HEALTH TIPS

ಭಾರತದ ಸ್ಮಿತ್ ಮಚ್ಚರ್‌ಗೆ ಇಸ್ರೇಲ್‌ನ ಅತ್ಯುನ್ನತ ನಾಗರಿಕ ಶೌರ್ಯ ಪ್ರಶಸ್ತಿ ಘೋಷಣೆ

ಟೆಲ್ ಅವೀವ್: 'ಫ್ಲೈದುಬೈ' ವಿಮಾನದ ಕಾಕ್‌ಪಿಟ್‌ನಲ್ಲಿ ಸಹ-ಪೈಲಟ್ ನಡೆಸಿದ ದಾಳಿಯನ್ನು ಸಮರ್ಥವಾಗಿ ಎದುರಿಸಿ 174 ಪ್ರಯಾಣಿಕರನ್ನು ಪ್ರಾಣಾಪಾಯದಿಂದ ಪಾರು ಮಾಡಿದ ಭಾರತದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರಿಗೆ ಇಸ್ರೇಲ್‌ನ ಅತ್ಯುನ್ನತ ನಾಗರಿಕ ಶೌರ್ಯ ಪ್ರಶಸ್ತಿ ನೀಡಲಾಗುವುದು ಎಂದು ಅಧ್ಯಕ್ಷ ಐಸಾಕ್‌ ಹೆರ್ಜೋಗ್ ಘೋಷಿಸಿದ್ದಾರೆ. 


ಜೆರುಸಲೆಂನಲ್ಲಿರುವ ಅಧ್ಯಕ್ಷರ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಹೆರ್ಜೋಗ್, 'ಸೆಪ್ಟೆಂಬರ್ 30ರಂದು ದುಬೈನಿಂದ ಇಸ್ರೇಲ್‌ ಟೆಲ್‌ ಅವೀವ್‌ಗೆ ಪ್ರಯಾಣಿಸುತ್ತಿದ್ದ 'ಫ್ಲೈದುಬೈ' ವಿಮಾನದಲ್ಲಿದ್ದ ಆರು ಮಂದಿಗೆ 'ಅಧ್ಯಕ್ಷೀಯ ನಾಗರಿಕ ಶೌರ್ಯ ಪ್ರಶಸ್ತಿ'ಯನ್ನು ಪ್ರದಾನ ಮಾಡಲಾಗುವುದು' ಎಂದು ಹೇಳಿದ್ದಾರೆ.

'ಇಂದು ಗೌರವಿಸುತ್ತಿರುವ ಇಸ್ರೇಲ್‌ನ ವೀರರ ಜೊತೆಗೆ, ಭಾರತದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ನಾವು ಹಾರೈಸುತ್ತೇವೆ' ಎಂದಿದ್ದಾರೆ.

'ಮಚ್ಚರ್ ಅವರ ಅಪ್ರತಿಮ ಧೈರ್ಯ, ಸಾಹಸ ಮತ್ತು ವೃತ್ತಿಪರತೆಯು ದೊಡ್ಡ ದುರಂತವನ್ನು ತಪ್ಪಿಸಲು ಸಹಾಯ ಮಾಡಿದೆ. ಅವರು (ಸ್ಮಿತ್) ಚೇತರಿಸಿಕೊಂಡ ಬಳಿಕ ಇಸ್ರೇಲ್ ಜನತೆಯ ಪರವಾಗಿ 'ಅಧ್ಯಕ್ಷೀಯ ನಾಗರಿಕ ಶೌರ್ಯ ಪ್ರಶಸ್ತಿ'ಯನ್ನು ನೀಡಲಾಗುವುದು. ಇದು ನನಗೆ ಹೆಮ್ಮೆಯ ಮತ್ತು ಗೌರವದ ವಿಷಯ' ಎಂದು ಹೆರ್ಜೋಗ್ ನುಡಿದಿದ್ದಾರೆ.

'ಅಧ್ಯಕ್ಷೀಯ ನಾಗರಿಕ ಶೌರ್ಯ ಪ್ರಶಸ್ತಿ'ಯು ಶೌರ್ಯಕ್ಕಾಗಿ ನೀಡಲಾಗುವ ಇಸ್ರೇಲ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ಜನರ ಜೀವ ಉಳಿಸುವ ಉದ್ದೇಶದಿಂದ ತಮ್ಮ ಜೀವಕ್ಕೆ ಗಂಭೀರ ಅಪಾಯವಿದ್ದರೂ ಅಸಾಧಾರಣ ಧೈರ್ಯ ಪ್ರದರ್ಶಿಸಿದ ವ್ಯಕ್ತಿಗಳನ್ನು ಗುರುತಿಸಿ ಗೌರವಿಸಲು ಈ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ಅಧ್ಯಕ್ಷರ ಕಚೇರಿ ತಿಳಿಸಿದೆ.

'ಫ್ಲೈದುಬೈ' ವಿಮಾನ ಅಪಹರಿಸಿ ಪತನಗೊಳಿಸಲು ಯತ್ನಿಸುತ್ತಿದ್ದ ಒಮಾನ್ ಮೂಲದ ಸಹ-ಪೈಲಟ್‌ನನ್ನು ತಡೆದ ಟಾಲಿ ಮಾನೆಸ್, ಜ್ವಿಕಾ ಮಾನೆಸ್, ಯನಿವ್ ಹಯೌನ್, ಶೋಟಾ ಮುಸಾಯೆವ್, ಅಸಫ್ ರಾಜುವಾನ್ ಮತ್ತು ಓರ್ ಪಾರ್ಡಿಲೋವ್ ಅವರಿಗೂ ನಾಗರಿಕ ಶೌರ್ಯ ಪ್ರಶಸ್ತಿ ನೀಡಲಾಗುವುದು ಎಂದೂ ಅಧ್ಯಕ್ಷರ ಕಚೇರಿ ಮಾಹಿತಿ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಂದ 'ಹೀರೊ' ಎಂದು ಕೊಂಡಾಡಲ್ಪಟ್ಟಿರುವ ಸ್ಮಿತ್ ಅವರು ಯುಎಇಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries