HEALTH TIPS

9/11ರ ಮಾದರಿಯ ದಾಳಿ ತಪ್ಪಿದೆ:ಸ್ಮಿತ್ ಧೈರ್ಯ ಎಲ್ಲರಲ್ಲೂ ಹೆಮ್ಮೆ ಮೂಡಿಸಿದೆ -ಮೋದಿ

ನವದೆಹಲಿ: 'ಫ್ಲೈ ದುಬೈ' ಸಂಸ್ಥೆಯ ಬೋಯಿಂಗ್‌ ವಿಮಾನವನ್ನು ಅಪಹರಿಸಲು ಯತ್ನಿಸಿದ ಸಹ ಪೈಲಟ್‌ನ ಪ್ರಯತ್ನವನ್ನು ವಿಫಲಗೊಳಿಸುವಲ್ಲಿ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚರ್‌ ಅವರು ಅಪಾರ ತಾಳ್ಮೆ, ಚಾಣಾಕ್ಷತನ ಮತ್ತು ಧೈರ್ಯ ಪ್ರದರ್ಶಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ನಡೆದ ಕೇಂದ್ರ ಲೋಕಸೇವಾ ಆಯೋಗದ ಶತಮಾನೋತ್ಸವ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ.

'ಸ್ಮಿತ್ ಮಚ್ಚರ್‌ ಅವರ ಈ ಧೈರ್ಯಶಾಲಿ ನಡೆ ಪ್ರತಿಯೊಬ್ಬ ಭಾರತೀಯನಲ್ಲೂ ಹೆಮ್ಮೆಯ ಭಾವನೆಯನ್ನು ಮೂಡಿಸಿದೆ. ಬಿನ್‌ ಲಾಡೆನ್‌ ನ್ಯೂಯಾರ್ಕ್‌ ನಗರದ ಮೇಲೆ ನಡೆಸಿದ 9/11ರ ದಾಳಿಯ ಮಾದರಿಯಲ್ಲೇ ನಡೆಯಬಹುದಾದ ಮತ್ತೊಂದು ದುರಂತವನ್ನು ಅವರು (ಸ್ಮಿತ್) ತಪ್ಪಿಸಿದ್ದಾರೆ' ಎಂದು ಮೋದಿ ಬಣ್ಣಿಸಿದ್ದಾರೆ.

'ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹೇಳಿದಂತೆ ಸ್ಮಿತ್ ಅವರು 9/11 ಮಾದರಿಯ ದಾಳಿಯನ್ನು ವಿಫಲಗೊಳಿಸಿದ್ದಾರೆ. ಸ್ಮಿತ್ ಅವರ ಬಗ್ಗೆ ಇಡೀ ಜಗತ್ತೇ ಹೆಮ್ಮೆಪಡುತ್ತಿದೆ' ಎಂದಿದ್ದಾರೆ.

'ಸ್ಮಿತ್ ಅವರ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುವಂತೆ ನಾನು ಎಲ್ಲರಲ್ಲೂ ವಿನಂತಿಸುತ್ತೇನೆ. ದೇಶದ ಕೀರ್ತಿಯನ್ನು ಹೆಚ್ಚಿಸಿದ ಅವರನ್ನು ಶ್ಲಾಘಿಸುತ್ತೇವೆ' ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ, ಮೋದಿ ಅವರು ಮಚ್ಚರ್ ಅವರ ಪತ್ನಿ ಮತ್ತು ಪೋಷಕರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. 27 ಮಕ್ಕಳು ಸೇರಿದಂತೆ 174 ಪ್ರಯಾಣಿಕರ ಪ್ರಾಣ ಉಳಿಸಿದ ಪೈಲಟ್‌ನ ಕಾರ್ಯವನ್ನು ಮೆಚ್ಚಿದ್ದಾರೆ.

ಸೌದಿ ಅರೇಬಿಯಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಚ್ಚರ್‌ಗೆ ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುತ್ತಿದ್ದಾರೆ ಎಂದು ಮೋದಿ ಹೇಳಿದ್ದಾರೆ.

'ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ತೆರಳುತ್ತಿದ್ದ ವಿಮಾನವು ದುಬೈನಿಂದ ಹೊರಟ ಎರಡೂವರೆ ಗಂಟೆಗಳ ನಂತರ ಪೈಲಟ್‌ಗಳಲ್ಲಿ ಒಬ್ಬರು 'ಅಪಹರಣ ಅಪಾಯದ ತುರ್ತು ಸಂದೇಶ' ರವಾನಿಸಿದ್ದರು. ವಿಮಾನವು ಎರಡು ನಿಮಿಷಗಳಲ್ಲಿಯೇ 34 ಸಾವಿರ ಅಡಿಗಳಿಂದ 17 ಸಾವಿರ ಅಡಿಗಳಿಗೆ ಕುಸಿಯಿತು. ತುರ್ತಾಗಿ ಜೋರ್ಡನ್‌ ಗಡಿಯ ಬಳಿ ಸೌದಿ ಅರೇಬಿಯಾದ ತಬೂಕ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಲಾಯಿತು.

ವಿಮಾನವನ್ನು ವಶಕ್ಕೆ ತೆಗೆದುಕೊಂಡು ಪತನಗೊಳಿಸಲು ಸಹ ಪೈಲಟ್‌ ಯತ್ನಿಸಿದ್ದು, ವಿಮಾನ ಚಾಲನೆ ಮಾಡುತ್ತಿದ್ದ ಭಾರತ ಮೂಲದ ಪೈಲಟ್‌ ಸ್ಮಿತ್ ಮಚ್ಚರ್‌ ಮತ್ತು ಇತರ ಸಿಬ್ಬಂದಿ ಹರಸಾಹಸಪಟ್ಟು ದುರ್ಘಟನೆಯನ್ನು ತಪ್ಪಿಸಿದ್ದರು.

ಒಮಾನ್‌ ಮೂಲದ ಸಹ ಪೈಲಟ್‌ ಮತ್ತು ಭಾರತ ಮೂಲದ ಪೈಲಟ್‌ ಕ್ಯಾಪ್ಟನ್‌ ಮಧ್ಯೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿದ್ದು, ಕ್ಯಾಪ್ಟನ್‌ಗೆ ಸಹ ಪೈಲಟ್‌ ಚಾಕುವಿನಿಂದ ಇರಿದಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries