ಕಾಸರಗೋಡು: 'ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್' (ಪಿ.ಎಂ ಪೋಷಣ್) ಯೋಜನೆ ಎಂದು ಕರೆಯಲ್ಪಡುವ ಶಾಲಾ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಸಾಮಾಜಿಕ ಲೆಕ್ಕಪರಿಶೋಧನೆಗೆ ಸಂಬಂಧಿಸಿದಂತೆ, ಕಾಸರಗೋಡು ಶೈಕ್ಷಣಿಕ ಉಪ-ಜಿಲ್ಲಾ ಮಟ್ಟದ ಸಾರ್ವಜನಿಕ ವಿಚಾರಣೆಯನ್ನು ನಡೆಸಲಾಯಿತು. ಕಾಸರಗೋಡು ಶಾಸಕ ಕಲ್ಲಟ್ರ ಮಹಿನ್ ಸಮಾರಂಭ ಉದ್ಘಾಟಿಸಿದರು. ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿ. ಬಾಲನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಲೆಕ್ಕಪರಿಶೋಧನೆಗೆ ಸಂಬಂಧಿಸಿದ ಚರ್ಚೆಯಲ್ಲಿ, ಕುಟ್ಟಿಕೋಲ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಕೆ.ಶೋಭನಕುಮಾರಿ, ಮುಳಿಯಾರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಿ.ಕೆ. ಪುಷ್ಪಕುಮಾರಿ, ನಗರಸಭಾ ಸದಸ್ಯ ಸಲೀಂ ನೆಚ್ಚಿಪಡ್ಪು, ಕಾರಡುಕ್ಕ ಬ್ಲಾಕ್ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಗಂಧಿನಿ, ಶ್ರೀಮತಿ. ಪ್ರಿಯಾ, ಶೋಭಾನಾ ಬಾಲಚಂದ್ರನ್, ಎಇಒ ಶಶಿಧರ ಎಂ, ಉಷಾ ಇ.ಪಿ., ಕಿಲಾ ಜಿಲ್ಲಾ ಸಂಯೋಜಕ ವಿ.ಕೆ. ರಾಮಚಂದ್ರನ್, ಎ.ವಿ. ಶ್ರೀಜಿತ್, ಕೃಷಿ ಅಧಿಕಾರಿ ಗಣೇಶನ್, ಕೆ.ಪಿ. ಶಶಿಧರನ್, ಮತ್ತು ವಿ.ದಾಮೋದರನ್ ಉಪಸ್ಥಿತರಿದ್ದರು.

