HEALTH TIPS

ನವರಾತ್ರಿ-ಸರಸ್ವತೀ ಪೂಜೆಗೂ ರಜೆ ಘೋಷಿಸುವಂತೆ ಬ್ರಾಹ್ಮಣ ಸಭಾ ಆಗ್ರಹ

ಕಾಸರಗೋಡು: ನವರಾತ್ರಿ ಉತ್ಸವ ಅಂಗವಾಗಿ ನಡೆಯುವ ಸರಸ್ವತೀ ಪೂಜೆಯ ದಿನವಾದ ಅ. 19ರಂದು ಶಿಕ್ಷಣ ಸಂಸ್ಥೆಗಳಿಗೆ ರಜೆ ಸಾರುಂತೆ ಬ್ರಾಹ್ಮಣ ಮಹಾಸಭಾ ಕಾಸರಗೋಡು ಘಟಕ ಕೇರಳ ಸರ್ಕಾರವನ್ನು ಆಗ್ರಹಿಸಿದೆ.

ಈಗಾಗಲೇ ಅ. 20 ಹಾಗೂ 21 ರಂದು ವಿಜಯ ದಶಮಿ, ವಿದ್ಯಾರಂಭ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆಯಾಗಿದ್ದು, ಸರಸ್ವತೀ ಪೂಜೆಗಾಗಿ ಅ. 18ರ ರಾತ್ರಿ ಪುಸ್ತಕಗಳನ್ನು ಪೂಜೆಗೆ ಇರಿಸಬೇಕಾಗಿರುವುದರಿಂದ 19ರಂದು ತರಗತಿ ನಡೆಸಿದಲ್ಲಿ ವಿದ್ಯಾರ್ಥಿಗಳಿಗೆ ಸಮಸ್ಯೆ ಎದುರಾಗಲಿದೆ. ಈ ನಿಟ್ಟಿನಲ್ಲಿ ಅ. 19ರಂದೂ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸುವಂತೆ ಕೇರಳ ಮುಖ್ಯಮಂತ್ರಿ, ಶಿಕ್ಷಣ ಸಚಿವ ಹಗೂ ಸಂಬಂಧಪಟ್ಟ ಇಲಾಖೆಯನ್ನು ಕಾಸರಗೋಡು ಬ್ರಾಹ್ಮಣಮಹಾ ಸಭಾ ಪರವಾಗಿ ಸಂಚಲಕ ಜಯನಾರಯಣ ತಾಯನ್ನೂರ್ ಮನವಿ ಮೂಲಕ ಒತ್ತಾಯಿಸಿದ್ದಾರೆ. ಕಳೆದ ವರ್ಷವೂ ಇದೇ ರೀತಿ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಸರಸ್ವತೀ ಪೂಜೆಗಾಗಿ ಪುಸ್ತಕ ಇಡಲಾಗುವ ಮರುದಿನ ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಲಾಗಿತ್ತು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries