HEALTH TIPS

ಭಾರತೀಯ ಮೂಲದ ಕಾನೂನು ತಜ್ಞೆ ನವನೀತಂ ಪಿಳ್ಳೆಗೆ 2026ರ ನೊಬೆಲ್ ಶಾಂತಿ ಪ್ರಶಸ್ತಿ

ಡರ್ಬನ್: ದಕ್ಷಿಣ ಆಫ್ರಿಕಾದ ಭಾರತೀಯ ಮೂಲದ ಕಾನೂನು ತಜ್ಞೆ ನವನೀತಂ 'ನವಿ' ಪಿಳ್ಳೆ ಅವರಿಗೆ 2026ರ ನೊಬೆಲ್ ಶಾಂತಿ ಪ್ರಶಸ್ತಿ ಘೋಷಿಸಲಾಗಿದೆ. ಯುದ್ಧಾಪರಾಧ, ನರಮೇಧ ಮತ್ತು ಮಾನವೀಯತೆಯ ವಿರುದ್ಧದ ಅಪರಾಧ ಎಸಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅವರು ನಡೆಸಿದ ಪ್ರಯತ್ನಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. 


ಇವರು ಆಕ್ರಮಿತ ಫೆಲೆಸ್ತೀನ್ ಪ್ರದೇಶದ ಕುರಿತು ವಿಶ್ವಸಂಸ್ಥೆ ರಚಿಸಿದ್ದ ತನಿಖಾ ಆಯೋಗದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು.

ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿ ಜಾರಿಯಲ್ಲಿದ್ದಾಗ ಡರ್ಬನ್‌ ನಲ್ಲಿ ಭಾರತೀಯ ತಮಿಳು ಮೂಲದ ಕುಟುಂಬದಲ್ಲಿ ಪಿಳ್ಳೆ ಜನಿಸಿದರು. ಅವರು ವಕೀಲೆ ಮತ್ತು ಕಾನೂನು ತಜ್ಞೆಯಾಗಿ ಹೆಸರು ಗಳಿಸಿದರು. ದಕ್ಷಿಣ ಆಫ್ರಿಕಾದ ಹೈಕೋರ್ಟ್, ರುವಾಂಡಾದ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಮಂಡಳಿ, ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಮತ್ತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಆಗಿ ಸೇವೆ ಸಲ್ಲಿಸಿದ್ದರು.

ಆಕ್ರಮಿತ ಫೆಲೆಸ್ತೀನ್ ಪ್ರದೇಶದ ಕುರಿತು ವಿಶ್ವಸಂಸ್ಥೆ ರಚಿಸಿದ್ದ ತನಿಖಾ ಆಯೋಗದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ಮ್ಯಾನ್ಮಾರ್‌ ನಲ್ಲಿ ನರಮೇಧ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶೆಯಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.

ಅತ್ಯಾಚಾರ ಮತ್ತು ಲೈಂಗಿಕ ಹಿಂಸಾಚಾರವನ್ನು ನರಮೇಧದ ಕೃತ್ಯಗಳು ಅಥವಾ ಮಾನವೀಯತೆಯ ವಿರುದ್ಧದ ಅಪರಾಧಗಳೆಂದು ಪರಿಗಣಿಸುವಂತೆ ಮಾಡಲು ಪಿಳ್ಳೆ ಶ್ರಮಿಸಿದ್ದಾರೆ. ನರಮೇಧಕ್ಕೆ ಪ್ರಚೋದನೆ ನೀಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಕ್ಕೂ ಅವರು ಮಹತ್ವ ನೀಡಿದ್ದಾರೆ.

ಯುದ್ಧ ಮತ್ತು ಸಂಘರ್ಷಗಳ ಸಂದರ್ಭದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು, ಪ್ರಬಲ ರಾಷ್ಟ್ರಗಳು ಮತ್ತು ವ್ಯಕ್ತಿಗಳೂ ತಮ್ಮ ಕೃತ್ಯಗಳಿಗೆ ಹೊಣೆ ಹೊರಬೇಕು ಹಾಗೂ ಸಂತ್ರಸ್ತರಿಗೆ ರಕ್ಷಣೆ ದೊರೆಯಬೇಕು ಎಂಬುದನ್ನು ಪಿಳ್ಳೆ ಅವರ ಕಾರ್ಯಗಳು ಪ್ರತಿಪಾದಿಸುತ್ತವೆ ಎಂದು ನೊಬೆಲ್ ಸಮಿತಿ ಹೇಳಿದೆ.

ಅಂತಾರಾಷ್ಟ್ರೀಯ ಕಾನೂನನ್ನು ಪಾಲಿಸುವ ಬದಲು ರಾಜಕೀಯ ಅಧಿಕಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಪ್ರವೃತ್ತಿಯ ಬಗ್ಗೆ ಈ ಪ್ರಶಸ್ತಿ ಎಚ್ಚರಿಕೆ ನೀಡುತ್ತದೆ ಎಂದು ನೊಬೆಲ್ ಸಮಿತಿ ತಿಳಿಸಿದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries