HEALTH TIPS

ಮೊದಲ ಚಿತ್ರಕ್ಕೆ ಆಸ್ಕರ್‌ ಪ್ರಶಸ್ತಿ ಪಡೆದ ಹಾಲಿವುಡ್ ನಟಿ ಇವಾ ಮೇರಿ ಸೇಂಟ್‌ 102ನೇ ವಯಸ್ಸಿನಲ್ಲಿ ನಿಧನ

ಲಾಸ್‌ ಏಂಜಲೀಸ್‌: ಹಾಲಿವುಡ್‌ ನ ಕ್ಲಾಸಿಕ್‌ ಚಿತ್ರಗಳಾದ 'ಆನ್‌ ದಿ ವಾಟರ್‌ಫ್ರಂಟ್‌' ಮತ್ತು 'ನಾರ್ತ್‌ ಬೈ ನಾರ್ತ್‌ವೆಸ್ಟ್‌'ನಲ್ಲಿ ಅಭಿನಯಿಸಿದ್ದ ಆಸ್ಕರ್‌ ಪ್ರಶಸ್ತಿ ವಿಜೇತ ನಟಿ ಇವಾ ಮೇರಿ ಸೇಂಟ್‌ ಅವರು ಮಂಗಳವಾರ (ಅಕ್ಟೋಬರ್‌ 6) ನಿಧನರಾದರು. ಅವರಿಗೆ 102 ವರ್ಷ ವಯಸ್ಸಾಗಿತ್ತು. 


ಲಾಸ್‌ ಏಂಜಲೀಸ್‌ ನ ತಮ್ಮ ಮನೆಯಲ್ಲಿ ಇವಾ ಅವರು ನಿಧನರಾದರು ಎಂದು ಅವರ ಪ್ರತಿನಿಧಿ ಜೆಫ್‌ ಸ್ಯಾಂಡರ್ಸನ್‌ ತಿಳಿಸಿದ್ದಾರೆ.

ಏಳು ದಶಕಗಳ ವೃತ್ತಿಜೀವನದಲ್ಲಿ ಇವಾ ಮೇರಿ ಸೇಂಟ್‌ ಅವರು ಆಲ್ಫ್ರೆಡ್‌ ಹಿಚ್‌ಕಾಕ್‌, ಎಲಿಯಾ ಕಜಾನ್‌ ಸೇರಿದಂತೆ ಹಲವು ಪ್ರಮುಖ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದರು. ಸಿನಿಮಾ ಮಾತ್ರವಲ್ಲದೆ ಟಿವಿಯಲ್ಲೂ ತಮ್ಮದೇ ಛಾಪು ಮೂಡಿಸಿದ್ದ ಅವರು ಎಮ್ಮಿ ಪ್ರಶಸ್ತಿಯನ್ನೂ ಪಡೆದಿದ್ದರು.

ಇವಾ ಮೇರಿ ಸೇಂಟ್‌ ಅವರ ಮೊದಲ ಚಿತ್ರ 'ಆನ್‌ ದಿ ವಾಟರ್‌ ಫ್ರಂಟ್‌' 1954ರಲ್ಲಿ ಬಿಡುಗಡೆಯಾಗಿತ್ತು. ಎಲಿಯಾ ಕಜಾನ್‌ ನಿರ್ದೇಶನದ ಅಪರಾಧ ಕೇಂದ್ರಿತ ಚಿತ್ರಕ್ಕೆ ಲಿಯೊನಾರ್ಡ್‌ ಬರ್ನ್‌ಸ್ಟೈನ್‌ ಸಂಗೀತ ಸಂಯೋಜಿಸಿದ್ದರು. ಮಾರ್ಲನ್‌ ಬ್ರಾಂಡೊ ಸೇರಿದಂತೆ ತಾರಾಗಣ ಚಿತ್ರದಲ್ಲಿತ್ತು.

'ಆನ್‌ ದಿ ವಾಟರ್‌ಫ್ರಂಟ್‌' ಚಿತ್ರದಲ್ಲಿ ಮಾರ್ಲನ್‌ ಬ್ರಾಂಡೊ ನಿರ್ವಹಿಸಿದ್ದ ಟೆರ್ರಿ ಮಲ್ಲಾಯ್‌ ಪಾತ್ರದ ಸಹೋದರಿ ಈಡಿ ಡಾಯ್ಲ್‌ ಪಾತ್ರವನ್ನು ಇವಾ ಮೇರಿ ಸೇಂಟ್‌ ನಿರ್ವಹಿಸಿದ್ದರು. ತನ್ನ ಸಹೋದರನ ಸಾವಿಗೆ ಕಾರಣರಾದವರ ವಿರುದ್ಧ ಹೋರಾಡುವ ಈಡಿ ಪಾತ್ರದಲ್ಲಿನ ಅಭಿನಯಕ್ಕಾಗಿ ಸೇಂಟ್‌ಗೆ ಅತ್ಯುತ್ತಮ ಪೋಷಕ ನಟಿಗಾಗಿ ಆಸ್ಕರ್‌ ಪ್ರಶಸ್ತಿ ದೊರೆಯಿತು. ಇದೇ ಚಿತ್ರದಲ್ಲಿನ ಅಭಿನಯಕ್ಕಾಗಿ ಮಾರ್ಲನ್‌ ಬ್ರಾಂಡೊ ಅವರಿಗೂ ಅತ್ಯುತ್ತಮ ನಟ ಆಸ್ಕರ್‌ ಪ್ರಶಸ್ತಿ ಲಭಿಸಿತು.

ಪುರುಷ ಪ್ರಧಾನ ಪಾತ್ರಗಳಿಗೆ ಹೆಸರಾಗಿದ್ದ ಈ ಚಿತ್ರದಲ್ಲಿ ಸೇಂಟ್‌ ಅವರ ಅಭಿನಯವನ್ನು ವಿಮರ್ಶಕರು ಅತ್ಯುತ್ತಮವೆಂದು ಪರಿಗಣಿಸಿದ್ದರು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries