್ವಹಿಸುವ ಪ್ರಕ್ರಿಯೆಯ ಭಾಗವಾಗಿ ಅಗ್ನಿಶಾಮಕ ಕಾರ್ಯಾಚರಣೆ ಇನ್ನೂ ಸ್ವಲ್ಪ ಸಮಯ ಮುಂದುವರಿಯಬಹುದು. ಯಾವುದೇ ಗಂಭೀರ ಸ್ವರೂಪದ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ. ಒಬ್ಬರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಅಪಾಯದಿಂದ ಪಾರಾಗಿದ್ದು, ಅಗತ್ಯ ವೈದ್ಯಕೀಯ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ಸಿಬ್ಬಂದಿ ಹಾಗೂ ಘಟಕದ ಸುರಕ್ಷತೆಗೆ ಅತ್ಯುನ್ನತ ಆದ್ಯತೆ ನೀಡಲಾಗಿದ್ದು, ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸಲಾಗುತ್ತಿದೆ ಎಂದು MRPL ತಿಳಿಸಿದೆ. ದೃಢೀಕರಿಸಿದ ಹೆಚ್ಚಿನ ಮಾಹಿತಿ ಲಭ್ಯವಾದ ತಕ್ಷಣ ಅದನ್ನು ಹಂಚಿಕೊಳ್ಳಲಾಗುವುದು. MRPL ಆವರಣದ ಒಳಗಿರುವ ಅಥವಾ ಹೊರಗಿರುವ ವ್ಯಕ್ತಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ಕಂಪೆನಿ ಸ್ಪಷ್ಟಪಡಿಸಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries