ಮಂಜೇಶ್ವರ: ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ನಿವಾಸ 'ಗಿಳಿವಿಂಡು'ಗೆ ಕನ್ನಡ ಸಂಸ್ಕøತಿ ಇಲಾಖೆ ಮೈಸೂರು ವಿಭಾಗ ಜಂಟಿ ನಿರ್ದೇಶಕಿ ನಿರ್ಮಲಾ ಮಠಪತಿ ಭೇಟಿ ನಿಡಿದರು. ಕಾರ್ಯ ಚಟುವಟಿಕೆ ಹಾಗೂ ಭವಿಷ್ಯದ ಕಾರ್ಯ ಚಟುವಟಿಗಳ ಕುರಿತು ಮಾಹಿತಿ ಪಡೆದುಕೊಂಡರು.
ರಾಷ್ಟ್ರಕವಿ ಗೋವಿಂದ ಪೈಗಳನ್ನು ಹಾಗೂ ಅವರ ಸಾಹಿತ್ಯದ ಮೌಲ್ಯವನ್ನು ಮುಂದಿನ ತಲೆಮಾರಿಗೆ ತಿಳಿಸುವ ಕೆಲಸವಾಗಬೇಕು, ಅವರ ಸಾಹಿತ್ಯ ಇತರ ಭಾಷೆಗಳಿಗೆ ಅನುವಾದಗೊಳ್ಳಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಶ್ರಮಿಸುವಂತೆ ಸೂಚಿಸಿ, ಸರ್ಕಾರದ ಕಡೆಯಿಂದ ಇಲಾಖೆಯ ಮೂಲಕ ಸಂಪೂರ್ಣ ಸಹಕಾರದ ಭರವಸೆ ನೀಡಿದರು.
ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜೊತೆಗಿದ್ದರು.
ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಗೆ ಆಗಮಿಸಿದ ನಿರ್ಮಲಾ ಮಠಪತಿ ಅವರನ್ನು ಮಂಜೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸೈಫುಲ್ಲಾ ತಙಳ್, ಟ್ರಸ್ಟಿಗಳಾದ ಡಾ ಉದಯ್ ಕುಮಾರ ಇರ್ವತ್ತೂರು, ಸುಭಾಶ್ಚಂದ್ರ ಕಣ್ವತೀರ್ಥ, ಗಮಕ ಪರಿಷತ್ ಅಧ್ಯಕ್ಷ ಶಂಕರ ನಾರಾಯಣ ಭಟ್ ಉಪಸ್ಥಿತಿರಿದ್ದರು. ನಿರ್ಮಲಾ ಮಠಪತಿ ಅವರನ್ನು ಶಾಲು ಹೊದಿಸಿ, ಪುಸ್ತಕ ನೀಡಿ ಗೌರವಿಸಲಾಯಿತು.



