HEALTH TIPS

ಗಡಿನಾಡ ಕನ್ನಡಕ್ಕೆ ಹಿರಿಯರ ಕೊಡುಗೆ ಅನನ್ಯ: ತಾರನಾಥ ರೈ ಕಡಾರುಬೀಡು

ಬದಿಯಡ್ಕ: ಗಡಿನಾಡಿನಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕøತಿಯ ಬೆಳವಣಿಗೆಯಲ್ಲಿ ಹಿರಿಯ ಕನ್ನಡಿಗರ ಕೊಡುಗೆ ಅನನ್ಯವಾಗಿದೆ. ಅವರ ಮಾರ್ಗದರ್ಶನ, ಅನುಭವ ಮತ್ತು ಸಲಹೆಗಳನ್ನು ಪಡೆದುಕೊಂಡು ಮುಂದಿನ ಪೀಳಿಗೆಯಲ್ಲಿ ಕನ್ನಡದ ಕೆಲಸವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸಬೇಕು ಎಂದು ತಾರನಾಥ ರೈ ಕಡಾರುಬೀಡು ಹೇಳಿದರು. 


ಅವರು ‘ಕನ್ನಡ ಶಾಲೆ ಉಳಿಸಿ ಬೆಳೆಸಿ’ ಅಭಿಯಾನದ ಅಂಗವಾಗಿ ಬದಿಯಡ್ಕ ತುಳು ಭವನದಲ್ಲಿ ಆಯೋಜಿಸಿದ್ದ ಹಿರಿಯ ಕನ್ನಡಿಗರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗಡಿನಾಡಿನಲ್ಲಿ ಕನ್ನಡ ಶಾಲೆಗಳು ಉಳಿಯಬೇಕಾದರೆ ಮೊದಲು ಕನ್ನಡಿಗರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳುಹಿಸಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಕನ್ನಡ ಶಾಲೆಗಳ ಅಭಿವೃದ್ಧಿಗೆ ಅಗತ್ಯವಾದ ಪೂರಕ ವ್ಯವಸ್ಥೆಗಳನ್ನು ಆಯಾ ಪ್ರದೇಶದ ಜನರು ಮುಂದೆ ಬಂದು ಕಲ್ಪಿಸಬೇಕು. ಈ ಕಾರ್ಯದಲ್ಲಿ ಹಿರಿಯ ಕನ್ನಡಿಗರ ಅನುಭವ ಮತ್ತು ಸಲಹೆಗಳನ್ನು ಪಡೆದುಕೊಂಡು ಯುವಜನತೆ ಮುನ್ನಡೆಯಬೇಕು ಎಂದು ಅವರು ಹೇಳಿದರು.

ಕನ್ನಡ ಭಾಷೆ ಮತ್ತು ಕನ್ನಡ ಶಾಲೆಗಳ ಉಳಿವಿಗೆ ಕೇವಲ ಸರ್ಕಾರದ ಪ್ರಯತ್ನಗಳು ಮಾತ್ರ ಸಾಕಾಗುವುದಿಲ್ಲ. ಪೆÇೀಷಕರು, ಶಿಕ್ಷಕರು, ಸಂಘ-ಸಂಸ್ಥೆಗಳು, ಕನ್ನಡಾಭಿಮಾನಿಗಳು ಹಾಗೂ ಸ್ಥಳೀಯ ಸಮುದಾಯ ಒಗ್ಗೂಡಿ ಕಾರ್ಯನಿರ್ವಹಿಸಿದಾಗ ಮಾತ್ರ ಕನ್ನಡ ಶಾಲೆಗಳನ್ನು ಬಲಪಡಿಸಲು ಸಾಧ್ಯ. ಮಕ್ಕಳಿಗೆ ಕನ್ನಡ ಭಾಷೆಯ ಮಹತ್ವವನ್ನು ತಿಳಿಸಿ, ಕನ್ನಡದೊಂದಿಗೆ ಭಾವನಾತ್ಮಕ ನಂಟು ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ  ಉನೈಸ್ ಪೆರಾಜೆ ಮಾತನಾಡಿ, ಗಡಿನಾಡಿನಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವಲ್ಲಿ ಹಿರಿಯರು ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು. ಹಿರಿಯರ ಅನುಭವವನ್ನು ದಾಖಲಿಸಿಕೊಂಡು ಮುಂದಿನ ಪೀಳಿಗೆಗೆ ತಲುಪಿಸುವ ಅಗತ್ಯವಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಅಧ್ಯಾಪಕ ಈಶ್ವರ ಭಟ್ ಮಾಸ್ಟರ್, ಹಿರಿಯ ದಸ್ತಾವೇಜು ಬರಹಗಾರ ಲಕ್ಷ್ಮಣ ಪ್ರಭು, ಬದಿಯಡ್ಕ ಮಾಜಿ ಪಂಚಾಯತ್ ಸದಸ್ಯ ಈಶ್ವರ್ ಮಾಸ್ಟರ್, , ಗೋಪಾಲ ಕೃಷ್ಣ ಭಟ್, ಪ್ರಸಾದ್ ಭಟ್ ಸೇರಿದಂತೆ ಹಿರಿಯ ಕನ್ನಡಿಗರು ಭಾಗವಹಿಸಿ ಕನ್ನಡ ಶಾಲೆಗಳ ಸ್ಥಿತಿ, ವಿದ್ಯಾರ್ಥಿಗಳ ಸಂಖ್ಯೆ, ಪೆÇೀಷಕರ ಮನೋಭಾವ, ಶಿಕ್ಷಕರ ಪಾತ್ರ ಹಾಗೂ ಕನ್ನಡ ಭಾಷೆಯ ಬೆಳವಣಿಗೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಸಂವಾದದಲ್ಲಿ ಗಡಿನಾಡಿನ ಕನ್ನಡ ಶಾಲೆಗಳ ಪ್ರಸ್ತುತ ಸ್ಥಿತಿ, ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸುವ ಕ್ರಮಗಳು, ಕನ್ನಡ ಮಾಧ್ಯಮ ಶಿಕ್ಷಣದ ಮಹತ್ವ ಹಾಗೂ ಕನ್ನಡ ಭಾಷೆಯ ಉಳಿವಿಗಾಗಿ ಸಮಾಜದ ಜವಾಬ್ದಾರಿ ಕುರಿತು ಚರ್ಚೆ ನಡೆಯಿತು. ಹಿರಿಯರ ಅನುಭವ ಮತ್ತು ಸಲಹೆಗಳು ಮುಂದಿನ ದಿನಗಳಲ್ಲಿ ಕನ್ನಡ ಶಾಲೆ ಉಳಿಸಿ ಬೆಳೆಸುವ ಅಭಿಯಾನಕ್ಕೆ ಮಾರ್ಗದರ್ಶಿಯಾಗಲಿ ಎಂಬ ಆಶಯ ವ್ಯಕ್ತವಾಯಿತು.

ಕಾರ್ಯಕ್ರಮದ ಸಂಚಾಲಕ ಅನಂತ ಕುಮಾರ್ ಬರ್ಲಾ ಸ್ವಾಗತಿಸಿದರು. ವಸಂತ ಬಾರಡ್ಕ ವಂದಿಸಿದರು. ಕನ್ನಡಾಭಿಮಾನಿಗಳು, ಹಿರಿಯ ಕನ್ನಡಿಗರು ಹಾಗೂ ಸ್ಥಳೀಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries