HEALTH TIPS

8 ಯುದ್ಧ ನಿಲ್ಲಿಸಿದ್ದೇನೆ; ನನಗೆ 8 ಬಾರಿ ಶಾಂತಿ ಪ್ರಶಸ್ತಿ ಬರಬೇಕಿತ್ತು: ಟ್ರಂಪ್‌

ವಾಷಿಂಗ್ಟನ್‌: 'ಭಾರತ ಮತ್ತು ಪಾಕಿಸ್ತಾನ ದೇಶಗಳು ಅಣು ಬಾಂಬ್‌ ಸಿಡಿಸಿ ಯುದ್ಧ ಮಾಡಲು ಹೊರಟಿದ್ದವು. ನಾನು ಅದನ್ನು ತಡೆದು, 5 ಕೋಟಿ ಜನರ ಪ್ರಾಣ ಉಳಿಸಿದ್ದೇನೆ. ಇಷ್ಟೇ ಅಲ್ಲ, ನಾನು 8 ಯುದ್ಧಗಳನ್ನು ನಿಲ್ಲಿಸಿದ್ದೇನೆ. ಆ ಲೆಕ್ಕದಲ್ಲಿ ನನಗೆ 8 ಬಾರಿ ನೊಬೆಲ್‌ ಶಾಂತಿ ಪ್ರಶಸ್ತಿ ಸಿಗಬೇಕಿತ್ತು' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬೇಸರ ವ್ಯಕ್ತಪಡಿಸಿದರು. 


ಸಿರಕ್ಯೂಸ್‌ನಲ್ಲಿ ನಡೆದ ರ್‍ಯಾಲಿಯೊಂದರಲ್ಲಿ ಮಾತನಾಡಿ, 'ಪ್ರಶಸ್ತಿಗಾಗಿ ಆಯ್ಕೆ ಮಾಡುವಲ್ಲಿ ನಾರ್ವೆ ನನ್ನನ್ನು ಕಡೆಗಣಿಸಿದೆ. ಈ ನಿರ್ಧಾರವು ಅವರಿಗೆ ಒಂದು ಕಪ್ಪು ಚುಕ್ಕೆ ಇದ್ದಂತೆ. ಪ್ರಶಸ್ತಿ ದೊರೆತಿರುವವರ ಹೆಸರನ್ನು ಯಾರೂ ಕೇಳಿಯೇ ಇಲ್ಲ. ಬಹಳ ಕೆಟ್ಟ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

'ಕೆಲವು ಮೂಲಭೂತವಾದಿ ಸಿದ್ಧಾಂತದವರು, ಪ್ರಜಾಪ್ರಭುತ್ವ ವಿರೋಧಿಗಳು, ನಾಗರಿಕತೆಯ ಶತ್ರುಗಳು ಸೇರಿ ಹಲವು ದಶಕಗಳಿಂದ ಶಾಂತಿ ಪ್ರಶಸ್ತಿಯ ಮರ್ಯಾದೆ ತೆಗೆಯುತ್ತಲೇ ಬಂದಿದ್ದಾರೆ. ಪ್ರಶಸ್ತಿ ಪುರಸ್ಕೃತರ ಆಯ್ಕೆಗೆ ಅಮೆರಿಕವನ್ನು ನಾರ್ವೆ ಕಡೆಗಣಿಸಿರುವುದನ್ನು ನಾವು ಎಂದಿಗೂ ಮರೆಯುವುದಿಲ್ಲ' ಎಂದರು.

'ಮಧ್ಯಪ್ರಾಚ್ಯದಲ್ಲಿ ಇರಾನ್‌ ಅಣು ಬಾಂಬ್‌ ಪ್ರಯೋಗಿಸುವ ತಯಾರಿ ನಡೆಸಿತ್ತು. ನಾನು ಅದನ್ನು ನಿಲ್ಲಿಸಿದೆ. ಅಣು ಬಾಂಬ್‌ನ ಪರಿಣಾಮ ಮಧ್ಯಪ್ರಾಚ್ಯವನ್ನೂ ಮೀರಿ ಯುರೋಪ್‌ ಮತ್ತು ಅಮೆರಿಕವನ್ನೂ ವ್ಯಾಪಿಸುತ್ತಿತ್ತು. ಇತಿಹಾಸದಲ್ಲಿಯೇ ಯಾರೂ ಇಷ್ಟೊಂದು ಜೀವಗಳನ್ನು ಉಳಿಸಿರಲಿಲ್ಲ. ನಾನು ಅಷ್ಟು ಜನರ ಜೀವ ಉಳಿಸಿದ್ದೇನೆ' ಎಂದರು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries