ಕಾಸರಗೋಡು: ಗಾಂಧಿ ಜಯಂತಿ ಸಪ್ತಾಹ ಆಚರಣೆಯ ಅಂಗವಾಗಿ, ಕಾಸರಗೋಡು ಜಿಲ್ಲಾ ವಾರ್ತಾ ಕಚೇರಿಯು ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿತ್ತು. ಮಹಾತ್ಮಾ ಗಾಂಧಿಯವರ ಜೀವನ, ವಿಚಾರಗಳು, ಸ್ವಾತಂತ್ರ್ಯ ಹೋರಾಟ ಮತ್ತು ರಾಷ್ಟ್ರೀಯ ಚಳುವಳಿಯಂತಹ ವಿಷಯಗಳನ್ನು ಆಧರಿಸಿ ಪ್ರೌಢಶಾಲಾ ಮತ್ತು ಕಾಲೇಜು ವಿಭಾಗಗಳಲ್ಲಿ ಸ್ಪರ್ಧೆಯನ್ನು ನಡೆಸಲಾಯಿತು. ಜಿಲ್ಲೆಯ ವಿವಿಧ ಶಾಲೆಗಳು ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿವಿಧ ಸುತ್ತುಗಳಲ್ಲಿ ನಡೆದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಜ್ಞಾನ ಮತ್ತು ತ್ವರಿತ ಪ್ರತಿಕ್ರಿಯೆ ಸಾಮಥ್ರ್ಯವನ್ನು ಪರೀಕ್ಷಿಸುವ ಪ್ರಶ್ನೆಗಳನ್ನು ಸೇರಿಸಲಾಗಿತ್ತು. ಜಿಲ್ಲಾ ವಾರ್ತಾ ಅಧಿಕಾರಿ ಎಂ. ಮಧು ಮತ್ತು ಸಹಾಯಕ ಸಂಪಾದಕಿ ಎ.ಪಿ. ದಿಲ್ನಾ ಮಾತನಾಡಿದರು. ಸಹಾಯಕ ವಾರ್ತಾ ಅಧಿಕಾರಿ ಎ.ಪಿ. ನೌಶಾದ್ ಸ್ಪರ್ಧೆಯನ್ನು ನಿರ್ವಹಿಸಿದರು.
ಬೆಳಿಗ್ಗೆ ನಡೆದ ಪ್ರೌಢಶಾಲಾ ವಿಭಾಗದ ಸ್ಪರ್ಧೆಯಲ್ಲಿ, ಚೆಮ್ಮನಾಡ್ ಶಾಲೆಯ ಪಿ. ಶ್ರೀಹರಿ ಮತ್ತು ದೇವ್ನಾ ರತೀಶ್ ಅವರ ತಂಡವು ಪ್ರಥಮ ಸ್ಥಾನ ಗಳಿಸಿತು. ನೀಲೇಶ್ವರ ರಾಜಾಸ್ ಹೈಯರ್ ಸೆಕೆಂಡರಿ ಶಾಲೆಯ ಆರಾಧ್ಯ ನಾಯರ್ ಮತ್ತು ಕೆ. ಅನನ್ಯ ಮತ್ತು ಕಾರ್ತಿಕ್ ಮನು ಮತ್ತು ಸಿ. ಹರಿಗೋವಿಂದ ಮೂರನೇ ಸ್ಥಾನ ಪಡೆದರು.
ಮಧ್ಯಾಹ್ನ ನಡೆದ ಕಾಲೇಜು ವಿಭಾಗದ ಸ್ಪರ್ಧೆಯಲ್ಲಿ, ಎಳೇರಿತ್ತಟ್ಟು ಇ.ಕೆ. ನಾಯನಾರ್ ಸ್ಮಾರಕ ಸರ್ಕಾರಿ ಕಾಲೇಜಿನ ಕೆ. ಸ್ವಾತಿಲಕ್ಷ್ಮಿ ಮತ್ತು ಕೆ.ವಿ. ರಸ್ನಾ ತಂಡ ಪ್ರಥಮ ಸ್ಥಾನ ಗಳಿಸಿತು. ಚೆರ್ಕಳ ಜೈನಾಬ್ ಸ್ಮಾರಕ ಬಿ.ಎಡ್ ಕೇಂದ್ರದ ವಿ.ಎಸ್. ಸೇತುಲಕ್ಷ್ಮಿ ಮತ್ತು ಎಂ. ಶಬರೀಶ್ ದ್ವಿತೀಯ ಸ್ಥಾನ ಮತ್ತು ಕಾಞಂಗಾಡ್ ನೆಹರು ಕಲಾ ಮತ್ತು ವಿಜ್ಞಾನ ಕಾಲೇಜಿನ ಎಬಿನ್ ಜೋಸ್ ಬೆನ್ ಮತ್ತು ಸುವಿತಾ ತೃತೀಯ ಸ್ಥಾನ ಪಡೆದರು.




