ಕುಂಬಳೆ: ಸೀತಾಂಗೋಳಿ ಶ್ರೀದೇವಿ ಭಜನಾ ಮಂದಿರದ ಪುನರ್ ಪ್ರತಿಷ್ಠಾ ಉತ್ಸವದ ಪೂರ್ವಭಾವಿಯಾಗಿ ಮಹಾಸಭೆ ಮಂದಿರದ ಆವರಣದಲ್ಲಿ ನಡೆಸಲಾಯಿತು. ಉದ್ಯಮಿ ಹಾಗೂ ಧಾರ್ಮಿಕ ಮುಂದಾಳು ಮಂದಿರದ ಗೌರವಾಧ್ಯಕ್ಷ ವಸಂತ ಪೈ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಮಂದಿರದ ಅಧ್ಯಕ್ಷ ಜಯಂತ ಪಾಟಾಳಿ ಅಧ್ಯಕ್ಷತೆ ವಹಿಸಿದ್ದರು. ಮಂದಿರದ ಸ್ಥಾಪಕ ಸದಸ್ಯ ಜನಾರ್ಧನ ಆಚಾರ್ಯ, ಮಹಿಳಾ ಸಮಿತಿ ಅಧ್ಯಕ್ಷೆ ವಿದ್ಯಾ ರತೀಶ್, ವಿಶ್ವೇಶ್ವರ ಭಟ್, ಮಾನ ಮಾಸ್ತರ್, ಎಸ್.ಬಿ. ನಾರಾಯಣ, ಶಂಕರ ಕೆ, ಪುತ್ತಿಗೆ ಪಂಚಾಯತಿ ಸದಸ್ಯ ಸತೀಶ್ ಪೆರ್ಣೆ. ಚಿಕ್ಕಪ್ಪ ರೈ ಕನ್ನಿಮೂಲೆ ಮೊದಲಾದವರು ಉಪಸ್ಥಿತರಿದ್ದರು. ಗೌರವಾಧ್ಯಕ್ಷ ವಸಂತ ಪೈ ಅವರ ನೇತೃತ್ವದಲ್ಲಿ ಪುನರ್ ಪ್ರತಿಷ್ಠಾ ಉತ್ಸವದ ಯಶಸ್ವಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಈ ಸಂದರ್ಭದಲ್ಲಿ ಸುಕುಮಾರ ಕುದ್ರೆಪ್ಪಾಡಿ. ಹರೀಶ್ ಸಿದ್ದಿಬೈಲು. ರಾಮಪ್ಪ ಮಂಜೇಶ್ವರ, ವೇಣುಗೋಪಾಲ ಪುತ್ತಿಗೆ, ಬಾಲಕೃಷ್ಣ ರೈ ಪುತ್ತಿಗೆ ಬಯಲು, ಕೃಷ್ಣಪ್ರಸಾದ ಕಾವೇರಿಕಾನ ಸಹಿತ ಹಲವರು ಉಪಸ್ಥಿತರಿದ್ದರು. ಕಾವ್ಯ ಯಜ್ಞೇಶ್ ಸ್ವಾಗತಿಸಿ, ಮಂದಿರದ ಕಾರ್ಯದರ್ಶಿ ರಮೇಶ್ ಸಿ.ಎಚ್. ವಂದಿಸಿದರು.

.jpg)
