HEALTH TIPS

ರೈಲ್ವೆ ವಿಭಾಗ ವಿಭಜನೆ-ಪಾಲಕ್ಕಾಡಿನ ನಂಟು ಕಳಚಿಕೊಳ್ಳಲಿರುವ ಮಂಗಳೂರು- ರೈಲ್ವೆ ಅಭಿವೃದ್ಧಿಗಾಗಿ ಬೇಡಿಕೆ ಹಲವು: ಭರವಸೆಗಳಿಂದಲೂ ವಂಚಿತವಾಗಿರುವ ಮಲಬಾರ್ ಪ್ರದೇಶ

ಕಾಸರಗೋಡು: ಪಾಲಕ್ಕಾಡ್ ರೈಲ್ವೆ ವಿಭಾಗದಿಂದ ಮಂಗಳೂರನ್ನು ಬೇರ್ಪಡಿಸುವ ಪ್ರಕ್ರಿಯೆ ಜಾರಿಯಲ್ಲಿದ್ದು, ಅ. 1ರಿಂದ ಮಂಗಳೂರು ವಿದ್ಯುಕ್ತವಗಿ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳ್ಳಲಿದೆ.  

ಮಂಗಳೂರನ್ನು ಪಾಲಕ್ಕಾಡ್ ವಿಭಾಗದಿಂದ ಬೇರ್ಪಡಿಸುವ ರೈಲ್ವೆ ಇಲಾಖೆ ನಿರ್ಧಾರ ಪ್ರಕಟಗೊಳ್ಳುತ್ತಿದ್ದಂತೆ ಮಲಬರ್ ಪ್ರದೇಶದ ರೈಲ್ವೆ ಪ್ರಯಾಣಿಕರಲ್ಲಿ ಆತಂಕಕ್ಕೆ ಕಾರಣವಾಗಿತ್ತು.  


ಮಂಗಳೂರನ್ನು ಹೊರತುಪಡಿಸಿ ಆದೇಶ ಜಾರಿಗೆಬಂದರೂ, ಕೇರಳಕ್ಕೆ ಸಿಗಬೇಕಾದ ಟರ್ಮಿನಲ್ ಸೌಲಭ್ಯಗಳ ಕುರಿತು ಯವುದೇ ತೀರ್ಮಾನವಾಗದಿರುವುದು ಕೇರಳದಲ್ಲಿ ರೈಲ್ವೆ ಅಭಿವೃದ್ಧಿ ಕಾರ್ಯಗಳು ಅತಂತ್ರ ಸ್ಥಿತಿಯತ್ತ ಸಾಗುವಂತಾಗಿದೆ. 

ಕೇರಳದ ಸಂಸದರು ಮತ್ತು ರೈಲ್ವೆ ಸಚಿವರ ನಡುವಿನ ಚರ್ಚೆ ಕೇವಲ ಪ್ರಹಸನವಾಗಿ ಪರಿಣಮಿಸಿರುವುದು ಬಿಟ್ಟರೆ, ಇವರ ಬೇಡಿಕೆ ರೈಲ್ವೆ ಮಂಡಳಿ ವರೆಗೂ ತಲುಪಿಲ್ಲ.  ಮಂಗಳೂರು ಟರ್ಮಿನಲ್ ಕೈತಪ್ಪಿರುವ ನಷ್ಟವನ್ನು ಸರಿದೂಗಿಸಲು ಕಾಸರಗೋಡು ಜಿಲ್ಲೆಯಲ್ಲಿ ಹೊಸ ಟರ್ಮಿನಲ್ ಸ್ಥಾಪಿಸದೆ,  ಪಾಲಕ್ಕಾಡ್ ವಿಭಾಗವು ಅಭಿವೃದ್ಧಿಗೊಳ್ಳುವುದೂ ಅಸಾಧ್ಯದ ಮಾತು.   ಪಾಲಕ್ಕಾಡಿನಿಂದ ಮಂಗಳೂರನ್ನು  ವಿಭಜಿಸಿರುವ ನಿರ್ಧಾರವನ್ನು ಮರು ಪರಿಶೀಲಿಸುವ ಬಗ್ಗೆ ಕೇಂದ್ರ ರೈಲ್ವೆ ಸಚಿವಾಲಯ ಯವುದೇ ಮಾತುಕತೆಗೂ ಸಿದ್ಧವಾಗದ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ  ಪರ್ಯಾಯ ಟರ್ಮಿನಲ್ ಸ್ಥಾಪಿಸುವುದೊಂದೇ ಪರಿಹಾರವಾಗಿದೆ. ಮಂಗಳೂರನ್ನು ಪಾಲಕ್ಕಾಡ್ ವಿಭಾಗದಲ್ಲಿ ಉಳಿಸಿಕೊಳ್ಳುವುದು ಅಥವಾ ಹೊಸ ಟರ್ಮಿನಲ್ ಪಡೆಯುವಲ್ಲಿ ವಿಫಲವಾಗಿರುವುದಕ್ಕೆ ರೈಲ್ವೆ ಪ್ರಯಾಣಿಕರ ಸಂಘಟನೆಗಳು ಕೇರಳ ಸರ್ಕಾರ ಹಾಗೂ ಇಲ್ಲಿನ ಸಂಸದರನ್ನು ಟೀಕಿಸುತ್ತಿವೆ.

ಹೊಸ ವ್ಯವಸ್ಥೆ ಜಾರಿಗೆಬರುವುದರಿಂದ ಮಂಗಳೂರು ಪ್ರದೇಶದಲ್ಲಿನ ಎಂಟು ಪ್ಲಾಟ್‍ಫಾರ್ಮ್‍ಗಳು, ಮೂರು ಪಿಟ್ ಲೈನ್‍ಗಳು ಮತ್ತು ಏಳು ಸ್ಟೇಬ್ಲಿಂಗ್ ಲೈನ್‍ಗಳ ಬಳಕೆಯ ಅವಕಾಶವನ್ನು ಪಾಲಕ್ಕಾಡ್ ವಿಭಾಗವು ಕಳೆದುಕೊಳ್ಳಲಿದೆ. 

ಟರ್ಮಿನಲ್‍ಗೆ ಜಾಗ ಲಭ್ಯ:

ಮಂಜೇಶ್ವರ ಅಥವಾ ಕುಂಬಳೆಯಲ್ಲಿ ರೈಲ್ವೆ ಇಲಾಖೆಗೆ ಅಗತ್ಯ ಜಾಗ ಲಭ್ಯವಿದೆ.  ಇಲ್ಲಿ ರೈಲ್ವೆ ಟರ್ಮಿನಲ್ ಸ್ಥಾಪಿಸುವಂತೆ ದೀರ್ಘ ಕಾದಿಂದ ಬೇಡಿಕೆಯಿದ್ದರೂ, ಇಲಾಖೆ ಈ ಬಗ್ಗೆ ಗಮನಹರಿಸಿರಲಿಲ್ಲ.  ಕುಂಬಳೆಯಲ್ಲಿ ಹೆಚ್ಚುವರಿ ಪ್ಲಾಟ್‍ಫಾರ್ಮ್  ನಿರ್ಮಾಣಕ್ಕಾಗಿ ಭೂಮಿ ಲಭ್ಯವಿದೆ. ಕುಂಬಳೆ ರೈಲ್ವೆ ನಿಲ್ದಾಣ ಆಸುಪಾಸು 30ಎಕರೆಗೂ ಹೆಚ್ಚು ಜಾಗ ರೈಲ್ವೇ ಇಲಾಖೆ ಅಧೀನದಲ್ಲಿದ್ದರೂ, ಕೆಲವು ಪ್ರದೇಶ ಈಗಾಗಲೇ ಕಬಳಿಕೆಯಾಗಿರುವುದಾಗಿಯೂ ದೂರು ಕೆಳಿ ಬರುತ್ತಿದೆ.  ಇನ್ನು ಹೊಸಂಗಡಿಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣದ ಬೇಡಿಕೆಯೂ ಮೂಲೆಗುಂಪಾಗಿದೆ.  ಕುಂಬಳೆ ಮತ್ತು ಮಂಜೇಶ್ವರದ ಎರಡೂ ಕೇಂದ್ರಗಳಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದ ಯೋಜನಾ ವರದಿಯನ್ನು ಸಿದ್ಧಪಡಿಸುವುದು ದಕ್ಷಿಣ ರೈಲ್ವೆಯ ಜವಾಬ್ದಾರಿಯಾಗಿದೆ. ಇದರೊಂದಿಗೆ, ಪಾಲಕ್ಕಾಡ್ ಟೌನ್‍ನಲ್ಲಿ ರೈಲು ನಿರ್ವಹಣೆಗಾಗಿ ಪಿಟ್ ಲೈನ್‍ಗಳ ಸಂಖ್ಯೆಯನ್ನು ಹೆಚ್ಚಿಸಲು ಮತ್ತು ಮಲಬಾರ್ ಪ್ರದೇಶಕ್ಕೆ ಹೊಸ ಮೆಮು ಶೆಡ್ ಮಂಜೂರು ಮಾಡುವಂತೆ ಬಲವಾದ ಬೇಡಿಕೆಗಳಿವೆ.

ನಿಲಂಬೂರ್-ಶೊರನೂರ್ ಮಾರ್ಗದ ಬಹುತೇಕ ನಿಲ್ದಾಣಗಳಲ್ಲಿ 16 ಬೋಗಿಗಳಿಗೆ ನಿಲುಗಡೆಗಿರುವ ಪ್ಲಾಟ್‍ಫಾರ್ಮ್‍ಗಳಿವೆ. 24 ಬೋಗಿಗಳಿಗೆ ನಿಲ್ಲುವ ರೀತಿಯಲ್ಲಿ ಫ್ಲಾಟ್‍ಫಾರಂ ಉದ್ದ ವಿಸ್ತರಿಸುವ  ನಿಟ್ಟಿನಲ್ಲಿ ಪಾಲಕ್ಕಾಡ್ ವಿಭಾಗವು ಇನ್ನೂ ಟೆಂಡರ್ ಕರೆದಿಲ್ಲ. ಇದಲ್ಲದೆ, 40 ಎಕರೆ ಭೂಮಿ ಲಭ್ಯವಿರುವ ನಿಲಂಬೂರ್‍ನಲ್ಲಿ ಹೆಚ್ಚುವರಿಯಾಗಿ ಎರಡು ಪ್ಲಾಟ್‍ಫಾರ್ಮ್‍ಗಳನ್ನು ಮಂಜೂರು ಮಾಡುವ ಪ್ರಸ್ತಾವನೆಯನ್ನೂ ದಕ್ಷಿಣ ರೈಲ್ವೆ ಪರಿಗಣಿಸಿಲ್ಲ ಎಂಬ ಆರೋಪ ಪ್ರಯಾಣಿಕರ ಸಂಘಟನೆಗಳಿಂದ ಕೇಳಿಬರುತ್ತಿದೆ. 

ಪಾಲಕ್ಕಾಡ್ ವಿಭಾಗದ ಬೇಡಿಕೆಗಳಿವು:

ಮಂಜೇಶ್ವರ ರೈಲ್ವೆ ನಿಲ್ದಾಣದಲ್ಲಿ ರೈಲುಗಳ ನಿರ್ವಹಣೆಗಾಗಿ ಹೊಸ ಟರ್ಮಿನಲ್ ಸ್ಥಾಪಿಸುವುದು, ಪಾಲಕ್ಕಾಡ್ ನಗರದಲ್ಲಿ ರೈಲು ನಿರ್ವಹಣೆಯ 'ಪಿಟ್ ಲೈನ್'ಗಳ ಸಂಖ್ಯೆಯನ್ನು ಹೆಚ್ಚಿಸುವುದು, ನಿಲಂಬೂರ್, ಕುಂಬಳೆ ಮತ್ತು ಕಣ್ಣೂರ್‍ನಲ್ಲಿ ಹೆಚ್ಚುವರಿ ಪ್ಲಾಟ್‍ಫಾರ್ಮ್‍ಗಳು ಮತ್ತು ಸ್ಟೇಬ್ಲಿಂಗ್ ಲೈನ್‍ಗಳನ್ನು ಅಳವಡಿಸುವುದು ಹಗೂ ನಿಲೇಶ್ವರದಲ್ಲಿ ಹೊಸ ಮೆಮು ಶೆಡ್ ನಿರ್ಮಿಸುವುದು ಪಲಕ್ಕಾಡ್ ವಿಭಾಗದ ಪ್ರಮುಖ ಬೇಡಿಕೆಗಳಾಗಿದೆ. 



ಅಭಿಮತ:

ಪಾಲಕ್ಕಾಡ್ ವಿಭಾಗದಿಂದ ಮಂಗಳೂರನ್ನು ಕೈಬಿಟ್ಟಿರುವುದು ಕೇರಳದ ಪಾಳಿಗೆ ಬಲುದೊಡ್ಡ ನಷ್ಟ. ಕಾಸರಗೋಡು ಜಿಲ್ಲೆಯಲ್ಲಿ ಕುಂಬಳೆ ಅಥವಾ ಮಂಜೇಶ್ವರದಲ್ಲಿ ಟರ್ಮಿನಲ್ ಸ್ಥಾಪನೆಗೆ ಈಗಲಾದರೂ ರೈಲ್ವೆ ಇಲಾಖೆ ಕಾಳಜಿ ವಹಿಸಬೇಕು. ಜತೆಗೆ ಕಾಸರಗೋಡು ನಿಲ್ದಾಣದಲ್ಲಿ ಫ್ಲ್ಯಾಟ್‍ಗಳ ಸಂಖ್ಯೆಯನ್ನೂ ಹೆಚ್ಚಿಸಬೇಕಾಗಿದೆ. 

ಆರ್. ಪ್ರಶಾಂತ್, ಅಧ್ಯಕ್ಷ

ಕಾಸರಗೋಡು ಜಿಲ್ಲಾ ರೈಲ್ವೆ ಪ್ರಯಾಣಿಕರ ಸಂಘಟನೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries